Home News ಸೆಲ್ಫಿ ಹುಚ್ಚಿಗೆ ನವವಿವಾಹಿತೆ ಬಲಿ | ಕೋವಿ ಲೋಡ್ ಆಗಿತ್ತು ಎಂದು ತಿಳಿಯದೇ ಸೆಲ್ಫಿ ತೆಗೆಯುವಾಗ...

ಸೆಲ್ಫಿ ಹುಚ್ಚಿಗೆ ನವವಿವಾಹಿತೆ ಬಲಿ | ಕೋವಿ ಲೋಡ್ ಆಗಿತ್ತು ಎಂದು ತಿಳಿಯದೇ ಸೆಲ್ಫಿ ತೆಗೆಯುವಾಗ ಟ್ರಿಗರ್ ಒತ್ತಿ ಸಾವು !

Hindu neighbor gifts plot of land

Hindu neighbour gifts land to Muslim journalist

ಲಕ್ನೋ: ಸಾವಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಕೊನೆಗೆ ಸಾವಿನಲ್ಲಿ ಅಂತ್ಯವಾಗಿದೆ.
ಮದ್ದು ಗುಂಡು ತುಂಬಿದ್ದ ಕೋವಿಯ ಜತೆ ಸೆಲ್ಫಿ ತೆಗೆದು ಕೊಳ್ಳಲು ಹೋದ 26 ವರ್ಷದ ನವವಾಹಿತೆ ಗುಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಮಹಿಳೆ ಗುರುವಾರ ಸಂಜೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ತೊಡಗಿದ್ದಾಳೆ. ಈ ದುರಂತ ನಡೆದಿದೆ. ಸೆಲ್ಫಿಗೆ ಪೋಸ್ ನೀಡುವಾಗ ಬಂದೂಕಿನಲ್ಲಿ ಗುಂಡುಗಳು ತುಂಬಿರುವುದು ರಾಧಿಕಾ ಗುಪ್ತಾ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ನಳಿಕೆಯನ್ನು ಎಳೆದಿದ್ದರು. ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಏನೂ ಪ್ರಯೋಜನ ಇರಲಿಲ್ಲ. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

2021ರ ಮೇ ತಿಂಗಳಲ್ಲಿ, ಅಂದರೆ ಕೇವಲ ಎರಡು ತಿಂಗಳ ಹಿಂದಷ್ಟೇ ರಾಧಿಕಾ, ತಮ್ಮ ಮಗ ಆಕಾಶ್ ಗುಪ್ತಾ ಜತೆ ಮದುವೆಯಾಗಿದ್ದರು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಎಂದು 2 ಲಕ್ಷ ರು ಹಣ ನೀಡಲಾಗಿತ್ತು, ಆದರೆ ಇದರಲ್ಲಿ ಏನೋ ಸಂಚು ನಡೆದಿದೆ ಎಂದು ಆರೋಪಿಸಿರುವ ಮಹಿಳೆಯ ತಂದೆ, ಮಗಳ ಸಾವಿನ ನೋವಿನಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬಂದೂಕು ಮತ್ತು ಮೊಬೈಲ್ ಫೋನ್ ಅನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆ ಫೋನ್‌ನಲ್ಲಿ ಗುಂಡು ಹಾರುವ ಕೆಲವೇ ಸೆಕೆಂಡುಗಳ ಮೊದಲು ತೆಗೆದುಕೊಂಡಿದ್ದ ಸೆಲ್ಫಿ ದೊರಕಿದೆ. ಆದುದರಿಂದ ಇದು ಸೆಲ್ಫಿಯ ಹುಚ್ಚಿನ ಕಾರಣದಿಂದ ಆದ ಸಾವು ಎಂದೇ ನಂಬಲಾಗಿದೆ.