Home latest ಮಕ್ಕಳೊಂದಿಗೆ ಮಕ್ಕಳಾದ ಟೀಚರ್| ಸರಕಾರಿ ಶಾಲೆಯ ಈ ಡ್ಯಾನ್ಸ್ ವೀಡಿಯೋ ಸಖತ್ ವೈರಲ್!

ಮಕ್ಕಳೊಂದಿಗೆ ಮಕ್ಕಳಾದ ಟೀಚರ್| ಸರಕಾರಿ ಶಾಲೆಯ ಈ ಡ್ಯಾನ್ಸ್ ವೀಡಿಯೋ ಸಖತ್ ವೈರಲ್!

Hindu neighbor gifts plot of land

Hindu neighbour gifts land to Muslim journalist

ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ಒಳ್ಳೆಯ ವಿಷಯಗಳನ್ನು ಅಪ್ಪ – ಅಮ್ಮನಿಂದ ಕಲಿಯುತ್ತಾರೆ. ಪೋಷಕರನ್ನು ಹೊರತು ಪಡಿಸಿದರೆ ಅವರ ಶಾಲೆಯಲ್ಲಿ ಅವರಿಗೆ ಅಕ್ಷರ ಕಲಿಸುವ ಶಿಕ್ಷಕರು ನಂತರದ ಸ್ಥಾನ ಪಡೆಯುತ್ತಾರೆ. ಶಾಲೆಯಲ್ಲಿ ಪಾಠ ಹೇಳಿ ಕೊಡುವ ಟೀಚರ್ ಜೊತೆಗೆ, ಮಕ್ಕಳ ಜೊತೆ ಬೆರೆತು ನಗುಮೊಗದಿಂದ ಪಾಠ ಹೇಳಿಕೊಡುತ್ತಾ ತಮ್ಮ ವಿದ್ಯಾರ್ಥಿಗಳ ಜೊತೆಯಲ್ಲಿ ಅವರು ಮಕ್ಕಳಂತೆ ಆಟವಾಡುವ ಕೆಲವು ಶಿಕ್ಷಕರನ್ನು ಸಹ ನಾವು ನೋಡುತ್ತವೆ.

ಇಲ್ಲಿ ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿನಿ ಮಾಡುತ್ತಿರುವ ಡ್ಯಾನ್ಸ್ ನೋಡಿಕೊಂಡು ಅವರು ಹೆಜ್ಜೆ ಹಾಕಿರುವ ಒಂದು ಮುದ್ದಾದ ವಿಡಿಯೋ ಒಳ್ಳೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ನಲ್ಲಿ ತುಂಬಾನೇ ವೈರಲ್ ಆಗಿದೆ ನೋಡಿ.

‘ದೆಹಲಿ ಸರ್ಕಾರಿ ಶಾಲೆ’ ಮತ್ತು ‘ನನ್ನ ವಿದ್ಯಾರ್ಥಿಗಳು ನನ್ನ ಹೆಮ್ಮೆ’ ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಹಾಕಿ ವೀಡಿಯೋಗೆ ಸೇರಿಸಿದ್ದಾರೆ. ಇತರ ವಿದ್ಯಾರ್ಥಿಗಳು ಹುರಿದುಂಬಿಸುತ್ತಿದ್ದಂತೆ ಶಿಕ್ಷಕಿ ಮತ್ತು ಅವರ ವಿದ್ಯಾರ್ಥಿನಿ ತರಗತಿಯಲ್ಲಿಯೇ ಸಂತೋಷದಿಂದ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.