Home latest ವರ್ಕ್ ಫ್ರಂ ಹೋಮ್ ಉದ್ಯೋಗ ನೀಡುವ ನೆಪದಲ್ಲಿ 3.5 ಕೋಟಿ ರೂ. ಸಂಪಾದಿಸಿದ ವಂಚಕರು!!

ವರ್ಕ್ ಫ್ರಂ ಹೋಮ್ ಉದ್ಯೋಗ ನೀಡುವ ನೆಪದಲ್ಲಿ 3.5 ಕೋಟಿ ರೂ. ಸಂಪಾದಿಸಿದ ವಂಚಕರು!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು:ಉದ್ಯೋಗಕ್ಕಾಗಿ ಪರದಾಡುವ ಎಲ್ಲರೂ ಯಾವುದೇ ಜಾಹಿರಾತು ನೋಡಿದರು ಅದಕ್ಕೆ ದಾಖಲೆಗಳನ್ನು ಸಲ್ಲಿಸುವುದು ಮಾಮೂಲು ಆಗಿದೆ. ಆದರೆ ಇದೇ ಒಂದು ಅಸ್ತ್ರ ಎಂಬತೆ ಕಿಡಿಗೇಡಿಗಳು ವರ್ಕ್ ಫ್ರಂ ಹೋಮ್ ಉದ್ಯೋಗ ನೀಡುವುದಾಗಿ ನಂಬಿಸಿ, ಮೋಸದ ಜಾಲೆಗೆ ಸಿಲುಕುವಂತೆ ಮಾಡಿದ್ದಾರೆ.

ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ಹೇಳಿ,ದಾಖಲೆ ಪಡೆದು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆದು ದುರುಪಯೋಗಪಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಇದೀಗ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಸಂಜೀವ್‌, ಸೆನ್ನಪ್ಪನ್‌ ಬಂಧಿತ ಆರೋಪಿಗಳೆಂದು ತಿಳಿದು ಬಂದಿದ್ದು,ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಚೀನಾ ಮೂಲದ ಹರ್ಮನ್‌ ಹಾಗೂ ತಮಿಳುನಾಡಿನ ಚಿತ್ರವೇಲು ಎಂಬ ವಂಚಕರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಉದ್ಯೋಗ ಖಾಲಿಯಿದೆ. ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಎಣಿಸುವ ಅದೃಷ್ಟ ನಿಮ್ಮದಾಗಲಿದೆ ಎಂದು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿದ್ದರು. ನಿರುದ್ಯೋಗಿಗಳಿಂದ ಆಧಾರ್‌, ಪಾನ್‌ಕಾರ್ಡ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದು ನಿರುದ್ಯೋಗಿಗಳ ಹೆಸರಿನಲ್ಲೇ ಕಂಪನಿ ತೆರೆದು, ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಹಕರು ಹಣ ನೀಡುವಂತೆ ಒತ್ತಾಯಿಸಿದಾಗ ಆರೋಪಿಗಳು ಕಂಪನಿಯನ್ನು ಬಂದ್‌ ಮಾಡಿದ್ದಾರೆ. ತಮ್ಮ ಮೊಬೈಲ್‌ಗಳನ್ನು ಕೂಡ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಆರೋಪಿಗಳ ಹೆಸರಿನಲ್ಲಿದ್ದ 11 ಕಂಪನಿಯ ಖಾತೆಗಳಲ್ಲಿನ ಹಣವನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ಸಾವಿರ ಜನರ ಹೆಸರಿನಲ್ಲಿ ವಂಚಕರು ಕಂಪನಿ ತೆರೆದಿದ್ದಾರೆ ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಂಚಕರ ಜಾಲಕ್ಕೆ ಚೀನಾ ನಂಟು ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಆರೋಪಿಗಳ ನಾನಾ ಬ್ಯಾಂಕ್‌ ಖಾತೆಗಳಿಂದ 3.5 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.