Home National ಸಾಕಿ ಬೆಳೆಸಿದ ಮಗನೇ ಅಮ್ಮನ ಎದೆಗೇ ಒದ್ದ | 80ವರ್ಷ ವಯಸ್ಸಿನ ಹೆತ್ತಮ್ಮನಿಗೆ ಮಗ ತಂದಿಟ್ಟ...

ಸಾಕಿ ಬೆಳೆಸಿದ ಮಗನೇ ಅಮ್ಮನ ಎದೆಗೇ ಒದ್ದ | 80ವರ್ಷ ವಯಸ್ಸಿನ ಹೆತ್ತಮ್ಮನಿಗೆ ಮಗ ತಂದಿಟ್ಟ ದುರಂತ ಸಾವು!

Hindu neighbor gifts plot of land

Hindu neighbour gifts land to Muslim journalist

ಹೆತ್ತು-ಹೊತ್ತು ಸಾಕಿದ ತಾಯಿ ತಂದೆಯರ ಋಣವನ್ನು ಜನ್ಮದಲ್ಲಿ ತೀರಿಸಲಾಗುವುದಿಲ್ಲ. ಆದರೆ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಹೆತ್ತವರನ್ನು ವಿರೋಧಿಸುವುದು, ಸಣ್ಣಸಣ್ಣದಕ್ಕೂ ಜಗಳ ತೆಗೆಯುತ್ತಾರೆ. ಕೆಲವರಂತೂ ಅನಾಥಾಶ್ರಮಕ್ಕೂ ಕಿಂಚಿತ್ತು ಯೋಚಿಸದೇ ಸೇರಿಸುತ್ತಾರೆ. ಕೆಲವರು ಮನೆಯಿಂದ ಹೊರಹಾಕಿ ಕೆಟ್ಟತನವನ್ನು ತೋರುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ಮಗನು ಜೀವ ಕೊಟ್ಟ ತಾಯಿಯ ಪ್ರಾಣವನ್ನೇ ತೆಗಿದಿದ್ದಾನೆ!!

ಹೌದು, ಕೇರಳದ ಕೊಟ್ಟಾಯಂ ಜಿಲ್ಲೆಯ ಬಿಜು (52) ಮತ್ತು ಆತನ ತಾಯಿ ಸಾಥಿ(80) ಪಣಚಿಕ್ಕಾಡ್ ನಿವಾಸಿಗಳು. ಬಿಜುನಿಗೆ ಆತನ ಸೋದರಿಯನ್ನು ಕಂಡರೆ ಆಗುತ್ತಿರಲಿಲ್ಲ. ಮದುವೆಯಾಗಿ ಹೋಗಿದ್ದ ಅವಳು ತವರು ಮನೆಗೆ ಬರುವುದನ್ನು ವಿರೋಧಿಸುತ್ತಲೇ ಬಂದಿದ್ದ. ಆಕೆ ವಯಸ್ಸಾದ ತಾಯಿಯನ್ನು ನೋಡಲು ಆಗಾಗ ಇಲ್ಲಿಗೆ ಬರುತ್ತಿರುವುದನ್ನು ಸಹಿಸದ ಬಿಜು ತನ್ನ ತಾಯಿಯ ಬಳಿ ದಿನಾಲೂ ರೇಗಾಡುತ್ತಿದ್ದ.

ಇತ್ತೀಚೆಗೆ ಒಮ್ಮೆ ಆತನ ಸಹೋದರಿ ಅಮ್ಮನನ್ನು ನೋಡಲು ಬಂದಿದ್ದಳು. ಆಕೆ ಅತ್ತ ಹೋಗುತ್ತಿದ್ದಂತೆ ಬಿಜು ಕೋಪದಿಂದ ಅಮ್ಮನ ಬಳಿ ಗಲಾಟೆ ನಡೆಸಿ, ಆಕೆಯ ಎದೆಗೆ ಒದ್ದಿದ್ದಾನೆ. ಜೋರಾಗಿ ಏಟು ಬಿದ್ದಿದ್ದರಿಂದ ಆ ವೃದ್ಧ ಮಹಿಳೆ ಕೆಳಗೆ ಬಿದ್ದು ಎಚ್ಚರತಪ್ಪಿರುವುದು ತಿಳಿದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ‘ನನ್ನಮ್ಮ ಮನೆಯಲ್ಲಿ ಬಿದ್ದಳು, ಹೀಗಾಗಿ ಏಟಾಗಿದೆ’ ಎಂದು ಆಸ್ಪತ್ರೆಯಲ್ಲಿ ಸುಳ್ಳು ಹೇಳಿದ್ದಾನೆ. ಆದರೆ ಎರಡು ದಿನಗಳ ಚಿಕಿತ್ಸೆಯ ನಂತರವೂ ಮಹಿಳೆ ಬದುಕಲಿಲ್ಲ.

ಆಸ್ಪತ್ರೆಯಿಂದ ಅಮ್ಮನ ಶವವನ್ನು ತಂದ ಬಿಜು ಅವಸರ ಅವಸರದಲ್ಲಿ ಅವಳ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ ಹಾಗೂ ಆತನ ಅನುಮಾನಾಸ್ಪದವಾದ ವರ್ತನೆಯನ್ನು ಕಂಡ ನೆರಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಕ್ರಿಯೆ ಆಗುವುದನ್ನು ತಡೆದು, ಶವಪರೀಕ್ಷೆ ಮಾಡಿಸಿದ್ದಾರೆ. ಆಗ ಆಕೆಯ ಮುಖ ಮತ್ತು ಎದೆಯ ಮೇಲೆ ಬಲವಾದ ಪೆಟ್ಟು ಬಿದ್ದಿರುವುದು, ಪಕ್ಕೆಲುಬು ಮುರಿತವಾಗಿದ್ದು ಗೊತ್ತಾಗಿದೆ. ಪೊಲೀಸರು ಬಿಜುವಿನ ಬಳಿ ಜೋರಾಗಿ ಪ್ರಶ್ನಿಸಿದಾಗ ಆತ ಸತ್ಯ ಹೊರಹಾಕಿದ್ದಾನೆ. ಇದೀಗ ಆತನನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.