

Beer Brand: ಕೆಲವರಿಗೆ ಅವರಿಟ್ಟ ಹೆಸರಿನಿಂದಲೇ ಲಕ್ ಕುದುರುತ್ತೆ ಅಂತ ಹೇಳ್ತಾರೆ. ಹೀಗಾಗಿಯೇ ಎಷ್ಟೋ ನಟ, ನಟಿಯರು ತಮ್ಮ ಹೆಸರನ್ನು ಅದೃಷ್ಟ ಪರೀಕ್ಷೆಗೆ ಇಡುತ್ತಾರೆ. ಅದೃಷ್ಟ ಒಲಿದ ಕುರಿತು ಎಷ್ಟೋ ಜನರು ಹೇಳಿರುವ ಕುರಿತು ನೀವು ಕೇಳಿರಬಹುದು. ಆದರೆ ಬಿಯರ್ ಬ್ರಾಂಡೊಂದು ಹೆಸರು ಬದಲಿಸಲು ಹೋಗಿ ಬರೋಬ್ಬರಿ 80 ಕೋಟಿ ರೂಪಾಯಿ ಕಳೆದುಕೊಂಡಿದೆ.
ಬೀರಾ 91 ಹೆಸರಿನ ಬಿಯರ್ ಬ್ರಾಂಡ್ ಭಾರತದಲ್ಲಿ ಮಾರಾಟವಾಗುವ ಬಿಯರ್‌ಗಳಲ್ಲಿ ಒಂದು. ಈ ಸಂಸ್ಥೆ ತನ್ನ ಬ್ರಾಂಡ್ ಹೆಸರಿನಲ್ಲಿ ಸಣ್ಣದೊಂದು ಬದಲಾವಣೆಯನ್ನು ಮಾಡಿಕೊಂಡಿದ್ದು, ದೊಡ್ಡ ನಷ್ಟ ಉಂಟು ಮಾಡಿದೆ. 2015 ರಲ್ಲಿ ಅಂಕುರ್ ಜೈನ್ ಬೀರಾ ಬಿಯರ್ ಬ್ರಾಂಡನ್ನು ಸ್ಥಾಪಿಸಿದ್ದರು. ಇದು ಜನಪ್ರಿಯತೆಯನ್ನೂ ಪಡೆದುಕೊಂಡಿತ್ತು. ಬೀರಾ 91 ತನ್ನ ಕಂಪನಿಎಯ ಹೆಸರನ್ನು ಬಿ9 ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಾವಣೆ ಮಾಡಿತು. ಈ ಬದಲಾವಣೆ ಚಿಕ್ಕದಾಗಿ ಕಂಡರೂ ಇದು ಹಲವಾರು ತಿಂಗಳುಗಳ ಕಾಲ ಬಿಯರ್‌ನ ಮಾರಾಟವನ್ನು ಸ್ಥಗಿತಗೊಳಿಸಿತು.
ಹೆಸರು ಬದಲಾವಣೆ ಮಾಡಿದ್ದರಿಂದ ನಾಲ್ಕಾರು ತಿಂಗಳ ಕಾಲ ಲೇಬಲ್ ನೋಂದಾಐಇಸಿ ರಾಜ್ಯಾದ್ಯಂತ ಮರು ಅರ್ಜಿ ಸಲ್ಲಿಕೆ ಮಾಡಬೇಕಾಯಿತು. ಹೀಗಾಗಿ ಬೇಡಿಕೆ ಇದ್ದರೂ ಯಾವುದೇ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಕಂಪನಿಯು ತನ್ನ ಹೊಸ ಉತ್ಪನ್ನದ ಲೇಬಲ್‌ನ ನೋಂದಣಿಯನ್ನು ಪೂರ್ಣಗೊಳಿಸಿದಾಗ ಸುಮಾರು 80ಕೋಟಿ ರೂ.ಗಳ ದಾಸ್ತಾನು ಬಾಯಿ ಉಳಿದಿದೆ ಎಂದು ವರದಿಯಾಗಿದೆ.













