Home Latest Health Updates Kannada LPG Gas Save: ಗ್ಯಾಸ್ ಬೇಗ ಖಾಲಿ ಆಗುತ್ತೆ ಅನ್ನೋ ಚಿಂತೆಯೇ ?! ಈ ಸಿಂಪಲ್...

LPG Gas Save: ಗ್ಯಾಸ್ ಬೇಗ ಖಾಲಿ ಆಗುತ್ತೆ ಅನ್ನೋ ಚಿಂತೆಯೇ ?! ಈ ಸಿಂಪಲ್ ಟ್ರಿಕ್ಸ್ ಬಳಸಿದ್ರೆ ಹಲವು ತಿಂಗಳು ಹೊಸ ಸಿಲಿಂಡರ್ ಕೊಳ್ಳೋದೆ ಬೇಡ !!

LPG Gas Save

Hindu neighbor gifts plot of land

Hindu neighbour gifts land to Muslim journalist

LPG Gas Save: ಇತ್ತೀಚೆಗೆ ಸಿಲಿಂಡರ್(LPG Gas Cylinder)ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ. ಹೀಗಾಗಿ ಅಡುಗೆಗೆ ಮಾಡಲು ಹೆಚ್ಚಾಗಿ ಗ್ಯಾಸ್ ಬಳಕೆ ಮಾಡುವಾಗ ಜನರು ಆದಷ್ಟು ಅಡುಗೆ ಅನಿಲವನ್ನು ಉಳಿತಾಯ(LPG Gas Save)ಮಾಡಲು ಪ್ರಯತ್ನಿಸಬೇಕು. ಹಾಗಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಅನುಸರಿಸುವುದರ ಮೂಲಕ ಅಡುಗೆ ಅನಿಲವನ್ನು ಉಳಿತಾಯ ಮಾಡಬಹುದು.

ಮೊದಲಿಗೆ ಬರ್ನರ್ ನಲ್ಲಿ ಹಳದಿ ಅಥವಾ ಕಿತ್ತಳೆ ಬೆಂಕಿಯು ಬರುತ್ತಿದೆಯಾ ಅಥವಾ ಬೆಂಕಿಯು ಅಸ್ತವ್ಯಸ್ತವಾಗಿ ಇದೆಯಾ ಎಂದು ತಿಳಿದುಕೊಂಡು ಒಂದು ವೇಳೆ ಬೆಂಕಿ ಈ ಬಣ್ಣಕ್ಕೆ ತಿರುಗಿದ್ದರೆ, ಬರ್ನರ್ ನಲ್ಲಿ ಸಮಸ್ಯೆ ಎಂದರ್ಥ ಹೀಗಿದ್ದರೆ ಆಗ ನೀವು ಇದನ್ನು ತೆಗೆದು ಶುಚಿ ಮಾಡಬೇಕು.

ಹೆಚ್ಚಾಗಿ ಧಾನ್ಯಗಳು ಹಾಗೂ ಅಕ್ಕಿ ಬೇಯಲು ತುಂಬಾ ಸಮಯ ಹಿಡಿಯುತ್ತದೆ. ಇದರಿಂದ ಕೆಲವೊಂದು ಧಾನ್ಯಗಳು ಅಥವಾ ಅಕ್ಕಿಯನ್ನು ಅಡುಗೆ (kitchen)ಮಾಡುವ ಮುನ್ನ ಒಂದೆರಡು ಗಂಟೆಗಳ ಕಾಲ ನೆನೆಸಿಡಬೇಕು ಕೆಂಪಕ್ಕಿ ಅಥವಾ ಕುಚ್ಚಲಕ್ಕಿ ಬೇಯಲು ತುಂಬಾನೇ ಸಮಯ ತೆಗೆದುಕೊಳ್ಳುವುದು ಇದರಿಂದ ಗ್ಯಾಸ್ ಕೂಡ ಜಾಸ್ತಿ ಬೇಕಾಗುತ್ತದೆ. ಹೀಗಾಗಿ ಕೆಲವು ಗಂಟೆಗಳ ಕಾಲ ಇವುಗಳನ್ನು ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

# ಪ್ರೆಶರ್ ಕುಕ್ಕರ್ ಬಳಸಿ:
ಬಹುತೇಕ ಎಲ್ಲರು ಮನೆಯಲ್ಲಿ ಪ್ರೆಶರ್ ಕುಕ್ಕರ್ ಬಳಸುವುದು ಸಹಜ. ಈ ಪ್ರೆಶರ್ ಕುಕ್ಕರ್ ಉಪಯೋಗಿಸುವುದರಿಂದ ಸಮಯ ಮತ್ತು ಗ್ಯಾಸ್ ಎರಡೂ ಉಳಿತಾಯವಾಗುತ್ತದೆ.

