Home National Inter religion marriage: ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 11,000 ರೂಪಾಯಿ ನಗದು ಬಹುಮಾನ-...

Inter religion marriage: ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 11,000 ರೂಪಾಯಿ ನಗದು ಬಹುಮಾನ- ಸಂಘಟನೆ

Inter religion marriage
Image source: Sadhguru

Hindu neighbor gifts plot of land

Hindu neighbour gifts land to Muslim journalist

Inter religion marriage: ಮುಸ್ಲಿಂ ಯುವತಿಯರನ್ನು ಮದುವೆಯಾಗುವ (Inter religion marriage) ಹಿಂದೂ ಯುವಕರಿಗೆ ಸಂಘಟನೆಯೊಂದು 11,000ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದೆ. ಲವ್‌ ಜಿಹಾದ್‌ ಕುರಿತು ಹೊಸ ವಿವಾದ ಉಂಟು ಮಾಡಿರುವ ಬಲಪಂಥೀಯ ಸಂಘಟನೆ ʼಧರ್ಮ ಸೇನಾʼ ಗುರುವಾರ ಈ ಘೋಷಣೆ ಮಾಡಿದೆ.

ಮಧ್ಯಪ್ರದೇಶದಲ್ಲಿ ಜಬಲ್‌ಪುರದಲ್ಲಿ ಹಿಂದೂ ಹುಡುಗಿಯರ ಸಂಖ್ಯೆ ಕಡಿಮೆಯಾಗಲು ಲವ್‌ಜಿಹಾದ್‌ ಕಾರಣ ಎಂದು ಹಿಂದೂ ಧರ್ಮ ಸೇನೆ ಆರೋಪ ಮಾಡಿದ ಬೆನ್ನಲ್ಲೇ ಈ ಬಹುಮಾನವನ್ನು ಸಂಘಟನೆ ಘೋಷಣೆ ಮಾಡಿದೆ.

ಈ ಕುರಿತು ಮಾತನಾಡಿರುವ ಧರ್ಮಸೇನಾ ಸಂಸ್ಥಾಪಕ ಹಾಗೂ ಮುಖ್ಯಸ್ಥ ಯೋಗೇಶ್ ಅಗರ್ವಾಲ್, ಮುಸ್ಲಿಂ ಸಂಘಟನೆಗಳು ಲವ್ ಜಿಹಾದ್ ನಡೆಸುತ್ತಿರುವ ರೀತಿಯಲ್ಲಿ ಹಿಂದೂಗಳು ಮುಂದೆ ಬಂದು ಮುಸ್ಲಿಂ ಹುಡುಗಿಯರನ್ನು ಮದುವೆಯಾಗಲು ತಮ್ಮ ಹುಡುಗರನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ. ಮತಾಂತರದಿಂದ ಹಿಂದೂ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ. ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದರೆ, ಆಕೆಯನ್ನು ಮದುವೆಯಾಗಲು ನಿರ್ಧಾರ ಮಾಡಿದ್ದರೆ, ಅಂತವರಿಗೆ ಧರ್ಮಸೇನೆಯು ಎಲ್ಲಾ ಸಹಾಯ ಮಾಡುತ್ತದೆ. ಜೊತೆಗೆ 11,000 ರೂ. ನಗದು ಬಹುಮಾನವನ್ನು ನೀಡುತ್ತದೆ ಎಂದು ಅಗರ್ವಾಲ್‌ ಹೇಳಿದ್ದಾರೆ.

ಧರಂ ಸೇನೆಯು ಹಳೆಯ ಹಿಂದೂ ಸಂಘಟನೆ. 200ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ಜಬಲ್‌ಪುರದಲ್ಲಿ ಇದು ಇದೆ. ಈ ಸಂಘಟನೆ ಮೊದಲು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈಗ ಎರಡರೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡಿದೆ.

ಇದನ್ನೂ ಓದಿ: ವ್ಯವಹಾರದಲ್ಲಿ ಅಪೇಕ್ಷಿತ ಫಲಿತಾಂಶ, ಜೊತೆಗೆ ಉದ್ಯೋಗದಲ್ಲಿ ಪ್ರಮುಖ ನಿರ್ಧಾರ ತೆಗದುಕೊಳ್ಳುವಲ್ಲಿ ಈ ರಾಶಿಯವರಿಗೆ ಲಾಭ