Home latest Milk price: ರೈತರಿಗೆ ಬಿಗ್ ಶಾಕ್ – ಹಾಲಿನ ಖರೀದಿ ದರವನ್ನು ಕಡಿತ ಮಾಡಿ ಆದೇಶ...

Milk price: ರೈತರಿಗೆ ಬಿಗ್ ಶಾಕ್ – ಹಾಲಿನ ಖರೀದಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿದ ಸರ್ಕಾರ !!

Milk price

Hindu neighbor gifts plot of land

Hindu neighbour gifts land to Muslim journalist

Milk Price: ಹಾಲು ಉತ್ಪಾದಕರಿಗೆ ರಾಜ್ಯೋತ್ಸವ ದಿನವೇ ಶಾಕಿಂಗ್‌ ಸುದ್ದಿ ನೀಡಲಾಗಿದೆ. ಇದರಿಂದಾಗಿ ಹಾಲು ಉತ್ಪಾದಕರಿಗೆ ನಷ್ಟವಾಗಲಿದೆ. ಹೌದು, ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್ ಗೆ ಎರಡು ರೂ. ಕಡಿತಗೊಳಿಸುವಂತೆ ಬೆಂಗಳೂರು ಹಾಲು ಒಕ್ಕೂಟ ಆದೇಶ ಹೊರಡಿಸಿದೆ.

ಬರ ಪರಿಸ್ಥಿತಿಯಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಹಾಲು ಉತ್ಪಾದಕ ರೈತರಿಗೆ ಹಾಲಿನ ದರ (Milk Price) ಕಡಿತಗೊಳಿಸಿ ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಈಗಾಗಲೇ ಜುಲೈನಲ್ಲಿ ಹಾಲಿನ ದರ ಪರಿಷ್ಕರಣೆ ಮಾಡಿದ್ದ ರಾಜ್ಯ ಸರ್ಕಾರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿ ಇದನ್ನು ರೈತರಿಗೆ ನೀಡುವಂತೆ ಸೂಚಿಸಿತ್ತು. ಇದೀಗ ಎರಡೇ ತಿಂಗಳಲ್ಲಿ ದರ ಇಳಿಕೆ ಮಾಡುವ ಮೂಲಕ ಸರ್ಕಾರ ಕೊಟ್ಟಿದ್ದ ಹೆಚ್ಚಿನ ದರವನ್ನು ಒಕ್ಕೂಟ ರೈತರಿಂದ ಕಸಿದುಕೊಂಡಿದೆ.

ಮಾಹಿತಿ ಪ್ರಕಾರ ರೈತರಿಂದ ಬೆಂಗಳೂರು ಹಾಲು ಒಕ್ಕೂಟ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಅಕ್ಟೋಬರ್ 31ರವರೆಗೆ ಶೇಕಡ 4 ಫ್ಯಾಟ್, 8.5 ಸಾಂದ್ರತೆ ಇದ್ದಲ್ಲಿ 34.15 ರೂ. ದರ ನಿಗದಿ ಮಾಡಲಾಗಿತ್ತು. ನವೆಂಬರ್ 1ರಿಂದ ಇದೇ ಗುಣಮಟ್ಟದ ಹಾಲಿಗೆ 32.15 ನಿಗದಿಪಡಿಸಲಾಗಿದೆ. ಇದರಿಂದಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ 1.10 ಲಕ್ಷ ರೈತರಿಗೆ ನಷ್ಟವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ : ರೈತರಿಗೆ ಇಂಧನ ಸಚಿವರಿಂದ ಭರ್ಜರಿ ಗುಡ್ ನ್ಯೂಸ್ – ಇನ್ನು ಪ್ರತಿದಿನವೂ ಕೃಷಿಗೆ ಸಿಗಲಿದೆ ಇಷ್ಟು ಗಂಟೆ ವಿದ್ಯುತ್ !!