Home National Central government: ಪೋಷಕರೇ ಗಮನಿಸಿ – ಮಕ್ಕಳನ್ನು ಶಾಲೆಗೆ ಸೇರಿಸಲು ಬಂತು ಹೊಸ ರೂಲ್ಸ್ !!

Central government: ಪೋಷಕರೇ ಗಮನಿಸಿ – ಮಕ್ಕಳನ್ನು ಶಾಲೆಗೆ ಸೇರಿಸಲು ಬಂತು ಹೊಸ ರೂಲ್ಸ್ !!

Hindu neighbor gifts plot of land

Hindu neighbour gifts land to Muslim journalist

Central government : 2024-25ನೇ ಸಾಲಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಅಂದುಕೊಂಡಿರುವ ಪೋಷಕರೇ ಇತ್ತ ಗಮನಿಸಿ. ಯಾಕೆಂದರೆ ಮುಂದಿನ ವರ್ಷದಿಂದ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹೊಸ ರೂಲ್ಸ್ ಜಾರಿಯಾಗಿದೆ.

ಅದೇನೆಂದರೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (ಆರ್ಟಿಇ) ಕಾಯ್ದೆ, 2009 ಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು(Central government)ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1 ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಟ ಆರು ವರ್ಷ ತುಂಬಿರಬೇಕು ಎಂದು ಸೂಚನೆ ನೀಡಿದೆ.

ಹೌದು, 2024-25ರ ಸಾಲಿನ ಒಂದನೇ ತರಗತಿ ಪ್ರವೇಶಾತಿಗೆ ಮಕ್ಕಳ ಕನಿಷ್ಠ ವಯೋಮಿತಿಯನ್ನು 6 ವರ್ಷ ಪೂರ್ಣವಾಗಿರುವಂತೆ ನೋಡಿಕೊಳ್ಳಬೇಕೆಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಜೊತೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೂ ಸೂಚನೆ ನೀಡಿದೆ. ಈ ಕುರಿತಾಗಿ ಪತ್ರ ಬರೆಯಲಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯ್ದೆಯ 2009 ರ ನಿಬಂಧನೆಗಳ ಪ್ರಕಾರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

https://twitter.com/EduMinOfIndia/status/1761648754124280032?t=ml59rJwqeLE7sNMtOos7Vw&s=19

ಅಂದಹಾಗೆ ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಶಿಕ್ಷಣ ಸಚಿವಾಲಯವು, “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯಯದ ಅಧಿಸೂಚನೆಯಂತೆ ಗ್ರೇಡ್ 1 ಗೆ (1ನೇ ತರಗತಿಗೆ) ಪ್ರವೇಶದ ವಯಸ್ಸು 2024-25 ರಿಂದ 6+ ವರ್ಷಗಳು ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು/UTಗಳನ್ನು ವಿನಂತಿಸಲಾಗಿದೆ.