Home News Bihar: ಏಳು ಜನ್ಮಕ್ಕೂ ನಿನ್ನ ಜೊತೆಯಲ್ಲಿರುತ್ತೇನೆ ಎಂದ ಗಂಡ, ಕರೆಂಟ್ ಶಾಕ್ ಕೊಟ್ಟು ಹೆಂಡತಿಯ ಸಾಯಿಸಿದ!...

Bihar: ಏಳು ಜನ್ಮಕ್ಕೂ ನಿನ್ನ ಜೊತೆಯಲ್ಲಿರುತ್ತೇನೆ ಎಂದ ಗಂಡ, ಕರೆಂಟ್ ಶಾಕ್ ಕೊಟ್ಟು ಹೆಂಡತಿಯ ಸಾಯಿಸಿದ! ಕಾರಣ ಇಷ್ಟೇ!!!

Hindu neighbor gifts plot of land

Hindu neighbour gifts land to Muslim journalist

Bihar: ಏಳು ಜನ್ಮಕ್ಕೂ ನಿನ್ನ ಜೊತೆಯಲ್ಲಿರುತ್ತೇನೆ ಎಂದ ಗಂಡ, ಕರೆಂಟ್ ಶಾಕ್ ಕೊಟ್ಟು ಹೆಂಡತಿಯನ್ನು ಸಾಯಿಸಿದ (murder) ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಕಾರಣ ಏನೆಂದು ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ!!!.

ಪ್ರಿಯಾಂಕಾ ದೇವಿ (23) ಎಂಬ ಮಹಿಳೆ ಪೂರ್ವ ಚಂಪಾರಣ್ ಜಿಲ್ಲೆಯ ಸಂಗ್ರಾಮಪುರ ಪುರಂದರಪುರ ಗ್ರಾಮದ ಶ್ಯಾಮ್ ಲಾಲ್ ಶಾ ಎಂಬಾತನನ್ನು ಮದುವೆಯಾಗಿದ್ದರು (marriage). ಏಳು ಜನ್ಮಕ್ಕೂ ಜೊತೆಗಿರುತ್ತೇನೆ ಎಂದಾತ ಮದುವೆಯಾದ ಮೇಲೆ, ನೀನು ಕಪ್ಪಗಿದ್ದೀಯ ಎಂದು ಕಿರುಕುಳ ಕೊಡಲಾರಂಭಿಸಿದ್ದಾನೆ.

ಪದೇ ಪದೇ ಕಪ್ಪಗಿದ್ದೀಯ ಎಂದೆನ್ನುತ್ತ ಮಾನಸಿಕ ಹಿಂಸೆ ನೀಡಲಾರಂಭಿಸಿದ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಕೋಪಗೊಂಡ ಪತಿ ಶ್ಯಾಮ್ ಲಾಲ್ ಪತ್ನಿಗೆ ವಿದ್ಯುತ್ ಶಾಕ್ ನೀಡಿದ್ದಾನೆ. ಘಟನೆಯಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ (death) ಎಂದು ತಿಳಿದುಬಂದಿದೆ. ಇದಿಷ್ಟೇ ಅಲ್ಲದೆ, ಆತ ಪತ್ನಿಯನ್ನು ಕೊಂದು ಬಳಿಕ ಶವವನ್ನು (dead body) ಐಸ್ ಬಾಕ್ಸ್ ನಲ್ಲಿ ಬಚ್ಚಿಡಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರೂ ಆಗ್ರಹಿಸಿದ್ದಾರೆ.