Home News Dog Bite: 2025ರಲ್ಲಿ ಕರ್ನಾಟಕದಲ್ಲಿ ಒಟ್ಟು 23 ಮಂದಿ ರೇಬಿಸ್‌ನಿಂದ ಸಾವು – ಬೆಂಗಳೂರಿನಲ್ಲೇ 17...

Dog Bite: 2025ರಲ್ಲಿ ಕರ್ನಾಟಕದಲ್ಲಿ ಒಟ್ಟು 23 ಮಂದಿ ರೇಬಿಸ್‌ನಿಂದ ಸಾವು – ಬೆಂಗಳೂರಿನಲ್ಲೇ 17 ಜನರು ಬಲಿ

Hindu neighbor gifts plot of land

Hindu neighbour gifts land to Muslim journalist

Dog Bite: ರಾಜ್ಯದ ಅನೇಕ ನಗರ ಹಳ್ಳಿ ಸೇರಿದಂತೆ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಉದ್ಯಾನ ನಗರಿ ಬೆಂಗಳೂರಿನಲ್ಲಂತೂ ಕಳೆದ ಆರು ತಿಂಗಳಿನಲ್ಲಿ ರೇಬಿಸ್ನಿಂದ ಬಲಿಯಾದವರ ಸಂಖ್ಯೆ ಕೇಳಿದರೆ ನೀವು ಬೆಚ್ಚಿಬೀಳೋದು ಪಕ್ಕಾ. ಇದೀಗ ಸಾಂಕ್ರಮಿಕ ರೋಗಗಳ ಆಸ್ಪತ್ರೆಯಿಂದ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.

ರಾಜ್ಯ ಆರೋಗ್ಯ ಇಲಾಖೆಯ ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ಪ್ರಕಾರ, 2025ರ ಜನವರಿಯಿಂದ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ 2,60,514 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಜನವರಿಯಿಂದ ಜೂನ್ ಅಂತ್ಯದವರೆಗೆ ರೇಬಿಸ್‌ನಿಂದಾಗಿ ರಾಜ್ಯದಲ್ಲಿ ಒಟ್ಟು 23 ಜನರು ಮೃತಪಟ್ಟಿದ್ದು, ಬೆಂಗಳೂರಿನಲ್ಲಿಯೇ 17 ಜನರು ಸಾವನಪ್ಪಿದ್ದಾರೆ. ಕಳೆದ 2 ವರ್ಷಗಳಲ್ಲಿ ರೇಬಿಸ್‌ನಿಂದ ಮೃತಪಟ್ಟವರ ಸಂಖ್ಯೆ 60 ದಾಟಿದೆ. ಜುಲೈ ಕೊನೆಯ ವಾರದಲ್ಲಿ 10,242 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 13,831 ನಾಯಿಕಡಿತ ಕೇಸ್‌ಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ 8,878 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 4,408 ಕೇಸ್‌ಗಳು ವರದಿಯಾಗಿದೆ. ಆದರೆ, ಸದ್ಯ BBMP ವ್ಯಾಪ್ತಿಯಲ್ಲಿ ರೇಬಿಸ್ ಸಾವುಗಳು ದಾಖಲಾಗಿಲ್ಲ, ಆದರೆ ಬೆಂಗಳೂರು ಗ್ರಾಮಾಂತರದಲ್ಲಿ 9 ಸಾವುಗಳು ವರದಿಯಾಗಿವೆ. ವಿಜಯಪುರ (15,527), ಹಾಸನ (13,388), ಮತ್ತು ದಕ್ಷಿಣ ಕನ್ನಡ (12,524) ಜಿಲ್ಲೆಗಳು ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ.

ರೇಬಿಸ್ ಒಂದು ಮಾರಣಾಂತಿಕ ವೈರಸ್ ನಿಂದ ಬರುವ ರೋಗವಾಗಿದ್ದು, ಮುಖ್ಯವಾಗಿ ಸೋಂಕಿರುವ ನಾಯಿಗಳು ಕಚ್ಚಿದರೆ ಅವು ಮನುಷೈರಿಗೆ ಹರಡುತ್ತದೆ. ವಿಶ್ವದ ಶೇ.36ರಷ್ಟು ರೇಬಿಸ್ ಸಾವುಗಳು ಭಾರತದಲ್ಲಿ ಆಘುತ್ತಿದೆ. ಕರ್ನಾಟಕದಲ್ಲಿ ನಾಯಿ ಕಡಿತ ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಲ್ಲದೆ ನಾಯಿಗಳಿಗೆ ಆಹಾರ ಕೊರತೆ, ಮತ್ತು ಅವುಗಳಿಗೆ ಸಮರ್ಪಕ ರೇಬಿಸ್ ಲಸಿಕೆಯನ್ನು ನೀಡದೇ ಇರುವುದು ಈ ಸಮಸ್ಯೆಗಳಿಗೆ ಪ್ರಮುಖ ಕಾರಣ.

ಇದನ್ನೂ ಓದಿ: Water scarcity: ಯುದ್ಧದಿಂದ ಬಳಲಿದ್ದ ನಾಗರೀಕರಿಗೆ ಮತ್ತೊಂದು ಶಾಕ್‌ – ಇರಾನ್ ನೀರಿನ ಬಿಕ್ಕಟ್ಟಿನ ಅಂಚಿನಲ್ಲಿದೆ – ಅಧ್ಯಕ್ಷ ಪೆಜೆಶ್ಚಿಯನ್‌ ಎಚ್ಚರಿಕೆ