Home News ಬೆಸ್ಟ್‌ ಸೆಕೆಂಡ್‌ ಹ್ಯಾಂಡ್‌ ಕಾರುಗಳಿವು | ಅತಿ ಕಡಿಮೆ ಬೆಲೆಯಲ್ಲಿ!

ಬೆಸ್ಟ್‌ ಸೆಕೆಂಡ್‌ ಹ್ಯಾಂಡ್‌ ಕಾರುಗಳಿವು | ಅತಿ ಕಡಿಮೆ ಬೆಲೆಯಲ್ಲಿ!

Hindu neighbor gifts plot of land

Hindu neighbour gifts land to Muslim journalist

ದೊಡ್ಡ ಕಾರಿಗಾಗಿ ಹೆಚ್ಚಿನ ಹಣ ವ್ಯಯಿಸಲು ಹೆಚ್ಚಿನ ಗ್ರಾಹಕರು ಸಿದ್ಧರಿರುವುದಿಲ್ಲ. ಕಡಿಮೆ ದರಕ್ಕೆ ಕಾರು ಬೇಕು ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಹಾಗಾಗಿ ಭಾರತದಲ್ಲಿ ಸಣ್ಣ ಕಾರುಗಳು ಯಾವಾಗಲೂ ಉತ್ತಮ ಬೇಡಿಕೆಯನ್ನು ಹೊಂದಿವೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಗ್ರಾಹಕರು ಇಂತಹ ಕಾರಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ವಿಶೇಷವಾಗಿ, ಮಧ್ಯಮ ವರ್ಗದ ಜನರು ಕೈಗೆಟುಕುವ ಬೆಲೆಯಲ್ಲಿ ಹೊಸ ಕಾರನ್ನು ಖರೀದಿಸಬಹುದು. ಅಲ್ಲದೆ, ಇವುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು.

ಸಣ್ಣ ಕಾರುಗಳಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಇರುವುದಿಲ್ಲ, ಅಲ್ಲದೆ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ತುಂಬಾ ಸುಲಭವಾಗಿ ಓಡಿಸಬಹುದು. ಸಣ್ಣ ಹ್ಯಾಚ್‌ಬ್ಯಾಕ್ ಗಳ ಮೈಲೇಜ್ ಅದ್ಭುತವಾಗಿರುತ್ತದೆ. ಐದು ಪ್ರಮುಖ ಸಣ್ಣ ಕಾರುಗಳು ಭಾರತದ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯನ್ನು ಆಳುತ್ತಿವೆ ಎಂದರೆ ತಪ್ಪಾಗಲಾರದು. ನೀವೆನಾದರೂ ಸಣ್ಣ ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಹಾಗಾದರೆ ಈ ಸಣ್ಣ ಕಾರುಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ಮಾರುತಿ ಸುಜುಕಿ ಸ್ವಿಫ್ಟ್ ಎಲ್‌ಎಕ್ಸ್ಐ:- ಸ್ವಿಫ್ಟ್ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಉತ್ತಮ ಗ್ರಾಹಕರನ್ನು ಹೊಂದಿದ್ದು, ಇದರ ಎಲ್‌ಎಕ್ಸ್‌ಐ ವೆರಿಯಂಟ್‌ಗೆ ಬೇಡಿಕೆಯು ಕೊಂಚ ಹೆಚ್ಚೇ ಎಂದು ಹೇಳಬಹುದು. ಈ ಕಾರಿನ ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯ ಹಾಗೂ ಪ್ರೀಮಿಯಂ ಫೀಚರ್ ಗಳನ್ನೂ ಖರೀದಿದಾದರು ಇಷ್ಟಪಡುತ್ತಾರೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಲ್‌ಎಕ್ಸ್ಐ ಆರಂಭಿಕ ಬೆಲೆ ಎಕ್ಸ್ ಶೋರೂಂ ನಲ್ಲಿ 5.91 ಲಕ್ಷ ರೂ.ಇದೆ. ಸ್ವಿಫ್ಟ್ ಕಾರು ಏರ್‌ಬ್ಯಾಗ್‌ಗಳು, ದೊಡ್ಡದಾದ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ನಿರ್ವಹಣೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ನೀಡುತ್ತಿದೆ. ಪೆಟ್ರೋಲ್ ಆವೃತ್ತಿಯು 22.38 kmpl ಮೈಲೇಜ್ ನೀಡಿದರೆ, CNG ಆವೃತ್ತಿಯು 30.9 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಪಡೆದಿದ್ದು, ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಆಲ್ಲೊ 800:- ಆಲ್ಲೊ 800 ಚಿಕ್ಕ ಕುಟುಂಬಗಳಿಗೆ ಸೂಕ್ತವಾದ ಹ್ಯಾಚ್‌ಲ್ಯಾಕ್. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಆಲ್ಲೊ 800 ಹೊಸ ಕಾರಿನ ಬೆಲೆ ರೂ.4 ಲಕ್ಷಕ್ಕಿಂತ ಕಡಿಮೆ ಇದ್ದು, ಸೆಕೆಂಡ್ ಹ್ಯಾಂಡ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಈ ಕಾರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದಿದೆ. ಇದರ ಪೆಟ್ರೋಲ್ ಆವೃತ್ತಿಯು 22 kmpl ಮೈಲೇಜ್ ನೀಡಲಿದ್ದು, CNG ಆವೃತ್ತಿಯು 31.5 kmpl ವರೆಗೆ ಮೈಲೇಜ್ ಕೊಡುವ ಸಾಮರ್ಥ್ಯವನ್ನು ಹೊಂದಿದೆ.

