Home latest ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ಪುಷ್-ಅಪ್ ಮಾಡಿ ರಾಹುಲ್, ಡಿಕೆಶಿ ಶಕ್ತಿ ಪ್ರದರ್ಶನ |...

ಭಾರತ್ ಜೋಡೋ ಯಾತ್ರೆಯಲ್ಲಿ ರಸ್ತೆ ಮೇಲೆ ಪುಷ್-ಅಪ್ ಮಾಡಿ ರಾಹುಲ್, ಡಿಕೆಶಿ ಶಕ್ತಿ ಪ್ರದರ್ಶನ | ಬಾಲಕನೋರ್ವನಿಗೆ ಸ್ಪರ್ಧೆ ನೀಡಿದ ನಾಯಕರು !

Hindu neighbor gifts plot of land

Hindu neighbour gifts land to Muslim journalist

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ನಡುರಸ್ತೆಯಲ್ಲಿ ಭುಜಬಲ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅವರಿಬ್ಬರೂ ಪುಷ್-ಅಪ್ ಮಾಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಸ್ ರಾಹುಲ್ ಗಾಂಧಿ ಮತ್ತು ಶಿಷ್ಯ ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಹಾಗೂ ಜತೆಗೆ ಚಿಕ್ಕ ಬಾಲಕನೋರ್ವ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ರಸ್ತೆ ಮಧ್ಯೆ ಪುಷ್-ಅಪ್ಸ್ ಮಾಡಿದ್ದಾರೆ. ಈ ಫೋಟೋವನ್ನು ರಣದೀಪ್ ಸುರ್ಜೆವಾಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ, ‘ ಒಂದು ಪೂರ್ತಿ ಮತ್ತೆ ಎರಡು ಅರ್ಧಂಬರ್ಧ ಪುಷ್-ಅಪ್‍ಗಳು’ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಮೊನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡು ರಾಹುಲ್ ಗಾಂಧಿ ರಸ್ತೆಯಲ್ಲಿ ಓಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಪಕ್ಷದ ಧ್ವಜ ಹಿಡಿದುಕೊಂಡು ಡಿ.ಕೆ. ಶಿವಕುಮಾರ್ ಯಾತ್ರೆಯನ್ನು ಓಡಿದ್ದರು. ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಭಾರತ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ ಸಂದರ್ಭ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ತಾಯಿ ಸೋನಿಯಾ ಗಾಂಧಿಯವರ ಶೂಲೇಸ್‍ಗಳನ್ನು ರಾಹುಲ್ ಗಾಂಧಿ ಕಟ್ಟುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಡಿಗೆಯ ಮೂಲಕ ಶುರುವಾದ ಭಾರತ ಜೋಡೋ ಯಾತ್ರೆ ಓಡುವ ಹಂತಕ್ಕೆ ತಲುಪಿದೆ. ಈ ಓಟ ಕಾಂಗ್ರೆಸ್ ಅನ್ನು ದಡ ಸೇರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.