Home latest Free Sewing Machine:ಮಹಿಳೆಯರೇ, ಉಚಿತ ಹೊಲಿಗೆಯಂತ್ರ ಬೇಕೆಂದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ ; ಇಲ್ಲಿದೆ...

Free Sewing Machine:ಮಹಿಳೆಯರೇ, ಉಚಿತ ಹೊಲಿಗೆಯಂತ್ರ ಬೇಕೆಂದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ ; ಇಲ್ಲಿದೆ ನೋಡಿ ಹೆಚ್ಚಿನ ಡೀಟೇಲ್ಸ್

Free Sewing Machine

Hindu neighbor gifts plot of land

Hindu neighbour gifts land to Muslim journalist

Free Sewing Machine: ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಜೊತೆಗೆ ಆರ್ಥಿಕವಾಗಿ ಸದೃಢವಾಗಬೇಕೆಂಬ ಬಯಕೆ ಎಲ್ಲ ಮಹಿಳೆಯರಿಗೂ ಇರುವುದು ಸಹಜ. ಬಹುತೇಕ ಮಹಿಳೆಯರು ಒಂದಲ್ಲ ಒಂದು ಸಮಯದಲ್ಲಿ ಹೊಲಿಗೆ ಕಲಿತಿರುತ್ತಾರೆ. ಹೊಲಿಗೆ ಎಂದೂ ಬೇಡಿಕೆ ಕಳೆದುಕೊಳ್ಳದ ಉದ್ಯೋಗ ಎಂದರೆ ತಪ್ಪಾಗದು. ಎಲ್ಲ ಕಾಲದಲ್ಲೂ ಇದಕ್ಕೆ ಬೇಡಿಕೆ ಇದ್ದೇ ಇದೆ. ಕೆಲ ಮಹಿಳೆಯರಿಗೆ ಸಂಪೂರ್ಣ ಹೊಲಿಗೆ ತಿಳಿದಿದ್ದರೂ ಮನೆಯಲ್ಲಿ ಮಶಿನ್ ಇರುವುದಿಲ್ಲ. ಅದಕ್ಕೆ ಹೂಡಿಕೆ ಮಾಡಿ ಉದ್ಯೋಗ ಶುರು ಮಾಡುವಷ್ಟು ಹಣವಿರುವುದಿಲ್ಲ. ನೀವೂ ಅಂಥವರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ನೀವೂ ಕೂಡ ಹೊಲಿಗೆ ಮಶಿನ್ ಖರೀದಿ(Free Sewing Machine) ಮಾಡಿ ನಿಮ್ಮ ಸ್ವಂತ ಉದ್ಯೋಗ ಆರಂಭಿಸಬಹುದು.

ಸರ್ಕಾರವು ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು (Free Sewing Machine) ರೂಪಿಸಲಾಗಿದೆ. 2023-24 ರ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಗುಡಿ ಕೈಗಾರಿಕೆ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.ಪ್ರಸ್ತುತ ಮಂಡ್ಯದಲ್ಲಿ ಅಕ್ಟೋಬರ್ 10ರವರೆಗೆ ನೀವು ಅರ್ಜಿ ಸಲ್ಲಿಬಹುದು. ಈ ಯೋಜನೆಗಾಗಿ ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಅರ್ಹ ಫಲಾನುಭವಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇನ್ನುಳಿದ ಜಿಲ್ಲೆಗಳಲ್ಲಿ ಈ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿಲ್ಲ ಎಂಬುದನ್ನು ಗಮನಿಸಬೇಕು.

ಈ ಯೋಜನೆಗೆ ಬೇಕಾದ ದಾಖಲೆಗಳು ಹೀಗಿವೆ:
ಯೋಜನೆ 1: ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆಗಾಗಿ

* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
* ಜಾತಿ ಪ್ರಮಾಣ ಪತ್ರ
* ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
* ರೇಷನ್ ಕಾರ್ಡ್ / ವೋಟರ್ ಐಡಿ ಹೊಂದಿದ್ದರೆ ಪ್ರತಿ ಹಾಗೂ ಮರಗೆಲಸ, ಗಾರೆಕೆಲಸ, ಕ್ಷೌರಿಕ, ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದರೆ, ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಡೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ ಬೇಕಾಗುತ್ತದೆ.

ಈ ಲಿಂಕ್‌ಗೆ ಭೇಟಿ ನೀಡಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

# ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ
* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
* ಜಾತಿ ಪ್ರಮಾಣಪತ್ರ
* ಬ್ಯಾಂಕ್ ಪಾಸ್ ಪುಸ್ತಕ
* ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ
* ಉದ್ಯಮ ನೋಂದಣಿ ಪತ್ರ
* ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಗಿ ಪತ್ರ
* ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ

# ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ ಮಾಡಲು ಬೇಕಾಗುವ ದಾಖಲೆಗಳು ಹೀಗಿವೆ:
* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
* ಜಾತಿ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್‌ ಬುಕ್
* ನಿಗದಿತ ನಮೂನೆಯಲ್ಲಿ ಬ್ಯಾಂಕ್‌ನಿಂದ ಸಾಲ ಮಂಜೂರಾತಿ/ ಬಿಡುಗಡೆಯಾಗಿರುವ ಪತ್ರ

ಇದನ್ನೂ ಓದಿ:Jio ಸಿಮ್ ಬಳಕೆದಾರರಿಗೆ ಭರ್ಜರಿ ಸುದ್ದಿ- ಇನ್ನು ನಿಮ್ಗೆ ಉಚಿತವಾಗಿ ಸಿಗಲಿದೆ ಈ ಅವಕಾಶ !