Home News Plane Crash: ಅಹಮದಾಬಾದ್ ವಿಮಾನ ಪತನ – ವಾರದ ಹಿಂದೆಯೇ ಭವಿಷ್ಯ ನುಡಿದು, ಸುಳಿವು ಕೊಟ್ಟಿದ್ದ...

Plane Crash: ಅಹಮದಾಬಾದ್ ವಿಮಾನ ಪತನ – ವಾರದ ಹಿಂದೆಯೇ ಭವಿಷ್ಯ ನುಡಿದು, ಸುಳಿವು ಕೊಟ್ಟಿದ್ದ ಖ್ಯಾತ ಜ್ಯೋತಿಷಿ!!

Hindu neighbor gifts plot of land

Hindu neighbour gifts land to Muslim journalist

Plane Crash : ಇಂದು ಅನೇಕ ಜ್ಯೋತಿಷ್ಯರು, ಶಾಸ್ತ್ರದವರು, ಸ್ವಾಮೀಜಿಗಳು ಮುಂದಾಗುವ ಕುರಿತು ಕೆಲವು ನಿಖರವಾದ ಭವಿಷ್ಯಗಳನ್ನು ನುಡಿಯುತ್ತಿದ್ದಾರೆ. ಅಂತೆ ಇದೀಗ ವಾರದ ಹಿಂದೆ ಜ್ಯೋತಿಷಿ ಒರೊಬ್ಬರು ಅಹಮದಾಬಾದ್ ವಿಮಾನ ದುರಂತದ ಕುರಿತು ಭವಿಷ್ಯ ನುಡಿದಿದ್ದು ಈಗ ಬೆಳಕಿಗೆ ಬಂದಿದೆ.

ಹೌದು, ಆಸ್ಟ್ರೋ ಶರ್ಮಿಷ್ಠಾ ಎಂಬ ಜ್ಯೋತಿಷಿ ಕಳೆದ ಜೂನ್ 5 ರಂದು ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್​ ನಲ್ಲಿ ವಿಮಾನ ಅಪಘಾತದ ಬಗ್ಗೆ ಎಚ್ಚರಿಕೆ ನೀಡಿದ್ದರು. ಅವರು ಟ್ವೀಟ್‌ ಮಾಡಿದ ಸರಿಯಾಗಿ 7 ದಿನಗಳ ನಂತರ ಅಂದ್ರೆ ಇಂದು (ಜೂ.12) ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಅದರ ಬೆನ್ನಲ್ಲೇ ಆಸ್ಟ್ರೋಶರ್ಮಿತಾ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.

ಶರ್ಮಿಷ್ಠಾ ಹೇಳಿದ್ದೇನು?
ಶರ್ಮಿಷ್ಠಾ ಅವರು, ವಿಮಾನ ಅಪಘಾತ ಮತ್ತು ವಾಯುಯಾನ ವಲಯದಲ್ಲಿ ಸಂಭವನೀಯ ವಿನಾಶ ಎಂದು ಎಚ್ಚರಿಸಿದ್ದರು. ಕಳೆದ ತಿಂಗಳು ಅವರು ಗ್ರಹಗತಿಗಳನ್ನು ನೋಡಿ ಭಾರಿ ವಿಮಾನ ಅಪಘಾತದ ಮುನ್ಸೂಚನೆ ಇರುವುದಾಗಿ ತಿಳಿಸಿದ್ದರು. ಅದನ್ನೇ ಉಲ್ಲೇಖಿಸಿ ಪುನಃ ಕಳೆದ ವಾರ ಇನ್ನೊಂದು ಟ್ವೀಟ್​ ಮಾಡಿದ್ದ ಅವರು, ಗುರು, ಮೃಗಶಿರ ಮತ್ತು ಆರ್ದ್ರ ನಕ್ಷತ್ರದಲ್ಲಿದ್ದಾಗ, ವಾಯುಯಾನದಲ್ಲಿ ಅಭಿವೃದ್ಧಿ ಇರುತ್ತದೆ ಆದರೆ ಸುರಕ್ಷತೆ ಮತ್ತು ಸ್ಥಿರತೆಯ ಕೊರತೆ ಇರುತ್ತದೆ. ಭೀಕರ ಅಪಘಾತ ಸಂಭವಿಸುವ ಸಾಧ್ಯತೆಯ ಬಗ್ಗೆ ನನ್ನ ಕಳೆದ ತಿಂಗಳ ಮಾತಿಗೆ ಈಗಲೂ ಬದ್ಧಳಾಗಿದ್ದೇನೆ ಎಂದಿದ್ದರು. ವಿಮಾನ ಅಪಘಾತಗಳು ಭಾರಿ ಸದ್ದು ಮಾಡುತ್ತವೆ, ಇದು ಹೆಡ್​ಲೈನ್​ ಆಗುತ್ತದೆ ಎಂದು ಶರ್ಮಿಷ್ಠಾ ಹೇಳಿದ್ದರು.

ಇದೀಗ ದುರಂತದ ಬಳಿಕ ಮತ್ತೊಂದು ಟ್ವೀಟ್​ ಮಾಡಿರುವ ಅವರು, ಇಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ನಾವು ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ದುರದೃಷ್ಟಕರ. ಗುರು ಗ್ರಹವು ಇನ್ನೂ ಆರ್ದ್ರಾ ಪ್ರವೇಶಿಸಿಲ್ಲ, ಮತ್ತು ಭಾರತದ ಮಂಗಳ ಮಹಾದಶಾ ಇನ್ನೂ ಪ್ರಾರಂಭವಾಗಿಲ್ಲ – ಆದರೆ ಈಗಾಗಲೇ ಬಹಳಷ್ಟು ಪ್ರಾರಂಭವಾಗಿದೆ.ಇನ್ನೂ ಹೆಚ್ಚಿನವು ಇದೆ ಎಂದಿದ್ದಾರೆ.

ಅಂದಹಾಗೆ ಜರಾತ್​ನ ಅಹಮ್ಮದಾಬಾದ್​ನಲ್ಲಿ ಮೇಘನಿ ನಗರ ಪ್ರದೇಶದಲ್ಲಿ ಪ್ರಯಾಣಿಕರು, ಸಿಬ್ಬಂದಿ ಸೇರಿ ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸುಮಾರು 180 ಮಂದಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?