Home News Chaitra Kundapur: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಕೈನಲ್ಲಿ ಮಹೆಂದಿ...

Chaitra Kundapur: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಕೈನಲ್ಲಿ ಮಹೆಂದಿ ರಂಗು!

Hindu neighbor gifts plot of land

Hindu neighbour gifts land to Muslim journalist

Chaitra Kundapur: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಮನೆಯಲ್ಲಿ ಮದುವೆ ಸಂಭ್ರಮ ಕಳೆ. ಮೆಹಂದಿ ಕಾರ್ಯಕ್ರಮ ನಡೆದಿದೆ. ಮೇ. 9 ರಂದು ಚೈತ್ರಾ ಅವರು ತಾವು ಪ್ರೀತಿ ಮಾಡಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಶುಕ್ರವಾರ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಹಂದಿ ಕುರಿತು ಚೈತ್ರಾ ಕುಂದಾಪುರ ಅವರು ಈ ರೀತಿ ಪೋಸ್ಟ್‌ ಮಾಡಿದ್ದಾರೆ.

ಮದುವೆಯ ಮೆಹಂದಿ

ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿಸಲು ಅವರ ಕೈ, ಕಾಲು, ಹಾಗೆಯೇ ಮುಖದ ಮೇಲೆ ಪಾಷಾಣಬಣ್ಣ (ವಿವಿಧ ಬಣ್ಣದ ಕಲ್ಲುಗಳಿಂದ ತಯಾರಿಸಿದ ಬಣ್ಣ) ಮತ್ತು ಪುಷ್ಪಬಣ್ಣ (ವಿವಿಧ ಬಣ್ಣದ ಹೂವುಗಳಿಂದ ತಯಾರಿಸಿದ ಬಣ್ಣ) ಗಳ ಸಹಾಯದಿಂದ ಎಲೆ-ಹೂವು ಮುಂತಾದ ಆಕಾರಗಳನ್ನು ಬಿಡಿಸಲಾಗಿತ್ತು. ಈ ಬಣ್ಣಗಳಲ್ಲಿ ವಿವಿಧ ದಿವ್ಯ ಔಷಧೀಯ ವನಸ್ಪತಿಗಳ ರಸಗಳನ್ನು ಬೆರೆಸಲಾಗಿತ್ತು. ಈ ಸುಗಂಧಿ ಮಿಶ್ರಣಕ್ಕೆ ‘ಪತ್ರಾವಲೀ’ ಎಂದು ಹೇಳುತ್ತಿದ್ದರು. (ಆಧಾರ : ‘ಭುಶುಂಡೀ ರಾಮಾಯಣ’ ಮತ್ತು ‘ಶ್ರೀನಾಥಮುನಿ ರಾಮಾಯಣ’)

ದ್ವಾಪರಯುಗದಲ್ಲಿಯೂ ಸಿಂಗಾರಕ್ಕಾಗಿ ‘ಪತ್ರಾವಲೀ’ಯನ್ನು ಉಪಯೋಗಿಸಲಾಗುತ್ತಿತ್ತು. ‘ತೋಕ’ ಎಂಬ ಹೆಸರಿನ ಶ್ರೀಕೃಷ್ಣನ ಮಿತ್ರನು ‘ಪತ್ರಾವಲೀ’ಯಿಂದ ಶ್ರೀಕೃಷ್ಣ ನನ್ನು ಸಿಂಗರಿಸುತ್ತಿದ್ದನು’ ಎಂದು ‘ಗರ್ಗಸಂಹಿತೆ’, ‘ಶ್ರೀಮದ್ಭಾಗವತ’, ‘ಶ್ರೀಕೃಷ್ಣಕರ್ಣಾಮೃತ’ ಮುಂತಾದ ಶ್ರೀಕೃಷ್ಣನ ಬಗೆಗಿನ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಗೋವುಗಳನ್ನೂ ‘ಪತ್ರಾವಲಿ’ಯಿಂದ ಸಿಂಗರಿಸಲಾಗುತ್ತಿತ್ತು.

ಮದರಂಗಿ ಕೇವಲ ಬಣ್ಣವಲ್ಲ ಅದು ಸಂಸ್ಕೃತಿಯ ಕೈಗನ್ನಡಿ