Home News ಬಂಟ್ವಾಳ | ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಬಂಟ್ವಾಳ | ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಕೊಳ್ಳಾಡು ಗ್ರಾಮದಲ್ಲಿ ನಡೆದಿದೆ.

ಕೊಲ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ಪಾರ್ವತಿ (56) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪಾರ್ವತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ, ಮಂಗಳೂರಿನ ಆಸ್ಪತ್ರೆಯಿಂದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಆರೋಗ್ಯ ಸ್ಥಿತಿ ಸರಿಯಾಗಿ ಇಲ್ಲದ ಕಾರಣ ಸೆ. 20 ರಂದು ಒಬ್ಬರೇ ಮನೆಯಲ್ಲಿದ್ದು, ಮಧ್ಯಾಹ್ನ ಮನೆಯವರು ಬಂದು ಮನೆಯಲ್ಲಿ ನೋಡಿದಾಗ ಮನೆಯಲ್ಲಿ ಪಾರ್ವತಿಯವರು ಇಲ್ಲದೇ ಎಲ್ಲಾ ಕಡೆಗೆ ಹುಡುಕಾಡಿದಾಗ ತೋಟದ ಕೆರೆಯ ಬದಿಯಲ್ಲಿ ಚಪ್ಪಲಿ ಹಾಗೂ ಕನ್ನಡಕ ಕಂಡು ಬಂದಿದ್ದು, ಸಂಶಯದಿಂದ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.

ಪಾರ್ವತಿಯವರು ಮಾನಸಿಕ
ಅಸ್ವಸ್ಥೆಯಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಮಾನಸಿಕ ಖಿನ್ನತೆ ಗುಣವಾಗದೆ ಇದ್ದದ್ದರಿಂದ, ಅದೇ ವಿಷಯದಿಂದ ಮಾನಸಿಕವಾಗಿ ಮನನೊಂದು ಮನೆಯ ಬಳಿಯ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.