Home News 35 ವರ್ಷದ ಯುವತಿಯ ವರಿಸಿದ 75 ರ ವೃದ್ದ: ಫಸ್ಟ್ ನೈಟ್ ಗಿಂತ ಮುನ್ನವೇ ಮರಣ!

35 ವರ್ಷದ ಯುವತಿಯ ವರಿಸಿದ 75 ರ ವೃದ್ದ: ಫಸ್ಟ್ ನೈಟ್ ಗಿಂತ ಮುನ್ನವೇ ಮರಣ!

Hindu neighbor gifts plot of land

Hindu neighbour gifts land to Muslim journalist

ಉತ್ತರ ಪ್ರದೇಶ 35 ವರ್ಷದ ಮಹಿಳೆಯನ್ನು ಮದುವೆಯಾದ 75 ವರ್ಷದ ವೃದ್ಧನೊಬ್ಬ ಯಂಗ್ ಹುಡುಗಿಯನ್ನು ಮದುವೆಯಾದ ಖುಷಿಯಲ್ಲಿ ಇರುವಾಗಲೇ ಬದುಕು ದೊಡ್ಡ ಜರ್ಕ್ ಕೊಟ್ಟಿದೆ, ತನ್ನ ಮದುವೆಯ ಮರುದಿನವೇ, ಇನ್ನೇನು ಮೊದಲ ರಾತ್ರಿಯ ಕನಸಲ್ಲಿ ಇದ್ದ ವೃದ್ದ ಇಹಲೋಕ ತ್ಯಜಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಳೆದ ಒಂದು ವರ್ಷದಿಂದ ಒಂಟಿಯಾಗಿದ್ದ ಸಂಗ್ರರಾಮ್ ಅವರು ಒಂದು ವರ್ಷದ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು. ಮಕ್ಕಳಿಲ್ಲದೆ, ಕೃಷಿ ಮಾಡುತ್ತಾ ಏಕಾಂಗಿ ಜೀವನ ಸಾಗಿಸುತ್ತಿದ್ದ ಅವರು ಒಂಟಿತನದಿಂದ ಬೇಸತ್ತಿದ್ದರು. ಇಂಥಹಾ ಸಂಗ್ರರಾಮ್‌ಗೆ ಕುಟುಂಬದವರು ಮರುಮದುವೆಯ ಸಲಹೆ ನೀಡಿದರು. ಕುಟುಂಬದವರ ಮಾತಿಗೆ ಒಪ್ಪಿದ ಸಂಗ್ರರಾಮ್, ಜಲಾಲ್ಪುರದ 35 ವರ್ಷದ ಮನ್ಭವತಿ ಎಂಬ ಮಹಿಳೆಯನ್ನು ಸೆಪ್ಟೆಂಬರ್ 29, 2025ರಂದು ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸ್ಥಳೀಯ ದೇವಸ್ಥಾನದಲ್ಲಿ ಮದುವೆಯ ವಿಧಿವಿಧಾನಗಳು ನೆರವೇರಿದ್ದವು.

ಅದಾಯ್ತು, ಮದುವೆಯಾದ ದಿನ ರಾತ್ರಿ ಸಂಗ್ರರಾಮ್ ಮತ್ತು ಮನ್ಭವತಿ ಒಟ್ಟಿಗೆ ಸಮಯ ಕಳೆದರು. ಅಂದು ಮನ್ಭವತಿ, ತಾನು ತನ್ನ ಪತಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಮತ್ತು ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಇಬ್ಬರೂ ರಾತ್ರಿಯ ಹೊತ್ತು ಸುದೀರ್ಘವಾಗಿ ಕುಳಿತು ಮಾತನಾಡಿದ್ದಾಗಿ ವರದಿಯಾಗಿದೆ. ಆದರೆ, ಈ ದಾಂಪತ್ಯದ ಕ್ಷಣಗಳು ಕೇವಲ ಕೆಲವೇ ಗಂಟೆಗಳಿಗೆ ಬಾಳಿಕೆ ಬಂದಿದೆ. ಮರುದಿನ, ಮೊದಲ ರಾತ್ರಿಯ ಕನವರಿಕೆಯಲ್ಲಿ ಸಂಗ್ರರಾಮ್ ಇದ್ದರೆ ಅಂದೇ ಆತನ ಪಾಲಿಗೆ ಕೊನೆಯ ರಾತ್ರಿಯಾಗಿತ್ತು.
ಮರುದಿನ ಬೆಳಿಗ್ಗೆ, ಸಂಗ್ರರಾಮ್ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆತನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಆಕಸ್ಮಿಕ ಸಾವು ಮನ್ಭವತಿಗೆ ದೊಡ್ಡ ಆಘಾತವನ್ನುಂಟುಮಾಡಿತ್ತು.
ಸಂಗ್ರರಾಮ್‌’ನ ಸಂಬಂಧಿಕರು, ದೆಹಲಿಯಲ್ಲಿ ವಾಸಿಸುವ ಆತನ ಸೋದರಳಿಯ, ಅಂತ್ಯಕ್ರಿಯೆಯನ್ನು ಸ್ಥಗಿತಗೊಳಿಸಿ, ತಾವು ಆಗಮಿಸುವವರೆಗೆ ಅಂತ್ಯಕ್ರಿಯೆ ನಡೆಸಬಾರದೆಂದು ಒತ್ತಾಯಿಸಿದ್ದಾರೆ. ಈ ಸಾವಿನಲ್ಲಿ ಅಸಹಜತೆ ಅವರಿಗೆ ಕಾಣಿಸಿತ್ತಾ? ಗೊತ್ತಿಲ್ಲ!