Home News Porn Star Judge: ಡೇ ಟೈಮ್ ಜಡ್ಜ್ ಆಗಿರೋ ಈ ಭೂಪ ನೈಟ್ ‘ಪೋರ್ನ್ ಸ್ಟಾರ್’...

Porn Star Judge: ಡೇ ಟೈಮ್ ಜಡ್ಜ್ ಆಗಿರೋ ಈ ಭೂಪ ನೈಟ್ ‘ಪೋರ್ನ್ ಸ್ಟಾರ್’ ಆಗ್ತಾನೆ!

Hindu neighbor gifts plot of land

Hindu neighbour gifts land to Muslim journalist

Porn Star Judge :  ದಿನವಿಡೀ ದುಡಿದು ದುಡಿದು ಸಾಕಾಗಿದೆ. ಒಂದು ರಜೆ ಸಿಕ್ಕರೆ ಸಾಕಪ್ಪ. ಒಳ್ಳೆ ಟ್ರಿಪ್ ಮಾಡೋಣ, ಮನೆಯಲ್ಲಿ ರೆಸ್ಟ್ ಮಾಡೋಣ, ನೆಮ್ಮದಿಯ ಸ್ಥಳಗಳನ್ನು ಅರಸಿ ಹೋಗೋಣ ಅಂತ ಎಷ್ಟೋ ಉದ್ಯೋಗಿಗಳು ಅಂದುಕೊಂಡಿರ್ತಾರೆ. ಅಂದರೆ ಎಲ್ಲರೂ ರಜೆಯನ್ನು ಕಳೆಯುವ ರೀತಿ ಭಿನ್ನವಾಗಿರುತ್ತದೆ. ಆದ್ರೆ ಇಲ್ಲೊಬ್ಬ ಕೋರ್ಟಿನ ಜಡ್ಜ್(Judge), ತನಗೆ ಸಿಗೋ ರಜೆಯನ್ನು ವಿಚಿತ್ರ ರೀತಿಯಲ್ಲಿ ಕಳೆಯುತ್ತಿದ್ದು, ಕೊನೆಗೆ ತನ್ನ ಕೆಲಸವನ್ನೇ ಕಳ್ಕೊಂಡಿದ್ದಾನೆ.

ಹೌದು, ಅಮೇರಿಕಾದ(America)ಲ್ಲೊಬ್ಬ ವ್ಯಕ್ತಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೇಜವಾಬ್ದಾರಿ ಕೆಲಸ ಮಾಡಿದ್ದಾನೆ. ಅದೇನೆಂದರೆ ಕೋರ್ಟಿನಲ್ಲಿ ನ್ಯಾಯಾದೀಶನಾಗಿರುವ 33 ವರ್ಷದ ಗ್ರೆಗೊರಿ ಎ. ಲಾಕ್‌(Gregori A Lock) ಎಂಬಾ ರಜೆಯ ದಿನಗಳಲ್ಲಿ ‘ಪೋರ್ನ್‌ ಸ್ಟಾರ್‌’(Porn Star Judge) ಆಗುತ್ತಿದ್ದನಂತೆ. ಇದನ್ನು ಮನಗಂಡ ಅಮೇರಿಕಾವು ಈ ಭೂಪನನ್ನು ಜಡ್ಜ್ ಸ್ಥಾನದಿಂದ ವಜಾ ಮಾಡಿಬಿಟ್ಟಿದೆ. ಅಂದಹಾಗೆ ಯುವಜನರ ಗ್ರೂಪ್‌ನಲ್ಲಿ ಪೋರ್ನ್‌ ಸೈಟ್‌ಗಳು ಹೆಚ್ಚು ಜನಪ್ರಿಯವಾಗಿದೆ. ಆದ್ರೆ ಈ ಪೋರ್ನ್‌ ಸೈಟ್‌ನಲ್ಲಿ ಜವಾಬ್ದಾರಿಯುತ (Responsible) ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಕಂಡು ಬಂದರೆ ಯಾರಿಗಾದರೂ ಅಚ್ಚರಿಯಾಗುವುದಿಲ್ಲವೆ?

