Home News Kambala Project: ತುಳುನಾಡಿನ ಕಂಬಳ ರಾಜ್ಯ ರಾಜಧಾನಿಯಲ್ಲಿ! ಕರಾವಳಿ ಕಂಬಳ ಉತ್ಸವ ಆಯೋಜನೆ ವಿವರ ಇಲ್ಲಿದೆ!

Kambala Project: ತುಳುನಾಡಿನ ಕಂಬಳ ರಾಜ್ಯ ರಾಜಧಾನಿಯಲ್ಲಿ! ಕರಾವಳಿ ಕಂಬಳ ಉತ್ಸವ ಆಯೋಜನೆ ವಿವರ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

Kambala Project: ಬೆಂಗಳೂರಿನ ಜನತೆಗೆ ಕರಾವಳಿಯ ಗ್ರಾಮೀಣ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳುವ ಕಾಲ ಹತ್ತಿರದಲ್ಲಿ ಇದೆ. ಐಟಿ ಬಿಟಿ ಜನರಿಗೆ ಕೆಸರು ಗದ್ದೆಯಲ್ಲಿ ನಡೆಯುವ ಕೋಣಗಳ ಓಟದ ಸ್ಪರ್ಧೆ(Kambala Project) ಕಾಣುವ ಭಾಗ್ಯ ಲಭಿಸಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ʼಬೆಂಗಳೂರು ಕಂಬಳ ನಮ್ಮ ಕಂಬಳʼ ಧ್ಯೇಯ ವಾಕ್ಯದೊಂದಿಗೆ ನವೆಂಬರ್‌ನಲ್ಲಿ ಕಂಬಳ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಮತ್ತು ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಅವರು ಈ ಬಗ್ಗೆ ಮಾಹಿತಿಯೊಂದನ್ನು ನೀಡಿದ್ದಾರೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳಗಳಿಗೆ ಸರಕಾರ ಐದು ಲಕ್ಷ ಅನುದಾನ ಬಿಡುಗಡೆ ಮಾಡಲಿದೆ.

ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕಂಬಳ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ, ಆನ್ಲೈನ್‌ ಮೂಲಕ ಪಾಸ್‌ ನೀಡಲಾಗುವುದು ಎಂದು ಹೇಳಿದ್ದಾರೆ. ಕೆಲವು ಸಚಿವರು ಪೂರಕವಾದ ಪ್ರಾಯೋಜಕತ್ವ ವ್ಯವಸ್ಥೆ ಮಾಡುವುದಾಗಿಯೂ, ಹಾಗೆನೇ 20 ಸಾವಿರಕ್ಕೂ ಅಧಿಕ ಮಂದಿ ಸಮವಸ್ತ್ರದಲ್ಲಿರುವುದಾಗಿಯೂ, ಕಂಬಳ ಕೋಣಗಳನ್ನು ಬಾಡಿಗೆ ಲಾರಿ ಮೂಲಕ ಕರೆತರುವುದಾಗಿಯೂ, ಹಾಗೂ ಕಂಬಳ ಯುಜಮಾನರ ಜೊತೆ ಸಮಾಲೋಚನೆ ಮಾಡುವುದಾಗಿಯೂ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇರುವ ಜಯಚಾಮರಾಜೇಂದ್ರ ಕೆರೆಯಲ್ಲಿ ‘ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೋಡುಕರೆ ಕಂಬಳ’ ಎಂಬ ಹೆಸರಿನಲ್ಲಿ ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆ ಕಂಬಳ (Kambala) ನಡೆಯಲಿದೆ.