Home News Annamali: ರಾಷ್ಟ್ರ ರಾಜಕಾರಣದಲ್ಲಿ ಅಣ್ಣಾಮಲೈಗೆ ಮಹತ್ವದ ಸ್ಥಾನ !!

Annamali: ರಾಷ್ಟ್ರ ರಾಜಕಾರಣದಲ್ಲಿ ಅಣ್ಣಾಮಲೈಗೆ ಮಹತ್ವದ ಸ್ಥಾನ !!

Hindu neighbor gifts plot of land

Hindu neighbour gifts land to Muslim journalist

Annamali :ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡರಾದ ಅಣ್ಣಾಮಲೈ ಅವರ ಬಿಜೆಪಿ ರಾಜ್ಯಾಧ್ಯಕ್ಷ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿಜೆಪಿಯ ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್‌ಅವರನ್ನು ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಅಣ್ಣಾಮಲೈ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಸ್ಥಾನ ನೀಡುವ ಕುರಿತು ಅಮಿತ್ ಶಾ ಅವರು ಸುಳಿವು ನೀಡಿದ್ದಾರೆ

ಹೌದು, ತಮಿಳುನಾಡು ಬಿಜೆಪಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ಕೆ ಅಣ್ಣಾಮಲೈ (K Annamalai) ಅವರನ್ನು ಬಿಜೆಪಿಯ ರಾಷ್ಟ್ರೀಯ ಸ್ಥಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಹೇಳಿದ್ದಾರೆ.

‘ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ, ಕೆ. ಅಣ್ಣಾಮಲೈ ಅವರು ಶ್ಲಾಘನೀಯ ಸಾಧನೆಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಜನರಿಗೆ ತಲುಪಿಸುವುದರಲ್ಲಿ ಅಥವಾ ಪಕ್ಷದ ಕಾರ್ಯಕ್ರಮಗಳನ್ನು ಹಳ್ಳಿಯಿಂದ ಹಳ್ಳಿಗೆ ತಲುಪಿಸುವುದರಲ್ಲಿ ಅಣ್ಣಾಮಲೈ ಅವರ ಕೊಡುಗೆ ಅಭೂತಪೂರ್ವವಾಗಿದೆ. ಬಿಜೆಪಿಯ ರಾಷ್ಟ್ರೀಯ ಚೌಕಟ್ಟಿನಲ್ಲಿ ಅಣ್ಣಾಮಲೈ ಅವರ ಸಂಘಟನಾ ಕೌಶಲ್ಯವನ್ನು ಬಿಜೆಪಿ ಬಳಸಿಕೊಳ್ಳುತ್ತದೆ’ ಎಂದು ಅಮಿತ್ ಶಾ ಟ್ವೀಟ್ ಮೂಲಕವೂ ಹೇಳಿದ್ದಾರೆ.