Home Entertainment Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ1ಆರೋಪಿ ಪವಿತ್ರಾಗೌಡ ಜೈಲುಪಾಲು

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ1ಆರೋಪಿ ಪವಿತ್ರಾಗೌಡ ಜೈಲುಪಾಲು

Actor Darshan

Hindu neighbor gifts plot of land

Hindu neighbour gifts land to Muslim journalist

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್‌ ಸೇರಿ ಎಲ್ಲಾ 17 ಮಂದಿ ಆರೋಪಿಗಳನ್ನು ಇಂದು ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪವಿತ್ರಾ ಗೌಡ, ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌, ಅನುಕುಮಾರ್‌, ನ್ಯಾಯಾಂಗ ಬಂಧನದ ಆದೇಶ ನೀಡಿದ್ದಾರೆ.

ಪವಿತ್ರಾ ಗೌಡ ಜೈಲುಪಾಲಾಗಿರುವ ಹಿನ್ನೆಲೆಯಲ್ಲಿ ಪವಿತ್ರಾ ಗೌಡರನ್ನು ನೋಡಲು ಮಗಳು, ಅಜ್ಜಿ ಬಂದಿದ್ದಾರೆ.  ದರ್ಶನ್, ಪ್ರದೋಷ್, ಧನರಾಜ್, ವಿನಯ್ ಪೊಲೀಸ್ ಕಸ್ಟಡಿಗೆ ನಾಲ್ವರನ್ನು ಹೊರತುಪಡಿಸಿ ಉಳಿದವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಕೋರ್ಟ್. ತನಿಖೆಗೆ ಸಹಕರಿಸುತ್ತಿಲ್ಲವೆಂದು ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ.

ನಟ ದರ್ಶನ್‌ ಆಂಡ್‌ ಗ್ಯಾಂಗ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಗೆ ಪೊಲೀಸರು ಹಾಜರುಪಡಿಸಿದ್ದು, ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆ ಕೋರ್ಟ್‌ಗೆ ಕರೆತಂದಿದ್ದಾರೆ ಪೊಲೀಸರು. ದರ್ಶನ್‌ ಸೇರಿ ಉಳಿದವರನ್ನು ಪೊಲೀಸರು ವಶಕ್ಕೆ ನೀಡುವಂತೆ ಕೇಳಿದರು. ಪರಪ್ಪನ ಅಗ್ರಹಾರ ಜೈಲಿನ ಗೇಟ್‌ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಪವಿತ್ರ ಗೌಡ ಸೇರಿ ಎಂಟು ಮಂದಿ ನ್ಯಾಯಾಂಗ ಬಂಧನವಾಗಿದೆ.

ಈಗಾಗಲೇ ಪೊಲೀಸ್‌ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಕೃತ್ಯ ನಡೆಸಿದಾಗ ಧರಿಸಿದ ಬಟ್ಟೆ, ಮೊಬೈಲ್‌, ಸ್ಥಳ ಮಹಜರು ಸೇರಿ ಹಲವು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದು, ಈಗಾಗಲೇ ಈ ಪ್ರಕರಣ ಕುರಿತು ಒಂಭತ್ತು ದಿನಗಳ ಕಾಲ ದರ್ಶನ್‌ ಅಲಿಯಾಸ್‌ ಡಿ ಬಾಸ್‌ ಪೊಲೀಸ್‌ ಕಸ್ಟಡಿ ವಾಸ ಮಾಡಿದ್ದಾರೆ.