Home latest Revenue department: ರಾಜ್ಯಾದ್ಯಂತ ಜಮೀನು ದಾಖಲೆಗಳಲ್ಲಿ ಮಹತ್ತರ ಬದಲಾವಣೆ- ಸರ್ಕಾರದಿಂದ ಹೊಸ ನಿರ್ಧಾರ

Revenue department: ರಾಜ್ಯಾದ್ಯಂತ ಜಮೀನು ದಾಖಲೆಗಳಲ್ಲಿ ಮಹತ್ತರ ಬದಲಾವಣೆ- ಸರ್ಕಾರದಿಂದ ಹೊಸ ನಿರ್ಧಾರ

Revenue department

Hindu neighbor gifts plot of land

Hindu neighbour gifts land to Muslim journalist

Revenue department: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕಂದಾಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದೆ. ಅದರಲ್ಲಿಯೂ ಸಕ್ರಿಯ ಸಚಿವರಾಗಿರುವ ಕೃಷ್ಣ ಬೈರೇಗೌಡರವರು ಕಂದಾಯ ಸಚಿವರಾದ ಬಳಿಕ ಇಲಾಖೆಯಲ್ಲಿ(Revenue department) ಕಂದಾಯ ಕ್ಷೇತ್ರದಲ್ಲಿ ಅನೇಕ ಹೊಸ ನಿರ್ಧಾರಗಳನ್ನು, ಯೋಜನೆಗಳನ್ನು ಕೈಗೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ರಾಜ್ಯಾದ್ಯಂತ ಎಲ್ಲಾ ಜಮೀನು ದಾಖಲೆಗಳನ್ನು ಡಿಜಿಟಲ್ ಮಾಡಲು ಸರ್ಕಾರ ಮುಂದಾಗಿದೆ.

ಹೌದು, ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಿದ್ದು ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಕೃಷ್ಣ ಭೈರೇಗೌಡ ಅವರು ಹೊಸ ಘೋಷಣೆ ಹೊರಡಿಸಿದ್ದು ಈ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸುವಂತಹ ಗುರಿಯನ್ನು ಕೂಡ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

ಏನಿದು ಜಮೀನು ದಾಖಲೆ ಡಿಜಿಟಲೀಕರಣ ?!
ಭೂ ದಾಖಲೆಗಳು ಡಿಜಿಟಲೀಕರಣ ಆದ ಬಳಿಕ ಭೂದಾಖಲೆಗಳನ್ನು ಸ್ಕ್ಯಾನಿಂಗ್‌ ಮಾಡಲಾಗುವುದು. ಆಗ ಜಮೀನಿನ ಮಾಲೀಕತ್ವ ಯಾರದ್ದು? ಯಾರಿಂದ ಯಾರಿಗೆ ಹೇಗೆ ಬಂತು, ಮಾರಾಟವಾಯಿತೆ ಅಥವಾ ದಾನದ ರೂಪದಲ್ಲಿ ಬಂದಿತೆ ಎಂಬುದರ ಸ್ಪಷ್ಟ ಮಾಹಿತಿ ಎಲ್ಲವೂ ಸಿಗುತ್ತದೆ.

ಅಂದಹಾಗೆ ಇಡೀ ರಾಜ್ಯದ್ಯಂತ ಸುಮಾರು 2.40 ಕೋಟಿಯಷ್ಟು ಸರ್ವೆ ಸಂಖ್ಯೆಗಳ ಪಹಣಿಗಳಿವೆ. ಅವುಗಳೆಲ್ಲವನ್ನೂ ರಕ್ಷಿಸಿ ಇಡಲು ಡಿಜಿಟಲೀಕರಣ ಮಾಡಲಾಗುವುದು ಎಂದು ಕೃಷ್ಣ ಭೈರೇಗೌಡರು ಹೇಳಿದ್ದಾರೆ.

ಇದನ್ನೂ ಓದಿ: Israel-Palestinian war: ಇಸ್ರೇಲ್- ಪ್ಯಾಲೆಸ್ತೇನ್ ಯುದ್ಧ , ಪ್ಯಾಲೆಸ್ತೇನ್ ಪರ ನಿಂತ ಭಾರತ !! ಅಚ್ಚರಿ ಮೂಡಿಸಿದ ನಡೆ