Home National Chandrayana-1: ಚಂದ್ರನ ಕುರಿತು ಇಸ್ರೋ ವಿಜ್ಞಾನಿಗಳಿಗೆ ಸಿಕ್ತು ಸಖತ್ ಗುಡ್ ನ್ಯೂಸ್ !! ಆದ್ರೆ...

Chandrayana-1: ಚಂದ್ರನ ಕುರಿತು ಇಸ್ರೋ ವಿಜ್ಞಾನಿಗಳಿಗೆ ಸಿಕ್ತು ಸಖತ್ ಗುಡ್ ನ್ಯೂಸ್ !! ಆದ್ರೆ ಈ ಸಲ ಮಾಹಿತಿ ಕಳಿಸಿದ್ದು ವಿಕ್ರಮ್, ಪ್ರಗ್ಯಾನ್ ಯಾರೂ ಅಲ್ಲ, ಮತ್ಯಾರು ?

Chandrayaan-1

Hindu neighbor gifts plot of land

Hindu neighbour gifts land to Muslim journalist

 

Go back

Your message has been sent

Warning
Warning
Warning
Warning

Warning.

Chandrayaan-1: ಭಾರತದ ಅನೇಕ ವರ್ಷಗಳ ಕನಸು ಚಂದ್ರಯಾನ-3 ಯಶಸ್ವಿಯಾಗಿದ್ದು, ಸದ್ಯ ಚಂದ್ರನಂಗಳದಲ್ಲಿರೋ ವಿಕ್ರಮ್ ಲ್ಯಾಂಡರ್(Vikram lander) ಹಾಗೂ ಪ್ರಗ್ಯಾನ್ ರೋವರ್(Pragyan rover) 15 ದಿನಗಳ ಕಾಲ ನಿರಂತರವಾಗಿ ಮಾಹಿತಿ ಕಳಿಸಿ ಇದೀಗ ನಿದ್ರೆಗೆ ಜಾರಿದೆ. ಆದರೀಗ ಈ ಬೆನ್ನಲ್ಲೇ ಇಸ್ರೋ(Isro) ವಿಜ್ಞಾನಿಗಳಿಗೆ ಚಂದ್ರನಂಗಳದಿಂದ ಮತ್ತೊಂದು ಮಹತ್ವದ ಮಾಹಿತಿ ದೊರಕಿದೆ. ಆದರೆ ಕುತೂಹಲ ಅಂದ್ರೆ ಈ ಸಲ ಮಾಹಿತಿ ಕೊಟ್ಟದ್ದು ಚಂದ್ರಯಾನ-3 ಮೂಲಕ ಚಂದಮಾಮನ ಅಂಗಳದಲ್ಲಿ ಮಲಗಿರುವ ವಿಕ್ರಮ್, ಪ್ರಗ್ಯಾನ್ ಯಾರೂ ಅಲ್ಲ. ಹಾಗಿದ್ರೆ ಮತ್ಯಾರು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ.

ಚಂದ್ರಯಾನ-3 ಮೂಲಕ ಚಂದ್ರನಲ್ಲಿ ಹಲವು ದಾತುಗಳ ಇರುವಿಕೆಯನ್ನು ನಾವು ಕಂಡುಕೊಂಡಿದ್ದೇವೆ. ಈ ಬೆನ್ನಲ್ಲೇ ಚಂದ್ರನ ಮೇಲೆ ನೀರು ಕೂಡ ಇದೆ ಎಂಬ ವಿಷಯವೊಂದನ್ನು ಇಸ್ರೋ ವಿಜ್ಞಾನಿಗಳು ನೀಡಿದ್ದಾರೆ. ಅದೇನೆಂದರೆ ಭಾರತದ ಚಂದ್ರಯಾನ-1(Chandrayaan-1) ಯೋಜನೆಯ ದೂರಸಂವೇದಿ ದತ್ತಾಂಶವನ್ನು ವಿಶ್ಲೇಷಣೆ ಮಾಡಿರುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಕಂಡುಹಿಡಿದಿದ್ದಾರೆ. ಹೀಗಾಗಿ ಈ ಸಲ ಇಸ್ರೋ ಹಂಚಿಕೊಂಡಿರುವ ಸಂತಸದ ವಿಚಾರವು ಚಂದ್ರಯಾನ-1 ಸಂಗ್ರಹಿಸಿರೋ ಮಾಹಿತಿ ಮೂಲಕ ವಿಜ್ಞಾನಿಗಳು ಪತ್ತೆಹಚ್ಚಿರುವುದಾಗಿದೆ.

