Home Breaking Entertainment News Kannada ಖ್ಯಾತ ಕಿರುತೆರೆ ನಟಿ ನೇಣು ಬಿಗಿದು ಆತ್ಮಹತ್ಯೆ!!

ಖ್ಯಾತ ಕಿರುತೆರೆ ನಟಿ ನೇಣು ಬಿಗಿದು ಆತ್ಮಹತ್ಯೆ!!

Hindu neighbor gifts plot of land

Hindu neighbour gifts land to Muslim journalist

ಖ್ಯಾತ ಕಿರುತೆರೆ ನಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ.

ಒಡಿಶಾದ ಕಿರುತೆರೆ ನಟಿ 24 ವರ್ಷದ ರಶ್ಮಿರೇಖಾ ಓಜಾ ಆತ್ಮಹತ್ಯೆ ಮಾಡಿಕೊಂಡವರು.

ಈಕೆ ಸಂತೋಷ್ ಪಾತ್ರ ಎಂಬಾತನ ಜೊತೆಗೆ ಲಿವ್‌ಇನ್ ರಿಲೇಶನ್ ನಲ್ಲಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಸಂತೋಷ್ ಆಕೆಯನ್ನು ತೊರೆದು ಹೋಗಿದ್ದು, ಇದರಿಂದ ಮನನೊಂದು ಸಾವಿಗೆ ಶರಣಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಭುವನೇಶ್ವರದ ನಯಪಳ್ಳಿ ಭಾಗದಲ್ಲಿ ರಶ್ಮಿರೇಖಾ ಓಜಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಅಸಹಜ ಸಾವು ಎಂದು ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ, ರಶ್ಮಿರೇಖಾ ತಂದೆ ಮಾಡಿದ ಗಂಭೀರ ಆರೋಪದಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ತನಿಖೆ ಆರಂಭಿಸಿದ್ದಾರೆ.

ಸದ್ಯ ರಶ್ಮಿರೇಖಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರದಲ್ಲಿ ರಶ್ಮಿರೇಖಾ ಸಾವಿಗೆ ಕಾರಣ ಏನು ಎಂಬುದು ತಿಳಿದು ಬರಲಿದೆ. ‘ಪ್ರಾಥಮಿಕ ತನಿಖೆಯಿಂದ ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ. ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ನಟಿ ಬರೆದಿದ್ದಾರೆ. ಆದಾಗ್ಯೂ ನಾವು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ’ ಎಂದು ಭುವನೇಶ್ವರ ಡಿಸಿಪಿ ಮಾಹಿತಿ ನೀಡಿದ್ದಾರೆ.

‘ಈ ಸಾವಿನ ಹಿಂದೆ ನನ್ನ ಮಗಳ ಬಾಯ್​ಫ್ರೆಂಡ್ ಸಂತೋಷ್ ಪಾತ್ರ ಕೈವಾಡ ಇದೆ. ಶನಿವಾರ (ಜೂನ್ 18) ಬೆಳಗ್ಗೆ ನಾವು ಮಗಳಿಗೆ ಕರೆ ಮಾಡಿದ್ದೆವು. ಆದರೆ, ಅವಳು ಕರೆ ಸ್ವೀಕರಿಸಲಿಲ್ಲ. ಸಂತೋಷ್ ಈ ವಿಚಾರವನ್ನು ನಮಗೆ ಹೇಳಿದ. ಸಂತೋಷ್ ಹಾಗೂ ನನ್ನ ಮಗಳು ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ನಮಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ’ ಎಂದು ರಶ್ಮಿರೇಖಾ ತಂದೆ ಹೇಳಿದ್ದಾರೆ. ಅಲ್ಲದೆ, ಮಗಳ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.