Home latest ಬೆಳ್ತಂಗಡಿ:ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ!! ರಾತ್ರೋ ರಾತ್ರಿ ಪೊಲೀಸರೊಂದಿಗೆ ಹಿಂದೂ ಸಂಘಟನೆಯ...

ಬೆಳ್ತಂಗಡಿ:ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ!! ರಾತ್ರೋ ರಾತ್ರಿ ಪೊಲೀಸರೊಂದಿಗೆ ಹಿಂದೂ ಸಂಘಟನೆಯ ದಾಳಿ-ಯುವತಿಯ ರಕ್ಷಣೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಇಲ್ಲಿನ ಕಾಣಿಯೂರು ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಪೊಲೀಸರ ಸಮ್ಮುಖದಲ್ಲಿ ಹಿಂದೂ ಸಂಘಟನೆಗಳು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿದ್ದು, ಬಳಿಕ ಉಪ್ಪಿನಂಗಡಿ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆಯೇ ಮನೆಗೆ ಅಕ್ರಮ ಪ್ರವೇಶ ಹಾಗೂ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಬೆಳ್ತಂಗಡಿಯ ಮುಸ್ಲಿಂ ಸಮುದಾಯವೊಂದರ ಮೈಮುನ ಎಂಬವರ ಸಂಬಂಧಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ನಿವಾಸಿ ಯುವಕನೊಂದಿಗೆ ಅದೇ ಊರಿನ ಹಿಂದೂ ಯುವತಿ ಬೆಳ್ತಂಗಡಿಯ ಪಿಲಿಗೂಡು ಮೈಮುನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಆತ ಮುಸ್ಲಿಂ ಭಾಷೆ ಕಲಿಸಲೆಂದು ಇದಕ್ಕೂ ಮುಂಚೆ ಕಾಸರಗೋಡಿಗೆ ಕರೆದುಕೊಂಡು ಹೋಗಿದ್ದು, ಬಳಿಕ ಬೆಳ್ತಂಗಡಿ ಮುಸ್ಲಿಂ ಸಮುದಾಯದ ಮನೆಗೆ ಕರೆದುಕೊಂಡು ಬಂದಿದ್ದಾನೆ.ಆಕೆಯನ್ನು ಕರೆದುಕೊಂಡು ಬರುವಾಗ ತನ್ನ ಪರಿಚಯ ಸಿಗದಂತೆ ಮುಖಮುಚ್ಚಿಕೊಂಡು ಬಂದಿದ್ದು, ಆಕೆಗೂ ಬುರ್ಖಾ ಹಾಕಿಸಿದ್ದ.ಅಮ್ಮನಿಗೆ ಹುಷಾರಿಲ್ಲ ಆರೈಕೆಗಾಗಿ ಕರೆ ತಂದಿದ್ದೇನೆ ಎಂಬ ಸುಳ್ಳು ಕಾರಣವನ್ನು ಹೇಳಿ ಇತರರನ್ನು ನಂಬಿಸಿದ್ದಾನೆ. ಆಕೆ ಚಿಕ್ಕಮಗಳೂರಿನವಳಾಗಿದ್ದು,ಫ್ಯಾಮಿಲಿ ಬಗ್ಗೆ ಯಾವುದೇ ಮಾಹಿತಿ ಹೇಳಿಲ್ಲ.ಈತ ಟಯರ್ ಪಂಚರಿಂಗ್ ಮಾಡುವತ ಎಂದು ತಿಳಿದು ಬಂದಿದೆ.

ಈ ವಿಚಾರ ಹಿಂದೂ ಸಂಘಟನೆಗಳ ಗಮನಕ್ಕೆ ಬಂದ ಕೂಡಲೇ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು.ಇದರಂತೆ ಉಪ್ಪಿನಂಗಡಿ ಪೊಲೀಸರೊಂದಿಗೆ ಹಿಂದೂ ಕಾರ್ಯಕರ್ತರು ಮನೆಗೆ ದಾಳಿ ನಡೆಸಿ ಯುವತಿಯನ್ನು ರಕ್ಷಿಸಿದ್ದರು.

ಬಳಿಕ ಪೊಲೀಸ್, ಯುವತಿಯನ್ನು ಮಹಿಳಾ ರಕ್ಷಣಾ ಕೇಂದ್ರ ಮಂಗಳೂರಿಗೆ ಕರೆದು ಕೊಂಡು ಹೋಗಲಾಗಿದೆ.ಆದರೆ ಅವರು ಮುಸ್ಲಿಂ ಸಮುದಾಯದ ಗಾಡಿಯಲ್ಲಿ ಕರೆದುಕೊಂಡು ಹೋದ ಕಾರಣ, ಹಿಂದೂ ಸಂಘಟನೆಗಳು ಪೋಲಿಸರ ಗಾಡಿಯಲ್ಲಿ ಯಾಕೆ ಕರೆದು ಕೊಂಡು ಹೋಗಲಿಲ್ಲವೆಂದು ಪೊಲೀಸ್ ಜೀಪ್ ಅಡ್ಡ ಹಾಕಿ ಗಾಡಿ ತಡೆಯುವಂತೆ ಒತ್ತಾಯಿಸಿದ್ದಾರೆ.

ಇದಾದ ಬಳಿಕ ಯುವಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಿಂದೂ ಯುವಕರು ಮನೆಗೆ ಅಕ್ರಮ ಪ್ರವೇಶ ಮಾಡಿದಲ್ಲದೇ, ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಹಿಂದೂ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಾಗಿದೆ.ಬಳಿಕ ಪೊಲೀಸರು ಯುವತಿಯನ್ನು ಆಕೆಯ ಇಚ್ಛೆಯಂತೆ ಪೋಷಕರೊಂದಿಗೆ ಕಳುಹಿಸಿ ಕೊಟ್ಟಿದ್ದರು.