Home News Ahmedabad Plane Crash: ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಏರ್‌ ಇಂಡಿಯಾ ವಿಮಾನ ಡಿಕ್ಕಿ: ಐವರು ವಿದ್ಯಾರ್ಥಿಗಳ...

Ahmedabad Plane Crash: ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಏರ್‌ ಇಂಡಿಯಾ ವಿಮಾನ ಡಿಕ್ಕಿ: ಐವರು ವಿದ್ಯಾರ್ಥಿಗಳ ಸಾವು, 30 ಜನರಿಗೆ ಗಾಯ 

Hindu neighbor gifts plot of land

Hindu neighbour gifts land to Muslim journalist

Ahmedabad Plane Crash: ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ ಹೊರಟಿದ್ದ ಏರ್ಗ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ 5 ನಿಮಿಷಗಳ ನಂತರ ಹತ್ತಿರದ ಬಿ.ಜೆ. ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅಪಘಾತದಲ್ಲಿ ಕನಿಷ್ಠ 5 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಮೆಸ್ ಕಟ್ಟಡಕ್ಕೆ ಹಾನಿಯಾಗಿರುವ ವಿಡಿಯೋಗಳು ಬೆಳಕಿಗೆ ಬಂದಿದೆ.

ಬೋಯಿಂಗ್ 787-8 ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, 1 ಕೆನಡಿಯನ್ ಮತ್ತು 7 ಪೋರ್ಚುಗೀಸರು ಇದ್ದರು ಎಂದು ಟಾಟಾ ಒಡೆತನದ ಏರ್ ಇಂಡಿಯಾ ತಿಳಿಸಿದೆ. ಬಿಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ಒಳಗೆ ವಿಮಾನದ ಒಂದು ಭಾಗ ಸಿಲುಕಿಕೊಂಡಿದೆ.

ಹಾಸ್ಟೆಲ್ ಕ್ಯಾಂಟೀನ್‌ನಲ್ಲಿನ ಟೇಬಲ್‌ಗಳ ಮೇಲೆ ಕೆಲವು ಆಹಾರ ತಟ್ಟೆಗಳು ಬಿದ್ದಿರುವುದನ್ನು ಮತ್ತು ಹಾನಿಗೊಳಗಾದ ಗೋಡೆಯ ಬಳಿ ಜನರು ನಿಂತಿರುವುದನ್ನು ಚಿತ್ರಗಳು ತೋರಿಸಿವೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡಗಳು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?