ಈತನ ವಿಡಿಯೋ ನೋಡಿದ್ದ ಜನರು, ನ್ಯಾಯಾಲಯದಲ್ಲಿ (Court) ಇವನ ಉಪಸ್ಥಿತಿ ಕಂಡು ಇವನೇನಪ್ಪಾ ಈ ಪುಣ್ಯಾತ್ಮ ಇಲ್ಲಿ ಎಂದು ಬೆರಗಾಗಿದ್ದಾರೆ. ಇದು ವೃತ್ತಿಪರವಲ್ಲದ ವರ್ತನೆಯಾದ್ದರಿಂದ ಅಧಿಕಾರಿಗಳು ಗ್ರೆಗೊರಿಯನ್ನು ವಜಾಗೊಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ನ್ಯೂಯಾರ್ಕ್ ಸಿಟಿ ಆಡಳಿತದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಿದ 33 ವರ್ಷದ ಗ್ರೆಗೊರಿ ಎ ಲಾಕ್ ಅವರು ಕೆಲಸದ ನಂತರದಲ್ಲಿ ಫ್ಯಾನ್ಸ್‌ನಲ್ಲಿ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ 100 ಕ್ಕೂ ಹೆಚ್ಚು ವಯಸ್ಕ ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅಸಭ್ಯ ವರ್ತನೆ ತೋರಿರುವ ಈ ನ್ಯಾಯಾಧೀಶರನ್ನು ವಜಾ (Suspend) ಮಾಡಲಾಗಿದೆ.

ಇಷ್ಟು ಮಾತ್ರವಲ್ಲದೆ ಈ ನೀಲಿ ತಾರೆ ಜಡ್ಜ್‌ ಖಾತೆಯ ಬಯೋ ಸಹ ವಿಚಿತ್ರವಾಗಿದೆ. ‘ಹಗಲು ವೈಟ್ ಕಾಲರ್ ಪ್ರೊಫೆಷನಲ್ ಮತ್ತು ರಾತ್ರಿ ತುಂಬಾ ವೃತ್ತಿಪರವಲ್ಲದ ಹವ್ಯಾಸಿ ಕೆಲಸ’ ಎಂದು ಬರೆದುಕೊಂಡಿದ್ದಾರೆ. ಓನ್ಲಿ ಫ್ಯಾನ್ಸ್‌ನಲ್ಲಿನ ಖಾತೆಯ ಹೊರತಾಗಿ, ಜಸ್ಟ್‌ಫಾರ್.ಫ್ಯಾನ್ಸ್ ಎಂಬ ಹೆಸರಿನ ಮತ್ತೊಂದು ವಯಸ್ಕ ವೇದಿಕೆಯಲ್ಲಿ ಇನ್ನೊಂದು ಖಾತೆ ಇರುವುದು ಕಂಡುಬಂದಿದೆ. ಇನ್ನು ಸಿಟಿ ಕೌನ್ಸಿಲ್‌ವುಮನ್ ವಿಕಿ ಪಲಾಡಿನೊ ಮಾತನಾಡಿ ‘ಕಾನೂನು ಅಧಿಕಾರದ ಸ್ಥಾನಗಳಲ್ಲಿ ಲಾಕ್‌ನಂತಹ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದು ನಮ್ಮ ಸಂಸ್ಥೆಗಳ ವೃತ್ತಿಪರತೆ ಮತ್ತು ನಿಷ್ಪಕ್ಷಪಾತದ ಮೇಲಿನ ಜನರ ನಂಬಿಕೆಯನ್ನು ನಾಶಪಡಿಸುತ್ತದೆ’ ಎಂದಿದ್ದಾರೆ.