Home News ಬೆಳ್ತಂಗಡಿ | ಬಂದಾರಿನಲ್ಲಿ ಡ್ರೆಜ್ಜಿಂಗ್ ಮೂಲಕ ಅಕ್ರಮ ಮರಳುಗಾರಿಕೆ | 1 ಡ್ರೆಜ್ಜಿಂಗ್ ಯಂತ್ರ, 1...

ಬೆಳ್ತಂಗಡಿ | ಬಂದಾರಿನಲ್ಲಿ ಡ್ರೆಜ್ಜಿಂಗ್ ಮೂಲಕ ಅಕ್ರಮ ಮರಳುಗಾರಿಕೆ | 1 ಡ್ರೆಜ್ಜಿಂಗ್ ಯಂತ್ರ, 1 ಹಿಟಾಚಿ, 4 ಟಿಪ್ಪರ್ ಲಾರಿ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

ನೇತ್ರಾವತಿ ನದಿಯಿಂದ ಅಕ್ರಮವಾಗಿ ಡ್ರೆಜ್ಜಿಂಗ್ ಮೂಲಕ ಮರಳು ತೆಗೆಯುತ್ತಿದ್ದ ಅಡ್ಡೆಗೆ ಧರ್ಮಸ್ಥಳ ಪೊಲೀಸ್‌ ಉಪನಿರೀಕ್ಷಕರ ಕೃಷ್ಣಕಾಂತ್ ಎ. ಅವರ ತಂಡ ದಾಳಿ ನಡೆಸಿ 39 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ನಡೆದಿದೆ.

ಸಂದೇಶ ಮತ್ತು ಜಗದೀಶ ಎಂಬುವರು ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದಾಳಿ ವೇಳೆ ಮರಳು ತೆಗೆಯುತ್ತಿದ್ದವರು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಡ್ರೆಜ್ಜಿಂಗ್ ಮಿಷನ್ -1 ಮತ್ತು ನದಿ ತೀರದಲ್ಲಿ ಹಿಟಾಚಿ-1 ಹಾಗೂ ಮರಳು ತುಂಬಿದ 4 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ನದಿಯಿಂದ ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ಅಂದಾಜು 39,00,000 ಲಕ್ಷ ರೂ. ಮತ್ತು ಮರಳಿನ ಅಂದಾಜು ಮೌಲ್ಯ 16,000 ರೂ. ಸೊತ್ತುಗಳ ಸ್ವಾಧೀನ ಪಡಿಸಲಾಗಿದೆ.