Home News Udupi: ಟಿಪ್ಪರ್ ಲಾರಿ- ಸ್ಯಾಂಟ್ರೋ ಕಾರು ಭೀಕರ ಅಪಘಾತ, ಚಾಲಕನ ಸಮೇತ ಕಾರನ್ನು ಎಳೆದೊಯ್ದ...

Udupi: ಟಿಪ್ಪರ್ ಲಾರಿ- ಸ್ಯಾಂಟ್ರೋ ಕಾರು ಭೀಕರ ಅಪಘಾತ, ಚಾಲಕನ ಸಮೇತ ಕಾರನ್ನು ಎಳೆದೊಯ್ದ ಲಾರಿ ಡ್ರೈವರ್!! ಭಯಾನಕ ವಿಡಿಯೋ ವೈರಲ್ !!

Hindu neighbor gifts plot of land

Hindu neighbour gifts land to Muslim journalist

Accident :ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಾಹನ ಅಪಘಾತಗಳು (Accident)ಮೈ ನಡುಗಿಸುತ್ತವೆ. ವ್ಯಕ್ತಿಗೆ ಗುದ್ದಿದ ಕಾರು ಕಿಲೋಮೀಟರ್ ಗಟ್ಟಲೆ ವ್ಯಕ್ತಿಯನ್ನು ಎಳೆದೊಯ್ದಿತು. ಮಹಿಳೆಯನ್ನು ದೂಡಿಕೊಂಡು ದೂರ ಕೊಂಡೊಯ್ದು ಬಿಟ್ಟಿತು, ಬೈಕ್ ಅನ್ನು ಬಸ್ ಎಳೆದೊಯ್ದಿತು ಎಂಬಂತಹ ಪ್ರಕರಣಗಳು ಕುಳಿತಲ್ಲೇ ನಮ್ಮನ್ನೂ ಬೆವರುವಂತೆ ಮಾಡುತ್ತದೆ. ಅಂತೆಯೇ ಇದೀಗ ಅಂತದೇ ಒಂದು ಅಪಘಾತ ನಡೆದಿದ್ದು, ವಿಡಿಯೋ ಕೂಡ ವೈರಲ್ ಆಗ್ತಿದೆ.

ಹೌದು, ಉಡುಪಿಯಲ್ಲಿ(Udupi) ಟಿಪ್ಪರ್(Tippar) ಲಾರಿ ಹಾಗೂ ಸ್ಯಾಂಟ್ರೋ ಕಾರೊಂದರ ನಡುವೆ ಭೀಕರ ಅನಘಾತವಾಗಿದ್ದು, ಕಾರು ಲಾರಿಯ ಹಿಂದುಗಡೆಯ ದಂಪರ್ ಗೆ ಸಿಕ್ಕಿಕೊಂಡಿದೆ. ಆದರೆ ಇದನ್ನೂ ಕಿಂಚಿತ್ತು ಲೆಕ್ಕಿಸದೆ, ಆ ಕಡೆ ಸ್ವಲ್ಪವೂ ಗಮನ ಹರಿಸದೆ ಲಾರಿ ಡ್ರೈವರ್(Driver), ಗಾಡಿ ನಿಲ್ಲಿಸದೆ ಹಾಗೇ ಕಾರನ್ನು ಎಳೆದುಕೊಂಡು ಹೋಗುತ್ತಿದ್ದಾನೆ. ಇದೀಗ ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.

ಅಂದಹಾಗೆ ಸಾಗರ(Sagara) ದಿಂದ ಮಂಗಳೂರು(Mangalore)ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರ್ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದೆ. ಈ ವೇಳೆ ಹೆದರಿಕೆಯಿಂದ ಟಿಪ್ಪರ್ ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿದ್ದಾನೆ. ಆದರೆ ಟಿಪ್ಪರ್ ನ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ಚಾಲಕನಿಗೆ ಗೊತ್ತಿಲ್ಲ, ಈ ನಡುವೆ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಟಿಪ್ಪರ್ ಚಾಲಕನಿಗೆ ಬೈದು ಗಾಡಿಯನ್ನು ನಿಲ್ಲಿಸಿದ್ದಾರೆ.

ಗಾಡಿ ನಿಲ್ಲಿಸಿದ ಬಳಿಕ ಟಿಪ್ಪರನ್ನು ಪಡುಬಿದ್ರಿ(Padubidri) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಶುಕ್ರವಾರ ನಮಾಜ್’ಗೆ 1 ಗಂಟೆ ಅವಕಾಶ !ವಿಧಾನಸಭೆಯಲ್ಲಿ ನಮಾಜ್ – ನಿರ್ಧಾರ ಸರ್ಕಾರದ ಅಂಗಳದಲ್ಲಿ !