ಏನಿದು ಹೊಸ ಸಮಾಚಾರ?
ಭಾರತದ ಚಂದ್ರಯಾನ- 1ರ ನೌಕೆಯು ಭವಿಷ್ಯದ ಮಾನವ ಅನ್ವೇಷಣೆಗಳಿಗೆ ಜಲ ಸಂಪನ್ಮೂಲಗಳನ್ನು ಒದಗಿಸುವ ಹಾಗೂ ಚಂದ್ರನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ನೆರವಾಗುವಂತಹ ಚಂದ್ರನ ಮೇಲೆ ನೀರಿನ ಅಸ್ತಿತ್ವ ಇರುವ ನಿರ್ಣಾಯಕ ಶೋಧನೆಯನ್ನು ಮಾಡಿತ್ತು. ಇದನ್ನು ಆಧಾರವಿಗಿಟ್ಟುಕೊಂಡು ಅಮೆರಿಕದ ಮನೋವಾದಲ್ಲಿರುವ ಹವಾಯ್ ವಿಶ್ವವಿದ್ಯಾಲಯದ (ಯುಎಚ್) ಸಂಶೋಧಕರ ನೇತೃತ್ವದ ತಂಡವು ಚಂದ್ರನ ಮೇಲೆ ನೀರು ರೂಪುಗೊಂಡ ಪ್ರಕ್ರಿಯೆ ಹಾಗೂ ಅದರ ಕುರಿತಾದ ಗೋಜಲುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.

