Home News ಸಾವಿನಲ್ಲಿ ಒಂದಾದ ವಿಚ್ಛೇದಿತ ಜೋಡಿ

ಸಾವಿನಲ್ಲಿ ಒಂದಾದ ವಿಚ್ಛೇದಿತ ಜೋಡಿ

Hindu neighbor gifts plot of land

Hindu neighbour gifts land to Muslim journalist

ಒಂದು ಗಂಡ ಹೆಂಡತಿ ಜೊಡಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಇಬ್ಬರನ್ನೂ ಸಾವಿನ ಮೂಲಕ ಮತ್ತೆ ಒಂದಾಗಿಸಿದ ಘಟನೆಯೊಂದು ನಡೆದಿದೆ.

ವೈಭವಿ ತ್ರಿಪಾಠಿ ಮತ್ತು ಅವರ ಮಾಜಿ ಪತಿ ಅಶೋಕ್ ತ್ರಿಪಾಠಿಯವರ ನಡುವೆ ವೈಮನಸ್ಯ ಉಂಟಾಗಿ ಇಬ್ಬರೂ ಕೌಟುಂಬಿಕ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದಿದ್ದರು.

ಈ ದಂಪತಿಗೆ ಕೌಟುಂಬಿಕ ನ್ಯಾಯಾಲಯವು ಪ್ರತಿ ವರ್ಷ ಮಕ್ಕಳೊಂದಿಗೆ 10 ದಿನಗಳ ಕಾಲ ಪ್ರವಾಸ ಮಾಡಬೇಕೆಂದು ನಿಬಂಧನೆ ವಿಧಿಸಿತ್ತು. ಈ ನಿಬಂಧನೆ ಹಿನ್ನೆಲೆಯಲ್ಲಿ ದಂಪತಿ ನೇಪಾಳ ಪ್ರವಾಸ ಕೈಗೊಂಡಿದ್ದರು.

ಅವರಿದ್ದ ವಿಮಾನ ನಿನ್ನೆ ಪತನಗೊಂಡು ಮಕ್ಕಳ ಸಹಿತ ವಿಚ್ಛೇದಿತ ದಂಪತಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ವಿಮಾನ ಪತನವಾದ ಸ್ಥಳದಲ್ಲಿ ಅನೇಕ ಶವಗಳು ಪತ್ತೆಯಾಗಿವೆ.

ಸ್ಥಳೀಯ ಹೊಟೇಲ್ ಮಾಲೀಕರೊಬ್ಬರು ಹೇಳುವ ಪ್ರಕಾರ ವಿಮಾನ ಪತನವಾಗಿರುವುದರಿಂದ ವಿಮಾನದಲ್ಲಿದ್ದ ಯಾವೊಬ್ಬ ಪ್ರಯಾಣಿಕರೂ ಬದುಕುಳಿದಿಲ್ಲ. ಕೆಲವು ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.