Home News ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಐದು ಕುಟುಂಬಗಳಿಗಿಲ್ಲ ರಸ್ತೆ ಸಂಪರ್ಕ | ಮಾರ್ಗವಿಲ್ಲದೆ ರೋಗಿಯನ್ನು ಹೊತ್ತುಕೊಂಡು...

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಐದು ಕುಟುಂಬಗಳಿಗಿಲ್ಲ ರಸ್ತೆ ಸಂಪರ್ಕ | ಮಾರ್ಗವಿಲ್ಲದೆ ರೋಗಿಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಇದೀಗ ವೈರಲ್

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ಆದೂರ್ ಪೇರಲ್ ಹತ್ತಿರ ಕೆರೆ ಹಿತ್ತಲಿನ ಪೋವಣಿ ಗೌಡ ಹಾಗೂ ಸುತ್ತ ಮುತ್ತಲಿನ 5 ಕುಟುಂಬಗಳಿಗೆ ರಸ್ತೆ ಇಲ್ಲದೆ, ಅಲ್ಲಿನ ರೋಗಿಯನ್ನು ಇದೀಗ ಆಸ್ಪತ್ರೆಗೆ ಹೊತ್ತುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಅನಾರೋಗ್ಯ ಸಂದರ್ಭ ರೋಗಿಯನ್ನು ಬೆಂಚಿಗೆ ಕಟ್ಟಿ ಕೊಂಡು ಹೋಗುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ 5 ಕುಟುಂಬಗಳಿಗೆ ಒಬ್ಬ ವ್ಯಕ್ತಿಯ ಜಾಗದಿಂದ ದಾರಿ ಮಾಡಿಕೊಡಲು ಅವಕಾಶವಿದ್ದು, ಆತ ಇದಕ್ಕೆ ಒಪ್ಪುತ್ತಿಲ್ಲ. ಅದಲ್ಲದೆ ಆತನಿಗೂ ಮನೆ ತಲುಪಲು ದಾರಿ ಇಲ್ಲದಿದ್ದರೂ, ಆತ ಮಾತ್ರ ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡದಿರುವುದು ಉಳಿದ ಕುಟುಂಬಗಳಿಗೆ ತಲೆನೋವಾಗಿ ಪರಿಣಮಿಸಿದೆ.

ರೋಗಿಯನ್ನು ಹೊತ್ತುಕೊಂಡು ಹೋಗುವ ದೃಶ್ಯ

ಸಂಬಂಧಪಟ್ಟವರು ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಜನರು ಕೇಳಿಕೊಂಡಿದ್ದಾರೆ. ಇಷ್ಟು ದಿನ ರಸ್ತೆ ಸಂಪರ್ಕವಿಲ್ಲದೆ ನರಕ ಅನುಭವಿಸಿದ ಈ ಕುಟುಂಬಗಳಿಗೆ ಇನ್ನಾದರೂ ಹೊಸ ದಾರಿ ಕಾಣಲಿ ಎಂಬುದೇ ಆಶಯ.