Home Breaking Entertainment News Kannada ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳ ಮದುವೆ | ಹುಡುಗ ಯಾರು ? ಇಲ್ಲಿದೆ ಉತ್ತರ!!!

ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳ ಮದುವೆ | ಹುಡುಗ ಯಾರು ? ಇಲ್ಲಿದೆ ಉತ್ತರ!!!

Hindu neighbor gifts plot of land

Hindu neighbour gifts land to Muslim journalist

ಯುವ ಕ್ರಿಕೆಟಿಗ, ಅತೀ ವೇಗದ ಬೌಲರ್ ಶಾಹೀನ್ ಆಫ್ರಿದಿಯ ಮದುವೆಯು ಇದೀಗ ನಿಶ್ಚಯ ಆಗುವ ಸೂಚನೆ ನೀಡಿದ್ದಾರೆ. ಆಫ್ರಿದಿಯ ಹೃದಯ ಕದ್ದ ಹುಡುಗಿ ಯಾರು ಗೊತ್ತಾ? ಬೇರಾರೂ ಅಲ್ಲ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳು ಅನ್ಶಾ ಆಫ್ರಿದಿ!!

ಹೌದು, ಶಾಹೀನ್ ಆಫ್ರಿದಿ ಪಾಕಿಸ್ತಾನದ ಜಿಯೋ ವಾಹಿನಿ ಜೊತೆ ಮದುವೆ ಕುರಿತು ಮಾತನಾಡಿದ್ದಾರೆ. ಹಲವು ವರ್ಷಗಳಿಂದ ನಾವಿಬ್ಬರೂ ಪರಿಯಚಸ್ಥರಾಗಿದ್ದೇವೆ. ಈಗಾಗಲೇ ನಮ್ಮಿಬ್ಬರ ಪ್ರೀತಿ ಆಳವಾಗಿದೆ ಮತ್ತು ಶೀಘ್ರದಲ್ಲೇ ಅನ್ಶಾ ಜೊತೆಗೆ ಹೊಸ ಜೀವನಕ್ಕೆ ಕಾಲಿಡುತ್ತೇನೆ ಎಂದು ಶಾಹೀನ್ ಆಫ್ರಿದಿ ಈ ಮೂಲಕ ಇದೇ ಮೊದಲ ಬಾರಿಗೆ ಅನ್ಶಾ ಆಫ್ರಿದಿ ಕುರಿತು ಬಹಿರಂಗವಾದ ಹೇಳಿಕೆ ನೀಡಿದ್ದಾರೆ.

ತನ್ನ ಮಾರಕ ದಾಳಿ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೆಮಿಫೈನಲ್ ಕೊಂಡೊಯ್ದ ವೇಗಿ ಶಾಹೀನ್ ಆಫ್ರಿದಿ ಅವರ ವಯಸ್ಸು ಕೇವಲ 22 ವರ್ಷ.

ಅತೀ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಇವರು, ಇಷ್ಟು ಬೇಗ ಮದುವೆ ಫಿಕ್ಸ್ ಮಾಡಿಕೊಂಡು ಮಹಿಳಾ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದೀರಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಅನ್ಶಾ ನನ್ನ ಹೃದಯ ಕದ್ದಿದ್ದಾರೆ. ನನ್ನ ಮನಸ್ಸು ಕೂಡ ಅನ್ಶಾ ಕಡೆ ವಾಲಿದೆ ನನಗಷ್ಟೇ ಸಾಕು ಎಂದು ರೊಮ್ಯಾಂಟಿಕ್ ಆಗಿ ಉತ್ತರಿಸಿದ್ದಾರೆ.

ಎರಡೂ ಕುಟುಂಬದವರು ಶಾಹೀನ್ ಆಫ್ರಿದಿ ಹಾಗೂ ಅನ್ಶಾ ಆಫ್ರಿದಿಯವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.ಆದರೆ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ. ಹೀಗಾಗಿ ಸೂಕ್ತ ದಿನಾಂಕ ನೋಡಿ ಮದುವೆ ಫಿಕ್ಸ್ ಮಾಡುವ ಸಾಧ್ಯತೆ ಇದೆ.

ಆಫ್ರಿದಿಯ ಮದುವೆ ಫಿಕ್ಸ್ ಆಗುತ್ತಿದ್ದಂತೆ ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮತ್ತೊಂದೆಡೆ ಆಫ್ರಿದಿ ಮದುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.