Home latest ಬೆಂಗಳೂರು ಏರ್ಪೋರ್ಟ್ ಬಳಿ ನಡೆಯಿತು ಭಾರತವೇ ಹೆಮ್ಮೆ ಪಡುವಂತಹ ಘಟನೆ | ಸೇನಾ ವಾಹನದಲ್ಲಿದ್ದ ಯೋಧರನ್ನು...

ಬೆಂಗಳೂರು ಏರ್ಪೋರ್ಟ್ ಬಳಿ ನಡೆಯಿತು ಭಾರತವೇ ಹೆಮ್ಮೆ ಪಡುವಂತಹ ಘಟನೆ | ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು ಅಭಿಮಾನದಿಂದ ಸೆಲ್ಯೂಟ್ ಮಾಡಿದ ಪುಟ್ಟ ಪೋರ

Hindu neighbor gifts plot of land

Hindu neighbour gifts land to Muslim journalist

ದೇಶ ಭಕ್ತಿ ಹೊಂದಿದ ಪ್ರತಿಯೊಬ್ಬ ಪ್ರಜೆಯು ದೇಶದ ಉಜ್ವಲ ಭವಿಷ್ಯದ ಭಾಗವಾಗಿರುತ್ತಾನೆ.’ಜೈ ಕಿಸಾನ್ ಜೈ ಜವಾನ್ ‘ಎಂಬ ಮಾತಿನಂತೆ ಪೋಷಕರು ತಮ್ಮ ಮಕ್ಕಳಿಗೆ ರೈತ ಮತ್ತು ಯೋಧರಿಗೆ ಗೌರವ ಕೊಡುವ ಮೂಲಕ ಶಿಸ್ತು ಕಳಿಸುವುದು ಉತ್ತಮ. ಇದೇ ರೀತಿ ಬೆಂಗಳೂರು ವಿಮಾನ ನಿಲ್ದಾಣದ ಬಳಿ ನಡೆದ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಷಕರೊಂದಿಗೆ ಹೆಜ್ಜೆ ಹಾಕುತ್ತಿದ್ದ ಬಾಲಕ ಅಲ್ಲಿ ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು ಸೆಲ್ಯೂಟ್ ಮಾಡಿದ್ದಾನೆ. ಯೋಧರೂ ಪ್ರತಿಯಾಗಿ ಬಾಲಕನಿಗೆ ಸ್ಪಂದಿಸಿದ್ದಾರೆ.ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಆ ಪುಟ್ಟ ಬಾಲಕನ ಗೌರವವನ್ನು ನೋಡಿ ನಮಗೆಲ್ಲರಿಗೂ ಒಂದು ಬಾರಿ ಮೈ ಜುಮ್ ಅನ್ನೋದು ಗ್ಯಾರಂಟಿ.

ಅಭಿಷೇಕ್ ಕುಮಾರ್ ಝಾ ಅವರು ತಮ್ಮ ಸ್ನೇಹಿತನ ಈ ವಿಡಿಯೋವನ್ನು ಹೆಮ್ಮೆಯ ಕ್ಷಣ ಎಂದು ಪೋಸ್ಟ್ ಮಾಡಿದ್ದಾರೆ.ಅನೇಕರು ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೊಂದು ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಮತ್ತು ಯುವಕರಿಗೆ ದೇಶದ ಬಗ್ಗೆ, ಯೋಧರ ಬಗ್ಗೆ ಗೌರವ ನೀಡುವ ಸಂಸ್ಕೃತಿ ಹೇಳಿಕೊಡಬೇಕು. ನಮ್ಮ ದೇಶ ದೇಶಕ್ಕೆ, ಯೋಧರಿಗೆ ಗೌರವ ನೀಡಬೇಕು. ಈ ವಿಷಯದಲ್ಲಿ ಭಾರತ ಎಂದಿಗೂ ಮುಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.