ಹುಂಡೈ ಗ್ರಾಂಡ್ ಐ10 ನಿಯೋಸ್:- ದೇಶದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಅತ್ಯಂತ ಫೇಮಸ್ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಈ ಗ್ರಾಂಡ್ i10 ನಿಯಾಸ್ ಕಡಿಮೆ ತೂಕ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇನ್ನು ಕಾರಿನಲ್ಲಿ ಪವರ್ ಸ್ಟೀರಿಂಗ್, ಎಬಿಎಸ್, ಏರ್ ಬ್ಯಾಗ್ ನಂತಹ ಇತರೆ ವೈಶಿಷ್ಟ್ಯಗಳು ಇವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡು ಆಯ್ಕೆಗಳಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಗ್ರಾಹಕರಿಗೆ ಲಭ್ಯವಿದ್ದು, ಇದರ ಆರಂಭಿಕ ಬೆಲೆಯು ರೂ.5.43 ಲಕ್ಷ ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್:- ವಿಶ್ವಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರು ಮಾದರಿಗಳಲ್ಲಿ ವ್ಯಾಗನ್ ಆರ್ ಅಗ್ರಸ್ಥಾನದಲ್ಲಿದೆ. ಹೆಚ್ಚು ಸ್ಥಳಾವಕಾಶ, ಕೈಗೆಟಕುವ ಬೆಲೆ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಪೆಟ್ರೋಲ್ ಆವೃತ್ತಿಯು ಗರಿಷ್ಠ 23.5 kmpl ಮೈಲೇಜ್ ನೀಡುವ ಸಾಮರ್ಥ ಹೊಂದಿದೆ ಹಾಗೂ CNG ಆವೃತ್ತಿಯು ಗರಿಷ್ಠ 34 kmpl ಮೈಲೇಜ್ ನೀಡಲಿದೆ. ಈ ಹೊಸ ಕಾರಿನ ಬೆಲೆ ರೂ.5.47 ಲಕ್ಷದಿಂದ ಆರಂಭವಾಗಲಿದೆ.

ರೆನಾಲ್ಡ್ ಕ್ವಿಡ್:- ಈ ಹ್ಯಾಚ್‌ಬ್ಯಾಕ್ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದು ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಅಂದರೆ ರೂ.4.70 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸೆಕೆಂಡ್ ಹ್ಯಾಂಡ್ ನಲ್ಲಿ ಈ ಹ್ಯಾಚ್‌ಬ್ಯಾಕ್ ಅನ್ನು ಖರೀದಿಸಿದರೆ ಮತ್ತಷ್ಟು ಕಡಿಮೆ ಬೆಲೆಗೆ ದೊರೆಯಲಿದೆ. ಐದು ಜನರು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಈ ರೆನಾಲ್ಡ್ ಕ್ವಿಡ್ 799 ಯಿಂದ 999 ಸಿಸಿ ಎಂಜಿನ್ ಹೊಂದಿದ್ದು, 20.7 ರಿಂದ 22 kmpl (ಪೆಟ್ರೋಲ್) ಮೈಲೇಜ್ ನೀಡಲಿದೆ.