Home News Gujarath: 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿದ್ದ 23 ವರ್ಷದ ಶಿಕ್ಷಕಿ 5 ತಿಂಗಳ ಗರ್ಭಿಣಿ!!

Gujarath: 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿದ್ದ 23 ವರ್ಷದ ಶಿಕ್ಷಕಿ 5 ತಿಂಗಳ ಗರ್ಭಿಣಿ!!

Hindu neighbor gifts plot of land

Hindu neighbour gifts land to Muslim journalist

Gujarath: ಸೂರತ್‌ನ 23 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋಗಿ ಐದು ತಿಂಗಳ ಗರ್ಭಿಣಿಯಾಗಿ ಪತ್ತೆಯಾಗಿದ್ದಾಳೆ.

Mangaluru : ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಕೊಲೆ ಬೆದರಿಕೆ !!

ಎಪ್ರಿಲ್ 25 ರ ಮಧ್ಯಾಹ್ನ,ಬಾಲಕನೊಂದಿಗೆ ಅತ್ಯಂತ ಸಲುಗೆಯಿಂದಿದ್ದ ಶಿಕ್ಷಕಿ, ಹಾಡ ಹಗಲೇ ನಾಪತ್ತೆಯಾಗಿದ್ದಳು. ಆ ಬಳಿಕ ಇಬ್ಬರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ, ಶಿಕ್ಷಕಿಯು ಬಾಲಕನೊಂದಿಗೆ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಸೆರೆಯಾಗಿದ್ದು, ಇದು ಪೂರ್ವಯೋಜಿತ ಎಂದು ಕಂಡುಕೊಳ್ಳಲಾಗಿದೆ.

Mangaluru: ಸುಹಾಸ್ ಹತ್ಯೆಗೆ 50 ಲಕ್ಷ ಫಂಡಿಂಗ್ – ಪ್ರಭಾವಿ ಮುಸ್ಲಿಂ ನಾಯಕರ ಕೈವಾಡ?

ಅಂದಹಾಗೆ ಶಿಕ್ಷಕಿ 5ನೇ ತರಗತಿ ವಿದ್ಯಾರ್ಥಿಗೆ ಪಾಠ ಮಾಡುತ್ತಿದ್ದರು. ಕ್ರಮೇಣ, ಇಬ್ಬರ ನಡುವಿನ ಆತ್ಮೀಯತೆ ಬೆಳೆದು ಕೊನೆಗೆ ಅವರು ದೈಹಿಕ ಸಂಬಂಧವನ್ನು ಹೊಂದಿದ್ದರು. ಏಪ್ರಿಲ್ 24ರಂದು ಇಬ್ಬರೂ ಮನೆಯಿಂದ ಓಡಿಹೋಗಿದ್ದರು. ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿತು. ಬಾಲಕನ ಪೋಷಕರು ದೂರು ದಾಖಲಿಸಿದ ನಾಲ್ಕು ದಿನಗಳ ಹುಡುಕಾಟದ ನಂತರ ಗುಜರಾತ್-ರಾಜಸ್ಥಾನ ಗಡಿಯ ಬಳಿ ಇಬ್ಬರು ಪತ್ತೆಯಾಗಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ. ವಡೋದರಾ, ಅಹಮದಾಬಾದ್, ದೆಹಲಿ, ಜೈಪುರ ಮತ್ತು ವೃಂದಾವನ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.

Rahul Gandhi: ಹಿಂದೂ ಧರ್ಮದಿಂದ ರಾಹುಲ್ ಗಾಂಧಿ ಉಚ್ಛಾಟನೆ – ಅವಿಮುಕ್ತಶ್ವರಾನಂದ ಶ್ರೀ ಘೋಷಣೆ

ಪೊಲೀಸರ ವಿಚಾರಣೆ ವೇಳೆ, ಶಿಕ್ಷಕಿ ತಾನು ಐದು ತಿಂಗಳ ಗರ್ಭಿಣಿ ಎಂದು ಹೇಳಿದ್ದಾಳೆ. ತಾನು ಗರ್ಭ ಧರಿಸಲು 13 ವರ್ಷದ ವಿದ್ಯಾರ್ಥಿ ಕಾರಣನಾಗಿದ್ದಾನೆ. ಹೀಗಾಗಿ ಬಾಲಕನೊಂದಿಗೆ ಓಡಿಹೋಗಿ ಬೇರೆ ನಗರದಲ್ಲಿ ನೆಲೆಸಲು ಬಯಸುತ್ತಿರುವುದಾಗಿಯೂ ಹೇಳಿದ್ದಾಳೆ. ಏತನ್ಮಧ್ಯೆ, ವಿದ್ಯಾರ್ಥಿಯು ಶಿಕ್ಷಕಿಯೊಂದಿಗೆ ಹಲವಾರು ಬಾರಿ ದೈಹಿಕ ಸಂಬಂಧ ಹೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಇಷ್ಟೇ ಅಲ್ಲದೆ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಬಾಲಕ ದೈಹಿಕವಾಗಿ ತಂದೆಯಾಗಲು ಸಮರ್ಥನಾಗಿದ್ದಾನೆ ಎಂದು ಬಹಿರಂಗವಾಗಿದೆ.

ಸೂರತ್ ಪೊಲೀಸ್ ಉಪ ಆಯುಕ್ತ ಭಾಗೀರಥ್ ಗಧ್ವಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು “ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಅಪ್ರಾಪ್ತ ವಯಸ್ಕ ಬಾಲಕನೇ ಮಗುವಿನ ತಂದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ, ನಾವು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಇಬ್ಬರೂ ಹಲವಾರು ತಿಂಗಳುಗಳಿಂದ ದೈಹಿಕ ಸಂಬಂಧದಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಇನ್ನು ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಆರೋಪದ ಮೇಲೆ ಶಿಕ್ಷಕಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಔಪಚಾರಿಕ ಪ್ರಕರಣ ದಾಖಲಾಗಿದ್ದು, ಜತೆಗೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಲೈಂ*ಗಿಕ ಶೋಷಣೆಗಾಗಿ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.