Home latest ರಾಜ್ಯ ಪೊಲೀಸ್ ಶಿಸ್ತು ನಿಯಮಗಳ ತಿದ್ದುಪಡಿ ; ಕರ್ತವ್ಯದ ವೇಳೆ ಅಶಿಸ್ತು ಅಥವಾ ಕರ್ತವ್ಯಲೋಪ ಮಾಡಿದರೆ...

ರಾಜ್ಯ ಪೊಲೀಸ್ ಶಿಸ್ತು ನಿಯಮಗಳ ತಿದ್ದುಪಡಿ ; ಕರ್ತವ್ಯದ ವೇಳೆ ಅಶಿಸ್ತು ಅಥವಾ ಕರ್ತವ್ಯಲೋಪ ಮಾಡಿದರೆ ಈ ಶಿಕ್ಷೆ ಖಚಿತ!!!

Hindu neighbor gifts plot of land

Hindu neighbour gifts land to Muslim journalist

ರಾಜ್ಯ ಸರಕಾರ ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಕರ್ತವ್ಯದ ವೇಳೆ ಅಶಿಸ್ತು ಅಥವಾ ಕರ್ತವ್ಯಲೋಪ ತೋರುವ ಪೊಲೀಸ್ ಸಿಬ್ಬಂದಿಗೆ ಇನ್ನು ಮುಂದೆ ದಂಡದ ಜತೆಗೆ ಸೇವೆಯಿಂದ ವಜಾ ಶಿಕ್ಷೆಯೂ ಸೇರಿದೆ ಎಂದು ಹೇಳಲಾಗಿದೆ

ಉಭಯ ಸದನಗಳಲ್ಲಿ ಮಂಡನೆಯಾದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) (ತಿದ್ದುಪಡಿ) ನಿಯಮಗಳು -2022ರ ನಿಯಮಗಳಿಗೆ ರಾಜ್ಯಪಾಲರು ಆದೇಶದ ಮೇರೆಗೆ ಒಳಾಡಳಿತ ಇಲಾಖೆ (ಪೊಲೀಸ್‌ ಸೇವೆಗಳು-ಬಿ) ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

ಕರ್ತವ್ಯಲೋಪ ಎಸಗುವವರಿಗೆ ವಿಧಿಸುವ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲದಿರುವುದು ಸಹಿತ ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆದರೆ ಸೇವೆ ವಜಾದಂತಹ ಕ್ರಮ ಸಬ್ ಇನ್‌ಸ್ಪೆಕ್ಟರ್ ಅಥವಾ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿ ಗಳಿಗೆ ಅನ್ವಯವಾಗುವುದಿಲ್ಲ.