Home latest ತನ್ನ ಒಳ ಉಡುಪಿನಲ್ಲಿ ಒಂದು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಾಣೆ| 19ರ ಯುವತಿ ಅರೆಸ್ಟ್‌

ತನ್ನ ಒಳ ಉಡುಪಿನಲ್ಲಿ ಒಂದು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಾಣೆ| 19ರ ಯುವತಿ ಅರೆಸ್ಟ್‌

Hindu neighbor gifts plot of land

Hindu neighbour gifts land to Muslim journalist

ಯುವತಿಯೊಬ್ಬಳು ತನ್ನ ಒಳ ಉಡುಪಿನಲ್ಲಿ ಒಂದು ಕೋಟಿ ಮೌಲ್ಯದ ಚಿನ್ನವನ್ನಿರಿಸಿ, ಕಳ್ಳಸಾಗಾಣೆ ಮಾಡುತ್ತಿರುವ ಘಟನೆ ಕೇರಳದ ಕರೀಪುರ ವಿಮಾನ ನಿಲ್ದಾಣದ ಬಳಿ ಬೆಳಕಿಗೆ ಬಂದು, ಇದೀಗ ಈಕೆಯನ್ನು ಬಂಧಿಸಲಾಗಿದೆ.

ಯುವತಿಯನ್ನು ಶಹಲಾ (19) ಎಂದು ಗುರುತಿಸಲಾಗಿದ್ದು, ಈಕೆ ಕಾಸರಗೋಡು ಮೂಲದವಳು ಎನ್ನಲಾಗಿದೆ.

ಕೇರಳದ ಕರೀಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುವತಿಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆದರೆ ಈ ವೇಳೆ ಆಕೆಯ ಬಳಿ ಚಿನ್ನವಿರುವ ಸುಳಿವು ಸಿಗಲಿಲ್ಲ. ನಂತರ ಶಹಲಾ ವಿಮಾನ ನಿಲ್ದಾಣದ ಹೊರಗೆ ಬಂದಿದ್ದಾಳೆ. ತಪಾಸಣೆಯಲ್ಲಿ ಸಿಗದ ಚಿನ್ನದ ಸುಳಿವು ಈ ಸಮಯದಲ್ಲಿ, ಯುವತಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಳೆ ಎಂಬ ಮಾಹಿತಿ ಪೋಲೀಸರಿಗೆ ಲಭ್ಯವಾಗಿದೆ. ಮಾಹಿತಿ ಪ್ರಕಾರ ಕರೀಪುರ ಪೊಲೀಸರು ಯುವತಿಯನ್ನು ಪರಿಶೀಲನೆ ನಡೆಸಿದ್ದಾರೆ.

ಶಹಲಾ ಲಗೇಜುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೋಲೀಸರಿಗೆ ಯಾವುದೇ ರೀತಿಯ ಚಿನ್ನ ಪತ್ತೆಯಾಗಲಿಲ್ಲ. ಅಲ್ಲದೆ, ಆಕೆಯನ್ನು ವಿವಿಧ ರೀತಿಯಲ್ಲಿ ವಿಚಾರಿಸಿದರೂ ಯಾವುದೇ ವಿಚಾರ ಆಕೆಯ ಬಾಯಿಂದ ಹೊರ ಬರಲಿಲ್ಲ. ಇದಾದ ಬಳಿಕ ಆಕೆಯ ಪೂರ್ತಿ ದೇಹವನ್ನು ತಪಾಸಣೆ ನಡೆಸಿದಾಗ, ಶಹಲಾ ಒಳಉಡುಪಿನಲ್ಲಿ ಪ್ಯಾಕೆಟ್ ನಲ್ಲಿ ಚಿನ್ನವಿರುವುದು ಪತ್ತೆಯಾಗಿದೆ.

ಯುವತಿಯ ಒಳ ಉಡುಪಿನಲ್ಲಿ ಸುಮಾರು 1884 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದಿಷ್ಟೇ ಅಲ್ಲದೆ ವಿಚಾರಣೆ ವೇಳೆ ಯುವತಿಗೆ ಕಣ್ಣೂರು ಮೂಲದ ಕೊಟೇಶನ್ ಗ್ಯಾಂಗ್ ಜೊತೆಗೆ ಸಂಪರ್ಕವಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಆಕೆ ದುಬೈನಿಂದ ಕೇರಳಕ್ಕೆ ಚಿನ್ನವನ್ನು ಕದ್ದು ಸಾಗಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇನ್ನೂ, ಚಿನ್ನದ ಹಿಂದಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿಗಳು ತಿಳಿದು ಬರಬೇಕಿದೆ ಎಂದು ಪೋಲೀಸರು ತಿಳಿಸಿದ್ದಾರೆ.