Home News A Raja: ಭಾರತ ದೇಶವೇ ಅಲ್ಲ, ಜೈ ಶ್ರೀರಾಮ್ ಅನ್ನುವವರು ಮೂರ್ಖರು, ನಾವು ರಾಮನ ಶತ್ರುಗಳು-...

A Raja: ಭಾರತ ದೇಶವೇ ಅಲ್ಲ, ಜೈ ಶ್ರೀರಾಮ್ ಅನ್ನುವವರು ಮೂರ್ಖರು, ನಾವು ರಾಮನ ಶತ್ರುಗಳು- ಡಿಎಂಕೆ ಸಂಸದನಿಂದ ಮತ್ತೆ ವಿವಾದಾತ್ಮಕ ಸ್ಟೇಟ್ಮೆಂಟ್ !!

A Raja

Hindu neighbor gifts plot of land

Hindu neighbour gifts land to Muslim journalist

A Raja: ಭಾರತ ದೇಶವೇ ಅಲ್ಲ, ಜೈ ಶ್ರೀರಾಮ್ ಎನ್ನುವವರು ಮೂರ್ಖರು, ನಾವು ಶ್ರೀರಾಮನ ಶತ್ರುಗಳು, ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಡಿಎಂಕೆ(DMK) ಸಂಸದ ಎ.ರಾಜಾ(A Raja) ಅವರು ವಿವಾದಿತ ಹೇಳಿಕೆ ನೀಡಿದ್ದು ಭಾರೀ ಸಂಚಲನ ಸೃಷ್ಟಿಸಿದೆ.

ಹೌದು, ಸದಾ ಸನಾತನ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡುತ್ತಾ ಬಂದಿರುವ ಡಿಎಂಕೆ ನಾಯಕರು ಈಗ ಮತ್ತೆ ವಿವಾದಲ್ಲಿ ಸಿಲುಕಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಉಧಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಾಶಪಡಿಸಬೇಕೆಂದು ಹೇಳಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಇದೀಗ ಡಿಎಂಕೆ ನಾಯಕರಲ್ಲಿ ಒಬ್ಬರಾದ ಎ.ರಾಜಾ ಅವರು ಭಾಷಣವೊಂದರಲ್ಲಿ ನಾಲಿಗೆ ಹರಿಬಿಟ್ಟಿದ್ದು, ದೇಶ ಹಾಗೂ ಶ್ರೀರಾಮನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Sullia: ಬಾಡಿಗೆ ಮನೆಗೆ ಎನ್‌ಐಎ ದಾಳಿ ಪ್ರಕರಣ, ಸಮನ್ಸ್‌ ನೀಡಿ, ಮೊಬೈಲ್‌ ವಶ

ಲೋಕಸಭಾ ಚುನಾವಣೆ(Parliament election)ಹಿನ್ನೆಲೆಯಲ್ಲಿ ತಮಿಳುನಾಡಿನ(Tamilunadu)ಲ್ಲಿ ಡಿಎಂಕೆ ಪಕ್ಷ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಭಾಷಣ ಮಾಡಿರುವ ಎ.ರಾಜಾ ಅವರು ಭಾರತ ಒಂದು ದೇಶವೇ ಅಲ್ಲ. ನಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ, ಜೈ ಶ್ರೀರಾಮ್‌ ಘೋಷಣೆಯನ್ನು ನಾವು ಒಪ್ಪೋದಿಲ್ಲ. ನಾವು ಶ್ರೀರಾಮನ ಶತ್ರುಗಳು ಎಂದಿರುವ ಎ.ರಾಜಾ, ಭಾರತ್‌ ಮಾತಾಕಿ ಜೈ ಎಂಬ ಘೋಷಣೆಯನ್ನೂ ನಾನು ಒಪ್ಪೋದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಅವರ ಪ್ರಕಾರ ಭಾರತ ಒಂದು ದೇಶವೇ ಅಲ್ಲವಂತೆ. ಭಾರತವನ್ನು ಒಂದು ಉಪಖಂಡ ಎಂದು ಎ.ರಾಜಾ ಕರೆದಿದ್ದಾರೆ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ಒಂದು ರಾಷ್ಟ್ರವಾಗುತ್ತದೆ. ಆದ್ರೆ, ಭಾರತದಲ್ಲಿ ನಾನಾ ಭಾಷೆಗಳಿವೆ, ನಾನಾ ಸಂಸ್ಕೃತಿಗಳಿವೆ. ಹೀಗಾಗಿ ಭಾರತ ದೇಶವಲ್ಲ ಒಂದು ಉಪಖಂಡ ಎಂದು ಅಚ್ಚರಿ ಮೂಡಿಸಿದ್ದಾರೆ.