Home News ಬಿಕ್ಷುಕ ಸತ್ತು ಎರಡು ವರ್ಷಗಳ ಬಳಿಕ ಸಿಕ್ಕಿತು ಆತನ ಸಂಪತ್ತು

ಬಿಕ್ಷುಕ ಸತ್ತು ಎರಡು ವರ್ಷಗಳ ಬಳಿಕ ಸಿಕ್ಕಿತು ಆತನ ಸಂಪತ್ತು

Hindu neighbor gifts plot of land

Hindu neighbour gifts land to Muslim journalist

ಓರ್ವ ಭಿಕ್ಷುಕ ಸತ್ತ ನಂತರ ಆತನೊಬ್ಬ ಕೋಟ್ಯಾಧಿಪತಿ ಎಂದು ತಿಳಿದು ಜನರು ಶಾಕ್ ಆಗಿದ್ದಾರೆ. ಪಶ್ಚಿಮ ಬಂಗಾಳದ ಬಾಕ್ಸರ್ ಬಿರ್ಬಿಚಂದ್ ಆಚಾದ್ ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಉತ್ತರ ದಿನಾಜುರದ ಇಸ್ಲಾಂಪುರ ಲೋಕನಾಥ್ ಕಾಲೋನಿಯ ನಿವಾಸಿ ಆಜಾದ್ ಸ್ಟೋರಿ ಇದೀಗ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ವಿಚಿತ್ರವೆಂದರೆ ಈ ಭಿಕ್ಷುಕ ಸತ್ತ ಎರಡು ವರ್ಷಗಳ ನಂತರ ಅವನ ಸಂಪಾದನೆ ಹೊರಬಂದಿದೆ. ಆಜಾದ್ ಸೋದರ ಸಂಬಂಧಿ ಕನಿಕ ಎಂಬವರ ಮನೆಯಲ್ಲಿ ವಾಸವಾಗಿದ್ದರು.

ಇದೀಗ ಕನಿಕಾ ಸಾವನ್ನಪ್ಪಿದ ಬಳಿಕ ಆಜಾದ್‌ನ ಸಂಪತ್ತು ಹೊರಬಿದ್ದಿದೆ. ಕನಿಕಾ ನಿಧನರಾದ ಬಳಿಕ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಇಸ್ತಾನಪುರದ ಲೋಕನಾಥ್ ಕಾಲೋನಿಯಲ್ಲಿನ ಪಾಳುಬಿದ್ದ ಮನೆಯಿಂದ ಸಾಮಾನುಗಳನ್ನು ತರಲು ಹೋಗಿದ್ದರು. ಮನೆಯೊಳಗೆ ಹೋದ ಜನಕ್ಕೆ ಹಣದ ಚೀಲಗಳು ಸಿಕ್ಕಿವೆ.

ಭಿಕ್ಷುಕ ಬಿರ್ಭಿಚಂದ್ ಆಜಾದ್ ಗುಡಿಸಲಿನಲ್ಲಿ 1.8 ಲಕ್ಷ ಹಣ ಸಿಕ್ಕಿದೆ. ಮನೆಯ ಟ್ರಂಕ್, ಡಬ್ಬ ಮತ್ತು ಗೋಣಿ ಚೀಲದಲ್ಲಿ ಹಣ ಪತ್ತೆಯಾಗಿದೆ ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ. ಚೀಲದಲ್ಲಿದ್ದ 2 ರೂಪಾಯಿ, 5 ರೂಪಾಯಿ ಮತ್ತು 10 ರೂಪಾಯಿಯ ನಾಣ್ಯಗಳನ್ನು ಎಣಿಸಲು ಅಧಿಕಾರಿಗಳಿಗೆ ಎಂಟು ಗಂಟೆ ಬೇಕಾಯಿತು. ಹೆಚ್ಚಾಗಿ, 5, 10 ರೂಪಾಯಿ ನಾಣ್ಯಗಳು ಹಾಗೂ 20 ರೂಪಾಯಿ ನೋಟುಗಳೇ ಹೆಚ್ಚಿದ್ದವು.