Home News Fastag: ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ ವಿತರಣಾ ಕಾರ್ಯಕ್ಕೆ ಆ.15ರಿಂದ ಚಾಲನೆ!

Fastag: ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ ವಿತರಣಾ ಕಾರ್ಯಕ್ಕೆ ಆ.15ರಿಂದ ಚಾಲನೆ!

Fastag New Rules

Hindu neighbor gifts plot of land

Hindu neighbour gifts land to Muslim journalist

Fastag: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಓಡಾಡುವ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆಮಾಡುವ ಉದ್ದೇಶದಿಂದ ಈ ಫಾಸ್ಟ್ಯಾಗ್ (Fastag) ಜಾರಿಗೆ ತರಲಾಗಿದೆ.

ವಾಣಿಜ್ಯತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್‌ಗಳ ಮಾಲೀಕರಿಗೆ ಗರಿಷ್ಠ 200 ಟ್ರಿಪ್‌ ಅಥವಾ ಒಂದಿಡೀ ವರ್ಷ ಟೋಲ್ ಬಳಕೆಗಾಗಿ (ಯಾವುದು ಮೊದಲೋ ಅದು) 3000 ರು. ಪಾವತಿಸಿದರೆ ಈ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ನಿಂದ ಪದೇ ಪದೆ ಫಾಸ್ಟ್‌ಟ್ಯಾಗ್‌ ರಿಚಾರ್ಜ್ ಮಾಡುವ ಕಿರಿಕಿರಿಯಿಂದ ವಾಹನ ಮಾಲೀಕರು ಪಾರಾಗಬಹುದು.

ವಾಹನ ಮಾಲೀಕರು ರಾಜ್‌ಮಾರ್ಗ್ ಯಾತ್ರಾ ಆ್ಯಪ್ ಅಥವಾ ಎನ್‌ಎಚ್‌ಎಐ/ಎಂಆರ್‌ಟಿಎಚ್ ವೆಬ್‌ಸೈಟ್‌ಗೆ ಹೋಗಬೇಕು.

ವಾಹನ ಸಂಖ್ಯೆ ಮತ್ತು ಫಾಸ್ಟ್ಟ್ಯಾಗ್ ಐಡಿ ಹಾಕಿ ಲಾಗಿನ್ ಆಗಬೇಕು. ಇದಕ್ಕೂ ಮೊದಲು ನಿಮ್ಮ ಹಾಲಿ ಫಾಸ್ಟ್‌ಟ್ಯಾಗ್ ಚಾಲ್ತಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್‌ಗಷ್ಟೇ ಈ ಪಾಸ್‌ ಅನ್ವಯ ಆಗುತ್ತದೆ. ಬಳಿಕ ಯುಪಿಐ, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ 3,000 ರು. ಪಾವತಿಸಬೇಕು. ಇದರ ಬೆನ್ನಲ್ಲೇ ವಾರ್ಷಿಕ ಪಾಸ್ ನಮ್ಮ ಹಾಲಿ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್ ಜತೆ ಜೋಡಣೆಯಾಗುತ್ತದೆ. ಇದನ್ನು ಎಸ್‌ಎಂಎಸ್ ಸಂದೇಶದ ಮೂಲಕ ಖಾತ್ರಿಪಡಿಸಲಾಗುತ್ತದೆ. ವಾರ್ಷಿಕ ಟೋಲ್ ಫಾಸ್ಟ್ಯಾಗ್ ಪಾಸ್ ಕೇವಲ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಹೆದ್ದಾರಿಗಳಿಗೆ ಹಾಗೂ ಬೆಂಗಳೂರಿನ ನೈಸ್‌ನಂಥ ಖಾಸಗಿ ಹೆದ್ದಾರಿಗೆ ಅನ್ವಯವಾಗುವುದಿಲ್ಲ.

Mysore : ದಸರಾ ಆನೆಗಳ ತೂಕ ಪರೀಕ್ಷೆ – ಕ್ಯಾಪ್ಟನ್ ‘ಅಭಿಮನ್ಯು’ ಮೀರಿಸಿದ ‘ಭೀಮ