Home News Hijab: ಸಿಲಿಂಡರ್‌ ಸ್ಫೋಟದಿಂದ ರಕ್ಷಣೆ, ಹಿಜಾಬ್‌ ತರಲೆಂದು ಮತ್ತೆ ಮನೆಯೊಳಗೆ ಓಡಿ ಹೋಗಿ ಸಾವಿಗೀಡಾದ ಯುವತಿ!

Hijab: ಸಿಲಿಂಡರ್‌ ಸ್ಫೋಟದಿಂದ ರಕ್ಷಣೆ, ಹಿಜಾಬ್‌ ತರಲೆಂದು ಮತ್ತೆ ಮನೆಯೊಳಗೆ ಓಡಿ ಹೋಗಿ ಸಾವಿಗೀಡಾದ ಯುವತಿ!

Hindu neighbor gifts plot of land

Hindu neighbour gifts land to Muslim journalist

Hijab: ಮನೆಯೊಂದರಲ್ಲಿ ಸಿಲಿಂಡರ್‌ ಸ್ಫೋಟ ಆಗಿ ಹೊತ್ತಿ ಉರಿಯುತ್ತಿತ್ತು. ಆ ಮನೆಯಲ್ಲಿದ್ದ ಯುವತಿಯನ್ನು ಎಲ್ಲರೂ ಸೇರಿ ಹೇಗೋ ರಕ್ಷಣೆ ಮಾಡಿದ್ದರು. ಆದರೆ ಹಿಜಾಬ್‌ ತೆಗೆದುಕೊಂಡು ಬರುತ್ತೇನೆ ಎಂದು ಮತ್ತೆ ಮನೆಯೊಳಗೆ ಓಡಿ ಹೋಗಿ ಬೆಂಕಿಯ ಜ್ವಾಲೆಗೆ ಸಿಲುಕಿ ಸಾವಿಗೀಡಾಗಿದ್ದಾಳೆ.

14 ತಿಂಗಳ ಮಗು ಸೇರಿ ಇಬ್ಬರು ಈ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಗುಲಾಬ್‌ಸಾಗರ್‌ ಪ್ರದೇಶದ ಮಿಯಾನ್‌ ಕಿ ಮಸೀದಿ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಅಡುಗೆ ಮನೆಯಲ್ಲಿ ಆಹಾರ ತಯಾರು ಮಾಡುವಾಗ ಘಟನೆ ನಡೆದಿದೆ. ಸಿಲಿಂಡರ್‌ ಬ್ಲಾಸ್‌ ಆದಾಗ ಬೆಂಕಿ ಅಡುಗೆ ಮನೆ ಪಕ್ಕದ ಕೋಣೆಗೆ ಬೇಗನೆ ಹರಡಿತು. ಹೊಗೆ ಮೂರು ಅಂತಸ್ತಿನ ತುಂಬೆಲ್ಲ ತುಂಬಿತು. 19 ವರ್ಷದ ಯುವತಿ ಮತ್ತು 14 ತಿಂಗಳ ಮಗು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡರು.

ಸಾವಿಗೀಡಾದವರಲ್ಲಿ ಒಬ್ಬಾಕೆ ಸಾದಿಯಾ. ಈಕೆ ಕಟ್ಟಡದ ಎರಡನೇ ಮಹಡಿಯ ಕೋಣೆಯಲ್ಲಿ ನಮಾಜ್‌ ಓದುವಾಗ ಬೆಂಕಿ ಕಾಣಿಸಿದೆ. ಅಲ್ಲಿದ್ದವರೆಲ್ಲ ಆಕೆಗಾಗಿ ಎರಡು ಗಂಟೆ ಹುಡುಕಾಡಿದ್ದಾರೆ. ಆಕೆ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ತಾನು ಎಲ್ಲಿದ್ದೇನೆ ಎಂದು ಹೇಳಿದ್ದಾಳೆ. ಅಗ್ನಿಶಾಮಕ ದಳದವರೊಂದಿಗೆ ಆಕೆಯನ್ನು ಉಳಿಸಲಾಗಿದೆ.

ಆಕೆಯನ್ನು ಕೋಣೆಯಿಂದ ಹೊರಗೆ ಬರುವಾಗ ತನ್ನ ಹಿಜಾಬ್‌ ಮರೆತಿದ್ದೇನೆಂದು ಅದನ್ನು ಮರಳಿ ಪಡೆಯಲು ವಾಪಾಸ್‌ ಓಡಿದ್ದಾಳೆ. ಅಷ್ಟರಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ. ರಕ್ಷಣಾ ತಂಡ ಆಕೆಯನ್ನು ಮತ್ತೆ ಹೊರಗೆ ತೆಗೆದರೂ, ತೀವ್ರ ಸುಟ್ಟಗಾಯದಿಂದ ಆಕೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವಿಗೀಡಾಗಿದ್ದಾಳೆ.