Home News Aadhar Card : ಆಧಾರ್ ನಲ್ಲಿ ನಿಮ್ಮ ಹಳೇ ಫೋಟೋ ನೋಡಿ ಬೇಸರವಾಗಿದೆಯೇ? ಹಾಗಾದ್ರೆ ಹೊಸ...

Aadhar Card : ಆಧಾರ್ ನಲ್ಲಿ ನಿಮ್ಮ ಹಳೇ ಫೋಟೋ ನೋಡಿ ಬೇಸರವಾಗಿದೆಯೇ? ಹಾಗಾದ್ರೆ ಹೊಸ ಫೋಟೋ ಹಾಕುವುದು ಹೇಗೆ

Aadhar Card Update

Hindu neighbor gifts plot of land

Hindu neighbour gifts land to Muslim journalist

Adhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬರೂ ಹತ್ತು ವರ್ಷಗಳಿಗೊಮ್ಮೆ ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರ ಆಗಿಂದಲೂ ಹೇಳುತ್ತಲೇ ಬಂದಿದೆ. ಆದರೂ ಇನ್ನೂ ಕೆಲವರು ಆಧಾರ್ ಅಪ್ಡೇಟ್ ಮಾಡಿಲ್ಲ.

ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಹಳೆಯ ಫೋಟೋವನ್ನು ನೋಡಿ ನೋಡಿ ನಿಮಗೆ ಏನಾದರೂ ಬೇಸರವಾಗಿದೆಯೇ? ಹಾಗಿದ್ರೆ ನೀವು ಸೇವ ಕೇಂದ್ರಗಳಿಗೆ ಭೇಟಿ ನೀಡುವುದರ ಮುಖಾಂತರ ಫೋಟೋ ಚೇಂಜ್ ಮಾಡಬೇಕು. ಆಧಾರ ಅಪ್ಡೇಟ್ ಮಾಡಲು ಆನ್ಲೈನಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದರು ಕೂಡ ಕೆಲವೊಂದು ತಿದ್ದುಪಡಿ ಮಾಡಲು ನೀವು ಸೇವಾ ಕೇಂದ್ರಗಳಿಗೆ ಭೇಟಿ ನೀಡಲೇಬೇಕಾಗುತ್ತದೆ. ಅದರಲ್ಲಿ ಫೋಟೋ ಚೇಂಜ್ ಮಾಡುವುದು ಕೂಡ ಒಂದಾಗಿದೆ. ಸೇವಾ ಕೇಂದ್ರಗಳಿಗೆ ಹೋದಾಗ ನೀವು ಕ್ಯೂನಲ್ಲಿ ಕಾಯಬೇಕಾಗುತ್ತದೆ. ಆದರೆ ನೀವು ಇದಕ್ಕೆ ಅಪಾಯಿಂಟ್ಮೆಂಟ್ ಅನ್ನು ಕೂಡ ಕಾಯ್ದಿರಿಸಬಹುದು.

ಹೌದು, ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾವಣೆಗೆ ಮೊದಲು ಅರ್ಜಿ ಸಲ್ಲಿಸಿ ಅಪಾಯಿಂಟ್ಮೆಂಟ್ ಪಡೆಯಬೇಕು. ಅಲ್ಲದೆ ಕೆಲ ಸ್ಥಳಗಳಲ್ಲಿ ಸೇವಾ ಕೇಂದ್ರದಲ್ಲೂ ಲಭ್ಯ ಒಟ್ಟಾರೆಯಾಗಿ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೊದಲು ಸಮಯವನ್ನು ಉಳಿಸಲು ಯುಐಡಿಐಐ (UIDAI) ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸುವುದು ಉತ್ತಮ.

ವೆಬ್‌ಸೈಟ್‌ನಲ್ಲಿ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಆಯ್ಕೆ ಮಾಡಿ ಬಯೋಮೆಟ್ರಿಕ್ ಅಪ್‌ಡೇಟ್ ಆಯ್ಕೆಯನ್ನು ಆರಿಸಿ. ಇದರ ನಂತರ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಅಷ್ಟೇ. ನಿಮ್ಮ ಅಪಾಯಿಂಟ್‌ಮೆಂಟ್ ದಿನದಂದು ನಿಮ್ಮ ಹಳೆಯ ಆಧಾರ್ ಕಾರ್ಡ್‌ನೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ. ಫೋಟೋ ಬದಲಾವಣೆಗೆ ಬೇರೆ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿರುವುದಿಲ್ಲ. ಫೋಟೋ ಬದಲಾವಣೆಗೆ ಕೇವಲ ₹100 ಶುಲ್ಕ ಮತ್ತು ನಿಮ್ಮ ಹಳೆಯ ಆಧಾರ್ ಕಾರ್ಡ್ ಇದ್ದಾರೆ ಸಾಕು.

ಕೇಂದ್ರದ ಸಿಬ್ಬಂದಿ ನಿಮ್ಮ ಫಿಂಗರ್ಪ್ರಿಂಟ್ ಮತ್ತು ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ಯಶಸ್ವಿಯಾದ ನಂತರ ಅವರು ತಮ್ಮ ಹೊಸ ಫೋಟೋವನ್ನು ಸ್ಥಳದಲ್ಲೇ ಕ್ಲಿಕ್ ಮಾಡುತ್ತಾರೆ. ಈ ಸೇವೆಗೆ ₹100 ಶುಲ್ಕವನ್ನು ನೀವು ನೀಡಬೇಕಾಗುತ್ತದೆ. ಈ ಶುಲ್ಕ ಪಾವತಿಸಿದ ನಂತರ ನಿಮ್ಮ ಅಪ್‌ಡೇಟ್ ಕೋರಿಕೆಯನ್ನು ದೃಢೀಕರಿಸುವ URN (ಅಪ್‌ಡೇಟ್ ರೀಕ್ಕವೆಸ್ಟ್ ನಂಬರ್) ಇರುವ ರಸೀದಿಯನ್ನು ನಿಮಗೆ ನೀಡಲಾಗುತ್ತದೆ. ಅದನ್ನು ತಪ್ಪದೇ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಫೋಟೋ ಅಪ್‌ಡೇಟ್ ಆದ ನಂತರ ನೀವು ಯುಐಡಿಐ ವೆಬ್‌ಸೈಟ್‌ನಿಂದ ಹೊಸ ಇ-ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಹೊಸ ಫೋಟೋವನ್ನು ಕಾಣಬಹುದು.