Home News ಬೆಂಗಳೂರು Deadly Accident: ಕಂಬಳ ನೋಡಿ ವಾಪಾಸಾಗುತ್ತಿದ್ದ ಸಂದರ್ಭ ಬೋರ್‌ವೆಲ್‌ ಲಾರಿ- ಕಾರಿನ ನಡುವೆ ಭೀಕರ ಅಪಘಾತ!!!...

Deadly Accident: ಕಂಬಳ ನೋಡಿ ವಾಪಾಸಾಗುತ್ತಿದ್ದ ಸಂದರ್ಭ ಬೋರ್‌ವೆಲ್‌ ಲಾರಿ- ಕಾರಿನ ನಡುವೆ ಭೀಕರ ಅಪಘಾತ!!! ಮಂಗಳೂರಿನ ಇಬ್ಬರ ದಾರುಣ ಸಾವು!!

Bangalore kunigal accident

Hindu neighbor gifts plot of land

Hindu neighbour gifts land to Muslim journalist

Deadly Accident: ಬೋರ್‌ವೆಲ್‌ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತವೊಂದು ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ನಡೆದಿದೆ(Deadly Accident). ಈ ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.

 

ರಾಜ್ಯ ಹೆದ್ದಾರಿ 33 ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿಪಾಳ್ಯ ಗ್ರಾಮದ ಬಳಿ ಭಾನುವಾರ (ನ.26) ರಂದು ಮುಂಜಾನೆ ಸಂಭವಿಸಿದೆ.

ಮಂಗಳೂರು ಬಜಪೆ ಮೂಲದ ಕಿಶಾನ್‌ ಶೆಟ್ಟಿ (20) ದಕ್ಷಿಣ ಕನ್ನಡ ಜಿಲ್ಲೆ ಭಟ್ಟರ ತೋಟ ಗ್ರಾಮದ ಫಿಲಿಪ್‌ ನೇರಿ ಲೋಬೋ (32) ಎಂಬುವವರೇ ಮೃತರು.

ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು, ಇದನ್ನು ನೋಡಿ ವಾಪಾಸ್‌ ತಮ್ಮ ಊರಿಗೆ ಬರುವ ಸಂದರ್ಭದಲ್ಲಿ ಕುಣಿಗಲ್‌(Bangalore kunigal accident) ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

ಈ ಕುರಿತು ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕಂಬಳ ಓಟಕ್ಕೆ ಮೊದಲು ಕೋಣಗಳು ಸ್ವಲ್ಪ ದಿನ ಬ್ಯಾಚುಲರ್ಸ್ ಆಗಿರಬೇಕಾ ? ಇದು ಕೋಣಗಳ ಪರ್ಸನಲ್ ಮ್ಯಾಟರ್ !