Home News ಉಪ್ಪಿನಂಗಡಿ : ಹೆದ್ದಾರಿ ಬದಿಯಲ್ಲಿ ಕೋಣಗಳ ಮೃತದೇಹ ಪತ್ತೆ | ಅಕ್ರಮ ಜಾನುವಾರು ಸಾಗಾಟ ಶಂಕೆ,ಕ್ರಮಕ್ಕೆ...

ಉಪ್ಪಿನಂಗಡಿ : ಹೆದ್ದಾರಿ ಬದಿಯಲ್ಲಿ ಕೋಣಗಳ ಮೃತದೇಹ ಪತ್ತೆ | ಅಕ್ರಮ ಜಾನುವಾರು ಸಾಗಾಟ ಶಂಕೆ,ಕ್ರಮಕ್ಕೆ ಹಿಂ.ಜಾ.ವೇ.ಆಗ್ರಹ

Hindu neighbor gifts plot of land

Hindu neighbour gifts land to Muslim journalist

ಬೃಹತ್ ಗಾತ್ರದ ಎರಡು ಕೋಣಗಳ ಮೃತದೇಹಗಳು ಉಪ್ಪಿನಂಗಡಿ ಹಳೆಗೇಟು ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬದಿ ಪತ್ತೆಯಾಗಿದ್ದು, ಆಕ್ರಮ ಜಾನುವಾರು ಸಾಗಾಟಗಾರರು ಸತ್ತಿರುವ ಕೋಣಗಳನ್ನು ಇಲ್ಲಿ ಎಸೆದು ಹೋಗಿರಬಹುದೆಂದು ಅಂದಾಜಿಸಲಾಗಿದೆ,

ಅಕ್ರಮವಾಗಿ ಜಾನುವಾರು ಸಾಗಾಟಗಾರರು ಜಾನುವಾರು ಸಾಗಿಸುತ್ತಿದ್ದಾಗ ಸತ್ತಿರುವ ಕೋಣಗಳನ್ನು ಇಲ್ಲಿ ಎಸೆದಿರಬಹುದೆಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಹಿ೦ದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಸಹಕಾರದಿಂದ ಕೋಣಗಳ ಮೃತದೇಹವನ್ನು ವಿಲೇವಾರಿ ಮಾಡಲಾಯಿತು.

ಅಕ್ರಮ ಜಾನುವಾರು ಸಾಗಾಟ, ಗೋ ಹತ್ಯೆಗೆ ನಿಷೇಧವಿದ್ದರೂ, ಕಠಿಣ ಕಾನೂನು ಜಾರಿಯಲ್ಲಿದ್ದರೂ ಆಕ್ರಮ ಜಾನುವಾರು ಸಾಗಾಟ ನಿಂತಿಲ್ಲ. ನಿತ್ಯ ನಿರಂತರವಾಗಿ ಕಂಟೈನರ್ ಗಳಲ್ಲಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದೆ. ಅಂತವರಿಂದಲೇ ಈ ಕೃತ್ಯ ನಡೆದಿದೆ. ಆದ್ದರಿಂದ ಪೊಲೀಸ್ ಇಲಾಖೆ ವಾಹನಗಳ ತಪಾಸಣೆಯನ್ನು ಬಿಗುಗೊಳಿಸುವ ಮೂಲಕ ಇಂತಹವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.