Home National Tantric house: ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ

Tantric house: ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ

Hindu neighbor gifts plot of land

Hindu neighbour gifts land to Muslim journalist

Tantric house: ಈ ಆಧುನಿಕ ಯುಗದಲ್ಲೂ ಮೂಢನಂಬಿಕೆಗೂ ಜನರು ಮಾರು ಹೋಗುತ್ತಾರೆ ಅಂದ್ರೆ ಅದೊಂದು ವಿಪರ್ಯಾಸವೇ ಸರಿ. ಹೌದು, ಯಾಕಂದ್ರೆ ಭೂತ- ಪ್ರೇತವನ್ನು ಜನ ಈಗ್ಲೂ ನಂಬುತ್ತಿದ್ದಾರೆ. ಜನರ ಈ ನಂಬಿಕೆಯಿಂದಾಗಿ ಅನೇಕರು ಅದನ್ನೇ ಉದ್ಯೋಗ ಮಾಡ್ಕೊಂಡಿದ್ದಾರೆ. ಈ ಕೆಲಸದಿಂದಲೇ ಜನರನ್ನು ಲೂಟಿ ಮಾಡಿ ಹಲವರು ಮಾಂತ್ರಿಕರು ಜೀವನ ಸಾಗಿಸುತ್ತಿದ್ದಾರೆ.

ಹೌದು, ಉತ್ತರ ಪ್ರದೇಶದ ಬರೇಲಿ (Bareli)ಯ ಭೂತೋಚ್ಚಾಟಕ (Tantric house)ಸಂಭಾಲ್ ನಿವಾಸಿ ಸೈಯದ್ ಅಥರ್ ಮಿಯಾನ್ ಅವರು ಗುರ್ಸೌಲಿ ಗ್ರಾಮದಲ್ಲಿ ಬಾಡಿಗೆ ಮನೆಪಡೆದು,
ಭೂತ (Ghost) – ಪ್ರೇತದ ಕಾಟ ಎನ್ನುತ್ತ, ಮನೆಗೆ ಬರುವವರಿಗೆ ತಾಯತಗಳನ್ನು ನೀಡ್ತಿದ್ದ. ಭೂತೋಚ್ಛಾಟನೆ ಆತನ ಕೆಲಸವಾಗಿತ್ತು. ಒಂದು ದಿನ ಅಚಾನಕ್ ಆಗಿ ಆತನನ್ನು ಆಸ್ಪತ್ರೆ (Hospital) ಗೆ ಸೇರಿಸಲಾಗುತ್ತೆ. ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ರೆ ಮನೆಯಲ್ಲಿ ಆತನ ಸಹಾಯಕರು ಇಬ್ಬರು ಮಹಿಳೆಯರು ಮತ್ತೆ ಮನೆ ಮಾಲೀಕನ ಮಧ್ಯೆ ಜಗಳವಾಗಿದೆ.

ಜಗಳ ತಾರಕಕ್ಕೆ ತಲುಪಿ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಾಗ ಅಲ್ಲಿನ ಸ್ಥಿತಿ ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಈ ಜಗಳಕ್ಕೆ ಕಾರಣವಾಗಿದ್ದು ತಾಂತ್ರಿಕನ ಬಳಿ ಇದ್ದ ಹಣ. ಸಮಸ್ಯೆ ಇಟ್ಕೊಂಡು ಮನೆಗೆ ಬಂದ ಜನರಿಗೆ ತಾಯತ ಮಂತ್ರಿಸಿ ನೀಡುವ ವ್ಯಕ್ತಿ ಬಳಿ ಎಷ್ಟು ಹಣ ಇರಲು ಸಾಧ್ಯ? ನೀವು ಅಂದುಕೊಳ್ಳಬಹುದು.. ಆದ್ರೆ ಅಲ್ಲಿ ಸಿಕ್ಕ ಹಣ ಎಲ್ಲರನ್ನು ಅಚ್ಚರಿಗೊಳಿಸಿದೆ. ಮೂಲವೊಂದರ ಪ್ರಕಾರ, ತಾಯತ ನೀಡ್ತಿದ್ದ ವ್ಯಕ್ತಿ ಬಳಿ ಮೂಟೆಯಲ್ಲಿ 25 ಲಕ್ಷ ರೂಪಾಯಿಗಿಂತಲೂ ಹೆಚ್ಚು ನಗದು ಹಾಗೂ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಸದ್ಯ 500 -500 ರೂಪಾಯಿ ನೋಟುಗಳು ತುಂಬಿದ್ದ ಗೋಣಿ ಚೀಲವನ್ನು ಪೊಲೀಸರು ಕೊಂಡೊಯ್ದಿದ್ದಾರೆ. ಮಿಯಾನ್ ಆರೋಗ್ಯದಲ್ಲಿ ಸುಧಾರಣೆಯಾಗಿ, ಅವರು ಆಸ್ಪತ್ರೆಯಿಂದ ಮನೆಗೆ ಬಂದ್ಮೇಲೆ ವಿಚಾರಣೆ ನಂತರ ಇದನ್ನು ವಾಪಸ್ ನೀಡೋದಾಗಿ ಪೊಲೀಸರು ಹೇಳಿದ್ದಾರೆ. ಆದ್ರೆ ಗೋಣಿಚೀಲದಲ್ಲಿ ಎಷ್ಟು ಹಣವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ. ಒಟ್ಟಿನಲ್ಲಿ ಮಿಯಾನ್ ಮನೆಯಲ್ಲಿ ಇಷ್ಟೊಂದು ಹಣ ಸಿಗ್ತಿದ್ದಂತೆ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.