Home latest ಸ್ನೇಹಿತರ ಜೊತೆ ಊಟ ಮುಗಿಸಿ ವಾಪಸ್ಸಾಗುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಅಪರಿಚಿತರ ತಂಡ!!|ಸಿಸಿಟಿವಿಯಲ್ಲಿ ಸೆರೆಯಾಯ್ತು...

ಸ್ನೇಹಿತರ ಜೊತೆ ಊಟ ಮುಗಿಸಿ ವಾಪಸ್ಸಾಗುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಅಪರಿಚಿತರ ತಂಡ!!|ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ಕೊಲೆ ದೃಶ್ಯ!

Hindu neighbor gifts plot of land

Hindu neighbour gifts land to Muslim journalist

ಸಿಲಿಕಾನ್ ಸಿಟಿಯಲ್ಲಿ ಮರ್ಡರ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಅದೇ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ.ಗೆಳೆಯನ ಹುಟ್ಟುಹಬ್ಬಕ್ಕೆಂದು ಹೋದ ಯುವಕ ವಾಪಾಸ್ಸಾಗುತ್ತಿದ್ದ ವೇಳೆ ಯಾರೋ ಕಿಡಿಗೇಡಿಗಳು ಚಾಕು ಇರಿದು ಕೊಲೆಮಾಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಕೊಲೆಯಾದ ಯುವಕನನ್ನು 22 ವರ್ಷದ ಚಂದ್ರು ಎಂದು ಗುರುತಿಸಲಾಗಿದೆ.

ಗೆಳೆಯನ ಹುಟ್ಟುಹಬ್ಬದ ಹಿನ್ನೆಲೆ ಚಂದ್ರು ಸ್ನೇಹಿತರ ಜೊತೆ ಊಟಕ್ಕೆ ಬಂದಿದ್ದನು.ಊಟಕ್ಕೆ ಹೋಗುತ್ತಿರುವ ವೇಳೆ ಅಪರಿಚಿತರೊಂದಿಗೆ ಗಲಾಟೆ ಆಗಿದ್ದು,ಗಲಾಟೆ ಅತಿಯಾಗಿ ಚಂದ್ರು ಊಟ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಪರಿಚಿತರ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದೆ.

ಕೊಲೆ ಮಾಡಿದ ಬಳಿಕ ಅಪರಿಚಿತರ ಗುಂಪು ಸ್ಥಳದಿಂದ ಎಸ್ಕೇಪ್ ಆಗಿದ್ದು,ಮೃತ ಚಂದ್ರುವಿನ ಗೆಳೆಯರು ಪೊಲೀಸ್ ಠಾಣೆಯಲ್ಲಿ ಕೊಲೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಕೊಲೆಯ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,
ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.