Home News ಮಗನ ಕೈಗೆ ಟ್ಯಾಟೂ ಹಾಕಿಸಿದ ತಾಯಿ | ಅಮ್ಮ,ಟ್ಯಾಟೂ ಕಲಾವಿದ ಪೊಲೀಸ್ ವಶಕ್ಕೆ!

ಮಗನ ಕೈಗೆ ಟ್ಯಾಟೂ ಹಾಕಿಸಿದ ತಾಯಿ | ಅಮ್ಮ,ಟ್ಯಾಟೂ ಕಲಾವಿದ ಪೊಲೀಸ್ ವಶಕ್ಕೆ!

Hindu neighbor gifts plot of land

Hindu neighbour gifts land to Muslim journalist

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ತಮ್ಮ ಮಕ್ಕಳನ್ನು ಸಹ ತಪ್ಪು ದಾರಿಯಲ್ಲೇ ಬೆಳೆಸುತ್ತಿದ್ದಾರೆ ಎನ್ನುವುದು ಎಷ್ಟೋ ನಿದರ್ಶನಗಳಿಂದ ಸಾಬೀತು ಆಗಿರುವುದು ನೋಡಿದ್ದೇವೆ ಮತ್ತು ಕೇಳಿದ್ದೇವೆ.ಎಷ್ಟು ವೆಚ್ಚವಾದರೂ ಪರವಾಗಿಲ್ಲ, ಕೈಯಲ್ಲಿ ದುಡ್ಡಿಲ್ಲದಿದ್ದರೂ ಪರವಾಗಿಲ್ಲ. ಕೈಯಲ್ಲೊಂದು ಟ್ಯಾಟೂ ಮಾತ್ರ ಬೇಕೆ ಬೇಕು ಎಂದು ಕಾಲೇಜು ತರುಣರು ದುಡ್ಡಿಗಾಗಿ ಪೋಷಕರನ್ನು ಪೀಡಿಸುತ್ತಾರೆ. ಇದು ಯುವ ಪೀಳಿಗೆಯ ಟ್ಯಾಟೂ ಕ್ರೇಜ್.

ಹಾಗೆಯೇ ಇಲ್ಲೊಂದು ಹತ್ತು ವರ್ಷದ ಮಗು ಯಾರದೋ ಕೈಯಲ್ಲಿ ಟ್ಯಾಟೂ ನೋಡಿ ತನಗೂ ಬೇಕೆಂದು ಹಠ ಹಿಡಿದಿದೆ ತಾಯಿಯು ಸೈ ಎಂದು ಮಗುವಿಗೆ ಟ್ಯಾಟೂ ಹಾಕಿಸಿದ್ದಾಳೆ.

ಸದ್ಯ ಈ ಘಟನೆ ಅಮೇರಿಕಾದಲ್ಲಿ ನಡೆದಿದ್ದು,ಟ್ಯಾಟೂ ಬೇಕೆಂದು ಹಠ ಹಿಡಿದ 10 ವರ್ಷದ ಮಗನಿಗೆ ಬುದ್ದಿ ಹೇಳಿ ಸುಮ್ಮನಿರಿಸುವ ಬದಲು ಹೈಲ್ಯಾಂಡ್‌ನ ನಿವಾಸಿ ಕ್ರಿಸ್ಟಲ್ ಥಾಮಸ್ ತನ್ನ ಮಗನಿಗೆ ಟ್ಯಾಟೂ ಹಾಕಿಸಿಕೊಳ್ಳಲು ಪ್ರೋತ್ಸಾಹ ಮಾಡಿ ಈಗ ಆಕೆ ಜೈಲುಪಾಲಾಗಿದ್ದಾಳೆ.

ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ವಯಸ್ಸಿನ ಮಿತಿ ಇದೆ. ಪುಟ್ಟ ಮಕ್ಕಳು ಟ್ಯಾಟೂ ಹಾಕಿಸಿಕೊಳ್ಳುವಂತಿಲ್ಲ. ಅಲ್ಲದೇ ಇದು ನೋವನ್ನು ಕೂಡ ಉಂಟು ಮಾಡುತ್ತದೆ. ಹಲವು ದಿನಗಳ ಕಾಲ ಈ ನೋವು ಇರುತ್ತದೆ. ಹಾಗೆಯೇ ಇಲ್ಲಿ ಟ್ಯಾಟೂ ಹಾಕಿಸಿಕೊಂಡ ಪುಟ್ಟ ಬಾಲಕನಿಗೆ ಶಾಲೆಯಲ್ಲಿ ಅದು ನೋಯಲು ಆರಂಭಿಸಿದೆ. ಈ ವೇಳೆ ಬಾಲಕ ಶಾಲೆಯಲ್ಲಿ ಶಿಕ್ಷಕಿ ಬಳಿ ಟ್ಯಾಟೂ ಹಾಕಿದ ಜಾಗಕ್ಕೆ ಹಚ್ಚಲು ವ್ಯಾಸ್‌ಲೀನ್ ನೀಡುವಂತೆ ಕೇಳಿದ್ದಾನೆ. ಇದರಿಂದ ಪುಟ್ಟ ಬಾಲಕ ಟ್ಯಾಟೂ ಹಾಕಿಸಿಕೊಂಡಿರುವುದು ಶಾಲಾಡಳಿತದ ಗಮನಕ್ಕೆ ಬಂದಿದೆ. ಮಗುವಿನ ಕೈ ತೋಳಿನ ಮುಂಭಾಗದಲ್ಲಿ ಇಂಗ್ಲೀಷ್‌ನ ದೊಡ್ಡ ಅಕ್ಷರಗಳಲ್ಲಿ ಆತನ ಹೆಸರನ್ನು ಟ್ಯಾಟೂ ಹಾಕಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಬಾಲಕನ 30 ವರ್ಷದ ತಾಯಿ ಹಾಗೂ ಬಾಲಕನ ಪಕ್ಕದ ಮನೆಯ ನಿವಾಸಿ ಆಗಿರುವ ಟ್ಯಾಟೂ ಕಲಾವಿದ ಆಸ್ಟಿನ್ ಸ್ಮಿತ್ ಎಂಬಾತನನ್ನು ಕೂಡ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ತಾಯಿಯ ವಿರುದ್ಧ ಮಗನ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ನಿರ್ಧಾರವನ್ನು ಕೈಗೊಂಡ ಆರೋಪವನ್ನು ಹೊರಿಸಿ ಬಂಧಿಸಲಾಗಿತ್ತು. ಬಳಿಕ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ. ನಂತರ ಮಾತನಾಡಿದ ತಾಯಿ ಯಾವ ಮಕ್ಕಳು ಕೂಡ ಟ್ಯಾಟೂ ಹಾಕಿಸಿಕೊಳ್ಳಬಾರದು, ನಾನು ಇದು ತಾತ್ಕಾಲಿಕ ಟ್ಯಾಟೂ ಎಂದು ಭಾವಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ.

ಅದರೂ ಅಮೆರಿಕಾದ ಎಲ್ಲಾ ರಾಜ್ಯಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದೇನು ಅಪರಾಧವಲ್ಲ. ಮಕ್ಕಳಿಗೆ ಬೇಕಿರುವುದು ಅಲ್ಲಿ ಪೋಷಕರ ಒಪ್ಪಿಗೆ ಮಾತ್ರ. ಆದರೆ ನ್ಯೂಯಾರ್ಕ್‌ನಲ್ಲಿ ಮಾತ್ರ ಟ್ಯಾಟೂ ಹಾಕಿಸಿಕೊಳ್ಳಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಮಹಿಳೆಯೂ ತಪ್ಪು ತಿಳುವಳಿಕೆಯಿಂದ ಈ ಘಟನೆ ಸಂಭವಿಸಿದ್ದು, ಟ್ಯಾಟೂ ಹಾಕಲು ವಿಧಿಸಲಾದ ವಯಸ್ಸಿನ ನಿರ್ಬಂಧಗಳನ್ನು ಬೆಂಬಲಿಸುವುದಾಗಿ ಹೇಳಿದರು. ಇನ್ನು ಮಗುವಿಗೆ ಟ್ಯಾಟೂ ಹಾಕಿದ ಕಲಾವಿದ ಕೂಡ ತನ್ನ ನಿರ್ಧಾರಕ್ಕೆ ವಿಷಾದಿಸುವುದಾಗಿ ತಿಳಿಸಿದ್ದಾನೆ. ಒಟ್ಟಿನಲ್ಲಿ ಮಗನ ಆಸೆ ಈಡೇರಿಸಲು ಹೋಗಿ ಅಮ್ಮ ಕಂಬಿ ಎಣಿಸುವುದು ಸ್ವಲ್ಪದರಲ್ಲಿ ತಪ್ಪಿದೆ.

ಪ್ರಸ್ತುತ ಟ್ಯಾಟೂ ವಿಷಯದಲ್ಲಿ ಪ್ರತಿಯೊಬ್ಬರೂ ಅದರ ದುಷ್ಟಪರಿಣಾಮವನ್ನು ಮನದಟ್ಟು ಮಾಡಿಕೊಳ್ಳ ಬೇಕಾಗಿದೆ