# ಸರಿಯಾದ ಗಾತ್ರದ ಪಾತ್ರೆಯನ್ನು ಬಳಸಿ:
ಅಡುಗೆ ಮಾಡಲು ಬಳಸುವ ಪಾತ್ರೆಯ ಬಗ್ಗೆ ಗಮನ ಹರಿಸಿ. . ಅಗತ್ಯಕ್ಕಿಂತ ಚಿಕ್ಕ ಪಾತ್ರೆಯಲ್ಲಿ ಬೇಯಿಸಿದರೆ ಉರಿ ಆರಿ ಹೋಗುತ್ತದೆ. ಅದೇ ರೀತಿ, ದೊಡ್ಡ ಪಾತ್ರೆಯಲ್ಲಿ ಅಡುಗೆ ಮಾಡಿದರೆ, ಅದು ಬಿಸಿಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಸರಿಯಾದ ಗಾತ್ರದ ಪಾತ್ರೆಯಲ್ಲಿ ಬೇಯಿಸುವುದು ಉತ್ತಮ.

# ಅಡುಗೆ ಮಾಡುವಾಗ ನೀರನ್ನು ಬಳಸುವಾಗ ಜಾಗ್ರತೆ ವಹಿಸಿ:
ಅಡುಗೆ ಮಾಡುವಾಗ ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಹಾಕಿ. ಹೆಚ್ಚಾಗಿ ನೀರು ಹಾಕಿ ಅಡುಗೆ ಮಾಡಿದರೆ ಗ್ಯಾಸ್ ವ್ಯರ್ಥವಾಗುತ್ತದೆ.

# ನೀವು ಹಾಲನ್ನು ಫ್ರಿಡ್ಜ್ನಲ್ಲಿಟ್ಟಿದ್ದರೆ ಬೇಗ ಹೊರ ತೆಗೆದಿಡುವ ಅಭ್ಯಾಸ ಮಾಡಿಕೊಳ್ಳಿ. ಸ್ವಲ್ಪ ಸಮಯ ಕಳೆದ ಬಳಿಕ ಸಾಮಾನ್ಯ ತಾಪಮಾನಕ್ಕೆ ಬಂದಾಗ ಮಾತ್ರ ಅದನ್ನು ಬಿಸಿ ಮಾಡಿ. ಇದರಿಂದ ಕೂಡ ಬಹಳಷ್ಟು ಗ್ಯಾಸ್ ಉಳಿತಾಯ ಮಾಡಬಹುದು.

# ಯಾವಾಗಲೂ ಅಡುಗೆ ಬೇಯಿಸುವಾಗ ಪಾತ್ರೆ ಮೇಲೆ ಪ್ಲೇಟ್ ಮುಚ್ಚಲು ಪ್ರಯತ್ನಿಸಿ,ಇದರಿಂದ ಆಹಾರ ಬೇಗನೆ ಬೇಯುತ್ತದೆ. ಇದರ ಜೊತೆಗೆ ಸಮಯ ಮತ್ತು ಗ್ಯಾಸ್ ಎರಡು ಉಳಿಯುತ್ತದೆ.

# ಟೀ-ಕಾಫಿ ಇತ್ಯಾದಿಗಳನ್ನು ತಯಾರಿಸಲು ಪದೇ ಪದೇ ನೀರನ್ನು ಕಾಯಿಸುವ ಅವಶ್ಯಕತೆಯಿಲ್ಲ. ಒಮ್ಮೆ ಬಿಸಿ ಮಾಡಿ ಮತ್ತು ಫ್ಲಾಸ್ಕ್ನಲ್ಲಿ ಇರಿಸಿದರೆ, ಇದರಿಂದ ಗ್ಯಾಸ್ ಉಳಿತಾಯವಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ- ಸರ್ಕಾರದಿಂದ ಹೊಸ ಸೌಲಭ್ಯ ಘೋಷಣೆ!