Home News Chandigarh: ಅಖಾಡದಲ್ಲೇ ಕುಸಿದು ಬಿದ್ದ 21 ವರ್ಷದ ವುಶು ಆಟಗಾರ ಸಾವು; ವೀಡಿಯೋ ವೈರಲ್ ‌

Chandigarh: ಅಖಾಡದಲ್ಲೇ ಕುಸಿದು ಬಿದ್ದ 21 ವರ್ಷದ ವುಶು ಆಟಗಾರ ಸಾವು; ವೀಡಿಯೋ ವೈರಲ್ ‌

Hindu neighbor gifts plot of land

Hindu neighbour gifts land to Muslim journalist

Chandigarh: ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರನೋರ್ವ ಆಟದ ಅಖಾಡದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ. ವಿವಿ ಮಟ್ಟದ ವುಶು ಪಂದ್ಯಾವಳಿಯನ್ನು ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ಆಯೋಜನೆ ಮಾಡಲಾಗಿತ್ತು. ಸ್ಪರ್ಧಾಳುವಾಗಿ ಬಂದಿದ್ದ 21 ವರ್ಷದ ವಿದ್ಯಾರ್ಥಿ ಆಟಕ್ಕಾಗಿ ಸಿದ್ದಪಡಿಸಿದ್ದ ಅಖಾಡದಲ್ಲೇ ಕುಸಿದು ಸಾವಿಗೀಡಾಗಿದ್ದಾನೆ.

ಕೂಡಲೇ ವೈದ್ಯಕೀಯ ತಂಡ ವಿದ್ಯಾರ್ಥಿ ಬಳಿ ಬಂದು ತಪಾಸಣೆ ಮಾಡಿದರೂ ಹುಡುಗನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಹೃದಯ ಸಂಬಂಧಿ ಸಮಸ್ಯೆಗಳಿಂದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಘಟನೆ ಕುರಿತು ತನಿಖೆಗೆ ಆದೇಶ ನೀಡಲಾಗಿದೆ.