Home News Dehradun: ವೈದ್ಯೆ ಅತ್ಯಾಚಾರ, ಹತ್ಯೆ ಬೆನ್ನಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಬಸ್ ನಲ್ಲಿ ಐವರಿಂದ ಸಾಮೂಹಿಕ...

Dehradun: ವೈದ್ಯೆ ಅತ್ಯಾಚಾರ, ಹತ್ಯೆ ಬೆನ್ನಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಬಸ್ ನಲ್ಲಿ ಐವರಿಂದ ಸಾಮೂಹಿಕ ಅತ್ಯಾಚಾರ!

Hindu neighbor gifts plot of land

Hindu neighbour gifts land to Muslim journalist

Dehradun: ದೇಶದಲ್ಲಿ ಅತ್ಯಾಚಾರ ಕೃತ್ಯ ತಾಂಡವವಾಡುತ್ತಿದೆ. ಈಗಾಗಲೇ ಕೋಲ್ಕತಾದ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಬಸ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.

ಹೌದು, ಐಎಸ್​ಬಿಟಿ ಬಸ್​ನಲ್ಲಿ ಮೊರಾದಾಬಾದ್​ನಿಂದ ಡೆಹ್ರಾಡೂನ್​(Dehradun) ಗೆ ಹೊರಟಿದ್ದ ಅಪ್ರಾಪ್ತ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದು,  ಈ ಘಟನೆ ಆಗಸ್ಟ್ 13 ರಂದು ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ

ಪೊಲೀಸರ ಪ್ರಕಾರ, ಹುಡುಗಿ ಮೊರಾದಾಬಾದ್‌ನಿಂದ ಯುಪಿ ರೋಡ್‌ವೇಸ್ ಬಸ್‌ಗೆ ಏರಿದ್ದಳು. ಬಸ್ ನಲ್ಲಿರುವ ಜನ ಖಾಲಿಯಾದ ಬಳಿಕ ಐವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯದ ಬಳಿಕ ಆರೋಪಿಗಳು ಬಾಲಕಿಯನ್ನು ಬಸ್‌ನಿಂದ ಕೆಳಗಿಳಿಸಿ ತೆರಳಿದ್ದರು. ನಂತರ ಮಕ್ಕಳ ಕಲ್ಯಾಣ ಸಮಿತಿಯು ಸಂಕಷ್ಟ ಸ್ಥಿತಿಯಲ್ಲಿದ್ದ ಆಕೆಯನ್ನು ರಕ್ಷಿಸಿದ್ದಾರೆ.

ಕೌನ್ಸೆಲಿಂಗ್ ವೇಳೆ ಬಾಲಕಿ ತಾನು ಪಂಜಾಬ್ ಮೂಲದವಳು ಮತ್ತು ಮುಸ್ಲಿಂ ಎಂದು ಹೇಳಿದ್ದಾಳೆ. ತಂದೆ ತಾಯಿ ತೀರಿ ಹೋಗಿದ್ದಾರೆ ಈ ಹಿನ್ನಲೆ ಸಹೋದರಿ ಮತ್ತು ಸೋದರ ಮಾವನ ಜೊತೆ ವಾಸಿಸುತ್ತಿದ್ದಳು. ಆಗಸ್ಟ್ 11 ರಂದು ಸಹೋದರಿ ಮತ್ತು ಸೋದರ ಮಾವ ಅವರನ್ನು ಮನೆಯಿಂದ ಹೊರಹಾಕಿದರು. ಬಳಿಕ ಆಕೆ ಬಸ್ಸಿನಲ್ಲಿ ದೆಹಲಿ ತಲುಪಿದಳು. ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಮೊರಾದಾಬಾದ್ ತಲುಪಿದ ಆಕೆ ಆಗಸ್ಟ್ 12ರ ಸಂಜೆ ಡೆಹ್ರಾಡೂನ್‌ಗೆ ಹೋಗುತ್ತಿದ್ದ ಬಸ್ಸನ್ನು ನೋಡಿ ಹತ್ತಿದ್ದಳು ಎನ್ನಲಾಗಿದೆ.

ಈಗಾಗಲೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಕೂಡ ಐಎಸ್‌ಬಿಟಿ ಪೋಸ್ಟ್‌ಗೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಅವರ ಸೂಚನೆ ಮೇರೆಗೆ ಪೊಲೀಸರು ನಾಲ್ವರು ಅಪರಿಚಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.