Home News Amritpal Singh Wife: ಲಂಡನ್’ಗೆ ಪರಾರಿ ಯತ್ನ: ಖಲಿಸ್ಥಾನ್ ನಾಯಕ ಅಮೃತ್‌ಪಾಲ್‌ ಪತ್ನಿ ಏರ್‌ಪೋರ್ಟ್‌ನಲ್ಲಿ ಬಂಧನ

Amritpal Singh Wife: ಲಂಡನ್’ಗೆ ಪರಾರಿ ಯತ್ನ: ಖಲಿಸ್ಥಾನ್ ನಾಯಕ ಅಮೃತ್‌ಪಾಲ್‌ ಪತ್ನಿ ಏರ್‌ಪೋರ್ಟ್‌ನಲ್ಲಿ ಬಂಧನ

Attempt escape to London

Hindu neighbor gifts plot of land

Hindu neighbour gifts land to Muslim journalist

Attempt escape to London: ಅಮೃತಪಾಲ್ ಸಿಂಗ್ (Amritpal Singh) ಅವರ ಪತ್ನಿ ಕಿರಣ್‌ದೀಪ್ ಕೌರ್ (Kirandeep Kaur) ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ವಿಮಾನ ಏರಲು ಅಣಿಯಾಗಿದ್ದ ಸಂದರ್ಭ ಅಮೃತಸರ ಅಂತರಾಷ್ಟ್ರೀಯ(Attempt escape to London) ವಿಮಾನ ನಿಲ್ದಾಣದಲ್ಲಿ ಮೈಗ್ರೇಷನ್‌ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
ಪರಾರಿಯಾಗಿರುವ ಖಲಿಸ್ತಾನ್ ಪರ ನಾಯಕ ಅಮೃತ್‌ಪಾಲ್‌ ಪತ್ನಿ ಕಿರಣದೀಪ್ ಕೌರ್‌ ಅವರನ್ನು ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಖಲಿಸ್ತಾನ್ ಬೆಂಬಲಿಗ ಅಮೃತ್‌ಪಾಲ್‌ ಮಾ.18ರಿಂದ ತಲೆಮರೆಸಿಕೊಂಡಿದ್ದ ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಕಿರಣ್‌ದೀಪ್ ಅವರು ಪರಾರಿಯಾಗಲು ಹವಣಿಸಿದ್ದು 11.30ಕ್ಕೆ ನಿಲ್ದಾಣಕ್ಕೆ ಬಂದಿದ್ದರು ಎನ್ನಲಾಗಿದೆ. ಮಧ್ಯಾಹ್ನ 1:30ಕ್ಕೆ ಲಂಡನ್ ನ ಬರ್ಮಿಂಗ್ ಹ್ಯಾಮ್ ಗೆ ಪ್ರಯಾಣಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಅಮೃತಪಾಲ್ ಸಿಂಗ್ ಅವರ ಪತ್ನಿ ಕಿರಣದೀಪ್ ಕೌರ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂಬುದನ್ನು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.

 

ಇದನ್ನು ಓದಿ: Heat Wave: ಏರಿದ ಉರಿಬಿಸಿಲು, ತಾಪಮಾನ ಹೆಚ್ಚಳ ಹಿನ್ನೆಲೆ ಬದಲಾದ ಶಾಲಾ ಸಮಯ