Home News Newborn Sindhuri: ಬಿಹಾರ; ನವಜಾತ ಶಿಶುವಿಗೆ ಸಿಂಧೂರಿ ನಾಮಕರಣ!

Newborn Sindhuri: ಬಿಹಾರ; ನವಜಾತ ಶಿಶುವಿಗೆ ಸಿಂಧೂರಿ ನಾಮಕರಣ!

Hindu neighbor gifts plot of land

Hindu neighbour gifts land to Muslim journalist

Newborn Sindhuri: ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಅಪರೇಷನ್‌ ಸಿಂಧೂರ ನಡೆಸಿದ ಬೆನ್ನಲ್ಲೇ ಬಿಹಾರದ ದಂಪತಿ ತಮ್ಮ ನವಜಾತ ಮಗುವಿಗೆ ಸಿಂಧೂರಿ ಎಂದು ನಾಮಕರಣ ಮಾಡಲಾಗಿದೆ. ಬಿಹಾರದ ಆಸ್ಪತ್ರೆಯೊಂದರಲ್ಲಿ ಕುಂದನ್‌ ಕುಮಾರ್‌ ದಂಪತಿಗೆ ಹೆಣ್ಣುಮಗು ಜನಿಸಿದ್ದು, ಸಿಂಧೂರಿ ಎಂದು ಹೆಸರಿಡಲಾಗಿದೆ.

ಮಗು ಹುಟ್ಟಿದ ಒಂದು ಗಂಟೆಯ ಒಳಗೆ ನಾಮಕರಣ ಮಾಡಲಾಗಿದೆ.

ಮಗುವಿನ ಚಿಕ್ಕಮ್ಮ ಅವರು ಮಾತನಾಡಿ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಭಾರತ ನೀಡಿರುವ ಹೆಸರನ್ನು ಮಗುವಿಗೆ ಇಟ್ಟಿದ್ದಕ್ಕೆ ಹೆಮ್ಮೆ ಇದೆ. ಸಿಂಧೂರಿ ತನ್ನ ಹೆಸರಿನ ಮಹತ್ವವನ್ನು ಆಕೆ ದೊಡ್ಡವಳದಾಗ ಪೂರ್ಣ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಹೇಳಿದ್ದಾರೆ.