ಭೂಮಿಯ ಪ್ಲಾಸ್ಮಾ ಶೀಟ್‌ನಲ್ಲಿರುವ ಈ ಎಲೆಕ್ಟ್ರಾನ್‌ಗಳು ಚಂದ್ರನ ಮೇಲ್ಮೈಯಲ್ಲಿ ಬಂಡೆಗಳು ಮತ್ತು ಖನಿಜಗಳನ್ನು ಒಡೆಯುವ ಅಥವಾ ಕರಗಿಸುವ ಹವಾಮಾನ ಪ್ರಕ್ರಿಯೆಗಳಿಗೆ ಕೊಡುಗೆ ನೀಡುತ್ತಿವೆ ಎಂದು ಈ ತಂಡವು ಕಂಡುಹಿಡಿದಿದೆ. ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಚಂದ್ರನ ನೆಲದಲ್ಲಿ ನೀರಿನ ರಚನೆಗೆ ಎಲೆಕ್ಟ್ರಾನ್‌ಗಳು ಸಹಾಯ ಮಾಡಿರಬಹುದು ಎಂದು ಕಂಡುಹಿಡಿದಿದೆ. ಚಂದ್ರನ ಮೇಲೆ ನೀರಿನ ಸಾಂದ್ರತೆಗಳು ಮತ್ತು ಹಂಚಿಕೆಗಳನ್ನು ತಿಳಿದುಕೊಳ್ಳುವುದು ಅದರ ರಚನೆ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದ ಮಾನವ ಪರಿಶೋಧನೆಗೆ ನೀರಿನ ಸಂಪನ್ಮೂಲಗಳನ್ನು ಒದಗಿಸಲು ನಿರ್ಣಾಯಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಯುಎಚ್‌ ಮನೋವಾ ಸ್ಕೂಲ್ ಆಫ್ ಓಷನ್‌ನ ಸಹಾಯಕ ಸಂಶೋಧಕ ಶುಯಿ ಲಿ ಅವರು ‘ಚಂದ್ರನು ಭೂಮಿಯ ಮ್ಯಾಗ್ನೆಟೋಟೈಲ್ ಮೂಲಕ ಹಾದುಹೋಗುವಾಗ ಮೇಲ್ಮೈ ಹವಾಮಾನದಲ್ಲಿನ ಬದಲಾವಣೆಗಳನ್ನು ತಂಡವು ತನಿಖೆ ಮಾಡಿದೆ, ಇದು ಸೌರ ಮಾರುತದಿಂದ ಚಂದ್ರನ ಮೇಲ್ಮೈಯನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ ಆದರೆ ಸೂರ್ಯನ ಬೆಳಕಿನ ಫೋಟಾನ್‌ಗಳಿಂದಲ್ಲ ಇದು ರಕ್ಷಣೆ ಪಡೆಯೋದಿಲ್ಲ. “ಇದು ಚಂದ್ರನ ಮೇಲ್ಮೈ ನೀರಿನ ರಚನೆಯ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ನೈಸರ್ಗಿಕ ಪ್ರಯೋಗಾಲಯವನ್ನು ಒದಗಿಸುತ್ತದೆ. ಚಂದ್ರನು ಮ್ಯಾಗ್ನೆಟೋಟೈಲ್‌ನ ಹೊರಗಿರುವಾಗ, ಚಂದ್ರನ ಮೇಲ್ಮೈ ಸೌರ ಮಾರುತದಿಂದ ಸ್ಫೋಟಗೊಳ್ಳುತ್ತದೆ. ಮ್ಯಾಗ್ನೆಟೋಟೈಲ್‌ನ ಒಳಗೆ ಬಹುತೇಕ ಸೌರ ಮಾರುತ ಪ್ರೋಟಾನ್‌ಗಳಿಲ್ಲ ಮತ್ತು ನೀರಿನ ರಚನೆಯು ಸುಮಾರು ಶೂನ್ಯಕ್ಕೆ ಇಳಿಯುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಚಂದ್ರಯಾನ-1 :
ಚಂದ್ರಯಾನ 1 ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಕ್ಟೋಬರ್ 2008 ರಲ್ಲಿ ಉಡಾವಣೆ ಮಾಡಿತು ಮತ್ತು ಆಗಸ್ಟ್ 2009 ರವರೆಗೆ ಕಾರ್ಯನಿರ್ವಹಿಸಿತು. ಈ ಕಾರ್ಯಾಚರಣೆಯು ಆರ್ಬಿಟರ್ ಮತ್ತು ಇಂಪ್ಯಾಕ್ಟರ್ ಅನ್ನು ಒಳಗೊಂಡಿತ್ತು. ಭಾರತವು ಕಳೆದ ತಿಂಗಳು ಚಂದ್ರನಲ್ಲಿ ಈವರೆಗೂ ಯಾರೂ ಇಳಿಯದ ದಕ್ಷಿಣ ಧ್ರುವದ ಬಳಿ ರೋವರ್ ಮತ್ತು ಲ್ಯಾಂಡರ್‌ ಅನ್ನು ಯಶಸ್ವಿಯಾಗಿ ಇಳಿಸಿತ್ತು. ಚಂದ್ರಯಾನ-3 ಮಿಷನ್‌ ಸಂಪೂರ್ಣ ಯಶಸ್ಸಿನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಹಾಗೂ ಲ್ಯಾಂಡರ್‌ ಇಳಿಸಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿತು.

ಇದನ್ನೂ ಓದಿ: Nirmala seetaraman: ಬಿಜೆಪಿ ಟಿಕೆಟ್ ವಂಚನೆ ಪ್ರಕರಣ- ಚೈತ್ರಾ ಕುಂದಾಪುರಳ ಖ್ಯಾತಿಗೆ ಕಾರಣವಾಯ್ತು ನಿರ್ಮಲಾ ಸೀತಾರಾಮನ್ ಮಾಡಿದ ಆ ಒಂದು ಟ್ವೀಟ್ !!